ಗೌರಿ ಹತ್ಯೆ: ಶಂಕಿತರ ರೇಖಾಚಿತ್ರದ ಬೊಟ್ಟು, ಪ್ರಭಾಕರ್ ರ ಬಿಕ್ಕಟ್ಟು
ಬೆಂಗಳೂರು, ಅಕ್ಟೋಬರ್ 16: ಅವರ ಹೆಸರು ಪ್ರಭಾಕರ್. ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಬಿಡುಗಡೆ ಮಾಡಿದ ಶಂಕಿತರ ರೇಖಾ ಚಿತ್ರದಲ್ಲಿ ಒಂದು ಪ್ರಭಾಕರ್ ರನ್ನು ಹೋಲುತ್ತಿದೆ ಎಂಬುದು ವಿಪರೀತ ಚರ್ಚೆ ಆಗುತ್ತಿದೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರಭಾಕರ್, ನನಗೆ ಅನೇಕರಿಂದ ಕರೆಗಳು ಬರುತ್ತಿವೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ತೇಜೋವಧೆಗೆ ಮಾಡಿರುವ ಪಿತೂರಿ ಎಂದು ಹೇಳಿಕೊಂಡಿದ್ದಾರೆ.

ಪ್ರಭಾಕರ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದರ ಪೂರ್ಣ ಒಕ್ಕಣೆ ಹೀಗಿದೆ.
#ಬಿಜೆಪಿಮುಖಂಡನಿಗೆ# #ತಂದಟ್ಟ #ತಿಲಕ #ಸಂಕಷ್ಟ
ಎಂಬ #ಬಿಟಿವಿ# ವರದಿಯ ಬಗ್ಗೆ ಜನತೆಯಲ್ಲಿ ನನದೊಂದು ಮನವಿ ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ರೇಖಾ ಚಿತ್ರ ಬಿಡುಗಡೆ ಮಾಡಿರುವುದರಲ್ಲಿ ತಿಲಕ ಇರುವ ಭಾವಚಿತ್ರದ ಬಗ್ಗೆ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು ಇದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ & ಮಾಧ್ಯಮ ಮಿತ್ರರಿಗೆ ಈ ವಿಚಾರದಲ್ಲಿ ನಾನು ಯಾವುದೇ ಹೇಳಿಕೆ ನೀಡಿರುವುದಿಲ್ಲ & ನನಗೂ ಇದಕ್ಕೂ ಸಂಬಂಧ ಇರುವುದಿಲ್ಲ.

ನನಗೆ ಇಂದು ಮದ್ಯಾಹ್ನ 3 ಗಂಟಗೆ ಟೈಮ್ಸ್ ಆಫ್ ಇಂಡಿಯಾ ಇಂದ ಎಂದು ಪರಿಚಯ ಮಾಡಿಕೊಂಡ ಶಿವಕುಮಾರ್ ಎಂಬಾತ ಈ ನಂಬರ್ +919704334565 ಇಂದ ಎಂಎಸ್ ರಾಘವೇಂದ್ರ ಅವರು ನನಗೆ ನಿಮ್ಮ ನಂಬರ್ ಕೊಟ್ಟರು ಎಂದು ಹೇಳುತ್ತಾ ಮಾತು ಆರಂಭಿಸಿದ ಶಿವಕುಮಾರ್ ತಿಲಕ ಇರುವ ಫೋಟೋ ಬಗ್ಗೆ ಚರ್ಚಿಸಿದರು.
ಅದಕ್ಕೂ ನನಗೂ ಇದಕ್ಕೂ ಸಂಬಂಧಪಡದ ವಿಚಾರವಾದ್ದರಿಂದ ನಾನು ಏನು ಹೇಳುವುದಿಲ್ಲ ಎಂದೆ. ನನ್ನದಲ್ಲದೇ ಇರುವ ಈ ವಿಚಾರದ ಬಗ್ಗೆ ಕೇಳಿ ಅಕ್ಷರಶಃ ಮಾನಸಿಕವಾಗಿ ಕುಗಿ ಹೋಗಿದ್ದೇನೆ. ಕೆಲವು ಮಾಧ್ಯಮಗಳಲ್ಲಿ ಬಿಟಿವಿಯಲ್ಲಿ ಸುದ್ದಿ ಬಿತ್ತರಗೊಂಡು ಸ್ಪಷ್ಟ ಮಾಡಿರುವ btv ಗೆ ವಂದನೆಗಳು ತಿಳಿಸುತ್ತಾ, ಇಂತಹ ಊಹಾ ಪೋಹಗಳಿಗೆ ಜನತೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ.
ನಿಮ್ಮ #ಪ್ರಭಾಕರಮ್ಯಾಸನಾಯಕ#












Click it and Unblock the Notifications