'ಗೌರಿ ಹತ್ಯೆಯಾಗಿ 3 ತಿಂಗಳಾದರೂ ಹಂತಕರ ಸುಳಿವಿಲ್ಲ'
ಬೆಂಗಳೂರು, ಡಿಸೆಂಬರ್ 05: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ 3 ತಿಂಗಳಾದರೂ ಹಂತಕರ ಸುಳಿವು ಕೂಡಾ ಸರಿಯಾಗಿ ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ಕುಂಟುತ್ತಾ ಸಾಗಿದೆ. ನ್ಯಾಯ ದೊರಕಿಸಿಕೊಡಿ ಎಂದು ಮೌರ್ಯ ವೃತ್ತದ ಬಳಿ ಗೌರಿ ಲಂಕೇಶ್ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದರು.
ಸೆಪ್ಟಂಬರ್ 5 ರಂದು ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ವಿಶೇಷ ತನಿಖಾ ದಳ(ಎಸ್.ಐ.ಟಿ) ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ, ಹಲವರನ್ನು ವಿಚಾರಣೆ ಮಾಡಿದರೂ ಹಂತಕರ ಸುಳಿವು ಮಾತ್ರ ಪತ್ತೆಯಾಗಿಲ್ಲ. ಹೊರ ರಾಜ್ಯಗಳಿಗೂ ತನಿಖಾ ತಂಡ ತೆರಳಿ ಮಾಹಿತಿ ಕಲೆ ಹಾಕಿತ್ತು.

'ಹಂತಕರ ಸುಳಿವು ಸಿಕ್ಕಿದೆ, ಶೀಘ್ರದಲ್ಲೇ ಬಂಧಿಸಲಾಗುವುದು' ಎಂದು ಗೃಹ ಸಚಿವರು ಎಂದು ಹೇಳಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೌರಿ ಅವರ ಸೋದರಿ ಕವಿತಾ ಅವರು ತಮ್ಮ ಅಳಲು ತೋಡಿಕೊಂಡರು.












Click it and Unblock the Notifications