ಬಿಬಿಎಂಪಿ ಕಸದ ಲಾರಿಗಳ ವಿರುದ್ದ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ
ಬೆಂಗಳೂರು, ಏಪ್ರಿಲ್, 20: ಬೆಂಗಳೂರನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಕಸವನ್ನು ಸಾಗಿಸುವ ವಾಹನಗಳು. ಆದರೆ ಇತ್ತೀಚೆಗೆ ಕಸದ ಲಾರಿಗಳು ಮೂರು ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿದ್ದವು. ಚಾಲಕರ ಅಜಾಗರೂಕ ಚಾಲನೆ, ವಾಹನದ ಸದೃಢತೆ , ಇನ್ಸುರೆನ್ಸ್‌ಗಳ ಬಗ್ಗೆ ಹಲವು ಅನುಮಾನಗಳು ಸಹ ಮೂಡಿದ್ದವು ಇದರಿಂದ ಬೆಂಗಳೂರು ಸಂಚಾರಿ ಪೊಲೀಸರು ಘನತ್ಯಾಜ್ಯ ವಿಲೇವಾರಿ ವಾಹನದ ವಿರುದ್ದ ವಿಶೇಷ ಕಾರ್ಯಾಚರಣೆಯನ್ನು ಮಾಡಿದ್ದಾರೆ.
ನಗರ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರ ಸ್ಪೆಷಲ್ ಡ್ರೈವ್ ಮಾಡಿದರು. ಕಸದ ಲಾರಿಗಳ ತಪಾಸಣೆ ನಡೆಸಿದರು. ಒಟ್ಟು 252 ವಾಹನಗಳ ಪರಿಶೀಲಿಸಿದರು. 258 ವಾಹನಗಳ ಪೈಕಿ 82 ವಾಹನಗಳು ಟ್ರಾಫಿಕ್ ನಿಯಮಗಳ ಉಲ್ಲಂಘಿಸಿರುವುದು ಕಂಡುಬಂತು. ನಂಬರ್ ಪ್ಲೇಟ್ ಸರಿಯಾಗಿಲ್ಲದಿರುವುದು, ಸಿಗ್ನಲ್ ಜಂಪ್, ಸೇರಿ ಹಲವು ನಿಯಮಗಳ ಉಲ್ಲಂಘಿಸಿ ದಂಡ ಹಾಕಿದರು. ಕುಡಿದು ಕಸದ ಲಾರಿ ಓಡಿಸುತ್ತಿದ್ದ ಚಾಲಕನನ್ನು ಹಿಡಿದು ಲಾರಿ ಸೀಜ್ ಮಾಡಿಲಾಗಿದೆ.
ಇಂದು ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಫಿಟ್ನೆಸ್ ಸರ್ಟಿಫೀಕೇಟ್, ಲೈಸೆನ್ಸ್ ಇರದ 9 ವಾಹನಗಳನ್ನು ಅಮಾನತ್ತು ಮಾಡಲಾಗಿದೆ. ಪಶ್ಚಿಮ ವಿಭಾಗದಲ್ಲಿ ತಪಾಸಣೆ ಮಾಡಲಾದ 258 ವಾಹನಗಳ ಪೈಕಿ ಮೂರು ವಾಹನ ಜಪ್ತಿ ಮಾಡಿಕೊಂಡು 82 ಪ್ರಕರಣ ದಾಖಲಾಗಿದೆ. ಅದೇ ರೀತಿ ಉತ್ತರ ವಿಭಾಗದಲ್ಲಿ 41 ವಾಹನ ತಪಾಸಣೆ ಮಾಡಿ 4 ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇನ್ನು ಪೂರ್ವ ವಿಭಾಗದಲ್ಲಿ 353 ವಾಹನಗಳನ್ನ ಚೆಕ್ ಮಾಡಿ 25 ಪ್ರಕರಣಗಳನ್ನ ದಾಖಲಿಸಲಾಗಿದೆ. ಒಟ್ಟು 652 ವಾಹನಗಳ ತಪಾಸಣೆ, 9 ವಾಹನಗಳು ಜಪ್ತಿ ಮಾಡಿಕೊಂಡಿದ್ದು 307 ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.

ಕಸದ ಲಾರಿಗಳ ತಪಾಸಣೆ ಮಾಡುವಂತೆ ಕೋರಿಕೆ
ಬಿಬಿಎಂಪಿ ಗಾರ್ಬೇಜ್ ವಾಹನಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಸಂಚಾರವನ್ನು ನಡೆಸುತ್ತಿದ್ದು, ಚಾಲಕರು ಅಜಾಗರೂಕರಾಗಿದ್ದಾರೆ. ಇನ್ನು ಫಿಟ್ನೆಸ್ ಸರ್ಟಿಫಿಕೇಟುಗಳನ್ನು ಪಡೆದಿರಲಿಲ್ಲ. ಹೀಗೆ ಹಲವು ನಿಯಮವನ್ನು ಪಾಲಿಸದೇ ಇರುವುದು ಮೇಲ್ನೋಟಕ್ಕೆ ತಿಳಿದು ಬಂದಿತ್ತು. ಹೀಗಾಗಿ ನಿನ್ನೆಯಷ್ಟೇ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವಿಶೇಷ ಕಾರ್ಯಾಚರಣೆ ನಡೆುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಡಾ.ಬಿ ಆರ್ ರವಿಕಾಂತೇಗೌಡರವರಿಗೆ ಕೇಳಿಕೊಂಡಿದ್ದರು.

ಬಿಬಿಎಂಪಿ ಕಸದ ಲಾರಿಯ ವಿರುದ್ಧ ವಿಶೇಷ ಕಾರ್ಯಾಚರಣೆ ಬಳಿಕ ಮಾತನಾಡಿದ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಡಾ. ಬಿ ಆರ್ ರವಿಕಾಂತೇಗೌಡರವರು ಬಿಬಿಎಂಪಿ ಕಸದ ಲಾರಿಗಳು ಇತ್ತೀಚೆಗೆ ಹೆಚ್ಚು ಅಪಘಾತವನ್ನು ಎಸಗುತ್ತಿದ್ದು ನಿನ್ನೆ ಬಿಬಿಎಂಪಿ ಅಧಿಕಾರಿಗಳ ಜೊತೆ ಮಾತನಾಡಿ ಇಂದು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ವಿಶೇಷ ಕಾರ್ಯಾಚರಣೆಯನ್ನು ನಡೆಸಿ ಚಾಲಕರು ನಿಯಮ ಬದ್ಧವಾಗಿ ಸಂಚಾರ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲಾಯ್ತು. ಸಂಚಾರ ನಿಯಮ ಉಲ್ಲಂಘನೆ, ದೋಷಪೂರಿತ ನಂಬರ್ ಫಲಕ, ವಾಹನದ ಕಾರ್ಯದಕ್ಷತೆ ಪ್ರಮಾಣ ಪತ್ರ ಇಲ್ಲದಿರುವು ಗಮನಿಸಿ ಕೇಸ್ ದಾಖಲಿಸಲಾಗಿದೆ. ಇನ್ನು ಕುಡಿದು ವಾಹನ ಚಾಲನೆ ಮಾಡುತ್ತಿರುವರ ವಾಹನವನ್ನು ಸೀಜ್ ಮಾಡಿ ಕ್ರಮ ಕೈಗೊಳ್ಳಲಾದಿದೆ ಎಂದು ತಿಳಿಸಿದರು.












Click it and Unblock the Notifications