GBA Property Auction: ಕೊನೆಗೂ ಆಸ್ತಿ ತೆರಿಗೆ ಕಟ್ಟದ 7000 ಆಸ್ತಿಗಳ ಹರಾಜು, ಮಾರಾಟವಾಗಿದ್ದೆಷ್ಟು?
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪಾಲಿಕೆವಾರು ಆಸ್ತಿ ತೆರಿಗೆ ಕಟ್ಟದ ಮನೆ, ವಾಣಿಜ್ಯ ಕಟ್ಟಡಗಳ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಐದೂ ಪಾಲಿಕೆ ವ್ಯಾಪ್ತಿಯಲ್ಲಿ ಸಾವಿರಾರು ಆಸ್ತಿಗಳಿಂದ ಒಟ್ಟು ನೂರಾರು ಕೋಟಿ ರೂಪಾಯಿ ತೆರಿಗೆ ಪಾವತಿಸುವುದು ಬಾಕಿ ಇದೆ. ಎಚ್ಚರಿಕೆ ಕೊಟ್ಟು ಸಾಕಾದ ಪ್ರಾಧಿಕಾರ ಇದೀಗ ತೆರಿಗೆ ಪಾವತಿಸದ ಸ್ವತ್ತುಗಳನ್ನು ಫೆಬ್ರವರಿ 21ರಂದು ಹರಾಜು ಹಾಕಿದೆ.
ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಹರಾಜು ಮಾಡಲಾಗುತ್ತದೆ. ಅಷ್ಟರೊಳಗೆ ತೆರಿಗೆ ಕಟ್ಟಲು ಸಹ ವಕಾಶ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸುಮಾರು 7,000 ಆಸ್ತಿಗಳಿಂದ 430 ಕೋಟಿ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗುವುದು ಬಾಕಿ ಇದೆ. ಈಗಾಗಲೇ ಹಲವು ಬಾರಿ ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಆದರೆ ಪಾವತಿಸದವರ ವಿರುದ್ಧ ಈ ಹರಾಜು ಕಠಿಣ ಕ್ರಮಕ್ಕೆ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಷ್ಟು ಮಾತ್ರವಲ್ಲದೇ ಬಾಕಿ ಇರುವ ಆಸ್ತಿ ಮಾಲೀಕರಿಗೆ ನಿರಂತರ SMS ಸಂದೇಶ, IVRS ಕರೆಗಳ ಮೂಲಕ ಜ್ಞಾಪಿಸಲಾಗುತ್ತಿದೆ. ನಿರಂತರ ಫಾಲೋ ಅಪ್ ಮಾಡಿದರೂ ಕರೆಗಳನ್ನು ನಿರ್ಲಕ್ಷಿಸಿದ್ದಾರೆ. ಪಾವತಿ ಮೊಂಡುತನ ಪ್ರದರ್ಶಿಸಿದ್ದಾರೆ. ಬಳಿಕ ಆಸ್ತಿಗಳ ಜಪ್ತಿ ಆದೇಶಗಳನ್ನು ಹೊರಡಿಸಲಾಯಿತು. ಆದರೂ ಸ್ಪಂದಿಸದ ಮಾಲೀಕರ ಆಸ್ತಿಗಳನ್ನು ಹರಾಜಿಗೆ ಇಡಲಾಗಿದೆ.
7000 ಆಸ್ತಿಗಳ ಹರಾಜು ಇಟ್ಟ ಜಿಬಿಎ
ಈ ಹಿಂದೆ ಹೊರಡಿಸಿದ್ದ ಜಪ್ತಿ ಆದೇಶ ನಂತರ ಸುಮಾರು 60 ದಿನಗಳಿಗಿಂತ ಹೆಚ್ಚು ಅವಧಿ ಕಳೆದರೂ ಪಾವತಿ ಆಗದ ಕಾರಣ, ಕೊನೆಯ ಕ್ರಮವಾಗಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024 ಅನ್ವಯ, ಮೇಲ್ಕಂಡ 7000 ಆಸ್ತಿಗಳನ್ನು ಹರಾಜಿಗೆ ಇಟ್ಟಿದೆ. ಹರಾಜು ನಡೆಯುವ ಮೊದಲು ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ಪಾವತಿಸುವ ಅವಕಾಶ ಇದೆ. ಪಾವತಿ ಮಾಡಿದಲ್ಲಿ ಹರಾಜು ರದ್ದುಪಡಿಸಲಾಗುತ್ತದೆ.
ಹರಾಜಿನಲ್ಲಿ 07 ಮಾರಾಟ, ಪ್ರಕ್ರಿಯೆ ಮುಂದುವರಿಕೆ
ಆದರೆ ಹಲವರು ಇನ್ನೂ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಾಕಿ ಇರುವ ಪ್ರಕರಣಗಳಿಂದ ಪ್ರಾರಂಭಿಸಿ, ವಲಯಗಳ ಜಂಟಿ ಆಯುಕ್ತರು ಫೆ 21ರಂದು ಹರಾಜು ಪ್ರಕ್ರಿಯೆ ನಡೆಸಿದರು. ಈ ಹರಾಜಿನಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಒಟ್ಟು ಆಸ್ತಿಗಳ ಪೈಕಿ ಉತ್ತರ ನಗರ ಪಾಲಿಕೆಯಲ್ಲಿ 2 ಮತ್ತು ಪೂರ್ವ ನಗರ ಪಾಲಿಕೆಯಲ್ಲಿ 5 ಆಸ್ತಿಗಳು ಮಾರಾಟವಾಗಿವೆ.
ಹರಾಜು ಮಾರಾಟ ಪ್ರಕ್ರಿಯೆ ನಿಯಮಿತವಾಗಿ ಮುಂದುವರಿಯಲಿದೆ. ಹರಾಜು ನೋಟಿಸ್ ಪಡೆದಿರುವ ಎಲ್ಲಾ ಬಾಕಿದಾರರು ತಮ್ಮ ಬಾಕಿ ತೆರಿಗೆಯನ್ನು ತಕ್ಷಣ ಪಾವತಿಸಲು ವಿನಂತಿಸಲಾಗಿದೆ. ಒಂದು ವೇಳೆ ಈಗಲೇ ವಿಳಂಬ ಮಾಡಿದರೆ ನಿಮ್ಮ ಆಸ್ತಿಗಳು ಮಾರಾಟವಾಗಲಿವೆ ಎಂದು ಜಿಬಿಎ ಕೊನೆ ಬಾರಿಗೆ ಎಚ್ಚರಿಸಿತು.
-
GBA: ಜಿಬಿಎ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ಮಳೆಯ ಪೂರ್ವ ಸಿದ್ಧತೆಗೆ ಕ್ರಮ: ಮಹೇಶ್ವರ್ ರಾವ್ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ












Click it and Unblock the Notifications