ಮನೆ ಅಡವಿಟ್ಟಾದ್ರೂ ಸರಿ ನನಗೆ ದುಡ್ಡು ಕೊಡಿ: ಪೋಷಕರಿಗೆ Gen Z ವಿದ್ಯಾರ್ಥಿನಿಯ ಡಿಮ್ಯಾಂಡ್, ನೆಟ್ಟಿಗರು ಗರಂ

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯ ಆಲೋಚನೆಗಳು ಮತ್ತು ವರ್ತನೆಗಳು ಹಿಂದಿನ ತಲೆಮಾರಿಗಿಂತ ಸಂಪೂರ್ಣ ಭಿನ್ನವಾಗಿವೆ ಎನ್ನುವ ವಿಷಯ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ಎಕ್ಸ್ ಖಾತೆಯಲ್ಲಿ ಮಿಲೇನಿಯಲ್ ಮಹಿಳೆಯೊಬ್ಬರು ತಮ್ಮ ಜೆನ್ ಝೀ ಕಸಿನ್‌ನ ದುಬಾರಿ ಬೇಡಿಕೆಗಳ ಬಗ್ಗೆ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕಾಲೇಜು ಶಿಕ್ಷಣಕ್ಕಾಗಿ ತಂದೆ-ತಾಯಿಯ ಬಳಿ ಆಕೆ ಇಟ್ಟಿರುವ ಡಿಮ್ಯಾಂಡ್‌ಗಳು ನೋಡುಗರನ್ನ ಬೆಚ್ಚಿಬೀಳಿಸುವಂತಿವೆ. ಶೀತಲ್ ಎಂಬುವವರು ಈ ವೈರಲ್ ಪೋಸ್ಟ್ ಹಂಚಿಕೊಂಡಿದ್ದು, ಯುವಜನತೆಯ ಹಣಕಾಸಿನ ಶಿಸ್ತಿನ ಕುರಿತು ಹೊಸ ಚರ್ಚೆ ಹುಟ್ಟುಹಾಕಿದೆ.

Gen Z Cousin s Outrageous College Demands Stun Millennial Spark Viral Debate on Gen Z Attitude

ಜೆನ್ ಝೀ ವಿದ್ಯಾರ್ಥಿನಿ ಡಿಮ್ಯಾಂಡ್: ದುಬಾರಿ ಕಾಲೇಜಿಗೆ ಪಟ್ಟು

ತನ್ನ ಕಸಿನ್‌ನ ವರ್ತನೆಯನ್ನ ವಿವರಿಸಿರುವ ಶೀತಲ್, "ಕೆಲವೊಮ್ಮೆ ಜೆನ್ ಝೀ ಪೀಳಿಗೆಯ ಕೆಲವರು ಅತಿಯಾದ ಸ್ವಾರ್ಥ ಹಾಗೂ ದುರಹಂಕಾರದ ವರ್ತನೆ ತೋರುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶೀತಲ್ ಅವರ ಕಸಿನ್ ಬೇರೊಂದು ನಗರದಲ್ಲಿರುವ ದುಬಾರಿ ಕಾಲೇಜಿಗೆ ಸೇರಲು ಹಠ ಹಿಡಿದಿದ್ದಳು. ಆಕೆಯ ಪೋಷಕರಿಗೆ ಅಷ್ಟು ದುಬಾರಿ ಶುಲ್ಕ ಭರಿಸಲು ಸಾಧ್ಯವಿರಲಿಲ್ಲ. ಅಲ್ಲದೆ, ಆಕೆ ಅವರ ಏಕೈಕ ಪುತ್ರಿಯಾಗಿದ್ದರಿಂದ ತಮ್ಮೊಂದಿಗೇ ಇರಲಿ ಎಂಬುದು ಪೋಷಕರ ಆಸೆಯಾಗಿತ್ತು.

ಆದರೆ, ಇದಕ್ಕೆ ಕಿವಿಗೊಡದ ಆ ಹುಡುಗಿ, "ನನಗೆ ಬೇಕಾದ ಕಾಲೇಜಿಗೆ ಕಳುಹಿಸದಿದ್ದರೆ ನಾನು ಓದುವುದನ್ನೇ ಬಿಡುತ್ತೇನೆ. ಬೇಕಿದ್ದರೆ ಮನೆಯನ್ನ ಅಡವಿಟ್ಟು ಸಾಲ ಮಾಡಿ, ಅಥವಾ ಅಮ್ಮ ಯಾವುದಾದರೂ ಕೆಲಸಕ್ಕೆ ಹೋಗಲಿ. ಅದರ ಬಗ್ಗೆ ನನಗೇನೂ ಚಿಂತೆಯಿಲ್ಲ" ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದ್ದಾಳೆ.

ಮಿಲೇನಿಯಲ್ ವೈರಲ್ ಪೋಸ್ಟ್: ಪಾರ್ಟಿಗೂ ಹಣ ಕೇಳಿದ ಯುವತಿ

ಆಕೆಯ ಬೇಡಿಕೆಗಳು ಕೇವಲ ಕಾಲೇಜು ಶುಲ್ಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲಂತೆ. ತಾನು ಬೇರೆ ಊರಿನಲ್ಲಿ ಕೇವಲ ಓದಲು ಮಾತ್ರ ಹೋಗುತ್ತಿಲ್ಲ, ಅಲ್ಲಿ ಸುತ್ತಾಡಿ ಜೀವನವನ್ನ ಆನಂದಿಸಬೇಕು. ಹಾಗಾಗಿ ಪ್ರತಿ ತಿಂಗಳು ನನಗೆ ಅಗತ್ಯವಿರುವಷ್ಟು ಹಣವನ್ನ ತಪ್ಪದೇ ಕಳುಹಿಸಬೇಕು ಎಂದು ಆಕೆ ತಂದೆ-ತಾಯಿಗೆ ತಾಕೀತು ಮಾಡಿದ್ದಳು.

ಮಗಳ ಹಠಕ್ಕೆ ಮಣಿದ ಪೋಷಕರು ಹೇಗೋ ಮಾಡಿ ಆಕೆಗೆ ಇಷ್ಟವಾದ ಕಾಲೇಜಿಗೆ ಸೇರಿಸಲು ಹಣ ಹೊಂದಿಸಿದರು. ಆದರೆ, ಅಲ್ಲಿಗೆ ಆಕೆಯ ಬೇಡಿಕೆ ಮುಗಿಯಲಿಲ್ಲ ನೋಡಿ. ಊರು ಬಿಟ್ಟು ಹೋಗುವ ಮುನ್ನ ತನ್ನ ಹಳೆಯ ಸ್ನೇಹಿತರಿಗೆ ಭರ್ಜರಿ ಫೇರ್‌ವೆಲ್ ಪಾರ್ಟಿ ಕೊಡಬೇಕು, ಅದಕ್ಕೂ ಹಣ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಳು.

ಇದನ್ನು ಕೇಳಿ ದಂಗಾದ ಶೀತಲ್, "ಒಬ್ಬ ಮಿಲೇನಿಯಲ್ ಆಗಿ ನಾನು ನನ್ನ ಪೋಷಕರ ಬಳಿ ಇಂತಹ ಬೇಡಿಕೆ ಇಡುವುದನ್ನ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.

ಪೋಷಕರಿಗೆ ಸಲಹೆ: ನೆಟ್ಟಿಗರ ತರಾಟೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕೆಯ ವರ್ತನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. "ಮಕ್ಕಳು ಇಷ್ಟು ಅಹಂಕಾರದಿಂದ ವರ್ತಿಸುತ್ತಿರುವುದಕ್ಕೆ ಪೋಷಕರ ಅತಿಯಾದ ಪ್ರೀತಿಯೇ ಕಾರಣ. ತಮ್ಮ ಸಾಮರ್ಥ್ಯ ಮೀರಿ ಮಕ್ಕಳ ಬೇಡಿಕೆ ಈಡೇರಿಸಲು ಹೋದರೆ ಹೀಗೆಯೇ ಆಗುತ್ತದೆ. ಎಳೆಯ ವಯಸ್ಸಿನಲ್ಲೇ ಮಕ್ಕಳಿಗೆ ಹಣಕಾಸಿನ ಮಿತಿಯ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ" ಎಂದು ಹಲವರು ಪೋಷಕರಿಗೆ ಸಲಹೆ ನೀಡಿದ್ದಾರೆ.

"ನಾನು ಕೂಡ ಒಬ್ಬ ಮಿಲೇನಿಯಲ್. ನನ್ನ ಪೋಷಕರಿಗೆ ನನ್ನ ಕಾಲೇಜು ಶುಲ್ಕ ಕಟ್ಟಲು ಸಾಧ್ಯವಾಗದಿದ್ದಾಗ, ನಾನು ಕಾಲ್ ಸೆಂಟರ್‌ನಲ್ಲಿ ನೈಟ್ ಶಿಫ್ಟ್ ಕೆಲಸ ಮಾಡಿ ನನ್ನ ಖರ್ಚು ನೋಡಿಕೊಂಡಿದ್ದೆ. 18 ವರ್ಷ ತುಂಬಿದ ಮೇಲೆ ಮಕ್ಕಳು ಸ್ವತಂತ್ರವಾಗಿ ದುಡಿಯುವುದನ್ನು ಕಲಿಯಬೇಕು" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲವರು ಎಲ್ಲಾ ಜೆನ್ ಝೀ ಮಕ್ಕಳೂ ಹೀಗಿರುವುದಿಲ್ಲ, ದುಡಿದು ಓದುವವರೂ ಇದ್ದಾರೆ ಎಂದು ಬೆಂಬಲಿಸಿದರೆ, ಬಹುಪಾಲು ಮಂದಿ ಆಕೆಯ ವರ್ತನೆಯನ್ನ ಅಹಂಕಾರದ ಪರಮಾವಧಿ ಎಂದು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+