• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಾಂಜಾ ತುಳಸಿಗೆ ಸಮಾನ: ಕನ್ನಡ ನಟಿಯ ವಿರುದ್ದ ಬಿತ್ತು ಎಫ್ಐಆರ್

|

ಬೆಂಗಳೂರು, ಸೆ 4: ಚಂದನವನದಲ್ಲಿ ಡ್ರಗ್ಸ್ ಪ್ರಕರಣ ಹೊಸಹೊಸ ಆಯಾಮ ಪಡೆಯುತ್ತಿರುವ ಈ ಹೊತ್ತಿನಲ್ಲಿ, ನಟಿ ನಿವೇದಿತಾ, ತುಳಸಿಯನ್ನು ಗಾಂಜಾಗೆ ಹೋಲಿಸಿದ್ದಾರೆ.

   Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ?| Oneindia Kannada Kannada

   ಮದ್ಯ, ಮಾದಕ ವಸ್ತುಗಳು ಹಾನಿಕಾರಕ ಹೌದೋ? ಅಲ್ಲವೋ?

   ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ದೀಪಕ್ ಎನ್ನುವವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಟಿಯ ವಿರುದ್ದ ಎಫ್ಐಆರ್ ದಾಖಲಾಗಿದೆ. ಕೆಲವು ದಿನಗಳ ಹಿಂದೆ, "ಗಾಂಜಾ ಬಳಕೆಯನ್ನು ಕಾನೂನುಬದ್ದಗೊಳಿಸಿ" ಎನ್ನುವ ಹೇಳಿಕೆಯನ್ನು ನೀಡಿ ನಟ ರಾಕೇಶ್ ಅಡಿಗ ಕೆಂಗಣ್ಣಿಗೆ ಗುರಿಯಾಗಿದ್ದರು.

   ರಾಗಿಣಿ ವಿಚಾರಣೆಗೆ ಯಾರ ಒತ್ತಡವಿದೆ? ಸಿ.ಟಿ. ರವಿಗೆ ಪ್ರಶ್ನೆ!

   "ಗಾಂಜಾ ಔಷದಿಯ ಗುಣವುಳ್ಳ ಸಸಿಯಾಗಿದೆ. ತುಳಸಿಯನ್ನು ನಾವು ಬಳಸುವ ರೀತಿಯಲ್ಲೇ ಗಾಂಜಾವನ್ನೂ ಬಳಸಬೇಕು"ಎನ್ನುವ ಹೇಳಿಕೆಯನ್ನು ನಿವೇದಿತಾ ನೀಡಿದ್ದರು.

   "ನಟಿಯ ಹೇಳಿಕೆಯಿಂದ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಇದರೆ ಜೊತೆಗೆ, ತುಳಸಿಯ ಹೆಸರನ್ನು ವಿನಾಕಾರಣ ಬಳಸಿ, ಧಾರ್ಮಿಕ ಭಾವನೆಗೆ ನಿವೇದಿತಾ ಧಕ್ಕೆ ತಂದಿದ್ದಾರೆ" ಎಂದು ದೀಪಕ್ ದೂರಿದ್ದಾರೆ.

   ಸಿಸಿಬಿ ಪೊಲೀಸರಿಂದ ಸತತ ಏಳು ಗಂಟೆ ವಿಚಾರಣೆಗೆ ಒಳಪಟ್ಟ ನಂತರ ಚಂದನವನದ ನಟಿ ರಾಗಿಣಿ ದ್ವಿವೇದಿಯ ಬಂಧನವಾಗಿದೆ. ನಟಿ ರಾಗಿಣಿ ದ್ವಿವೇದಿ ಆಪ್ತರಾದ ರವಿಶಂಕರ್‌ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅವರು ಈಗಾಗಲೇ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ. ಅವರ ವಿಚಾರಣೆ ವೇಳೆ ಪಡೆದ ಮಾಹಿತಿಯಂತೆ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಲಾಗಿತ್ತು.

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   "ಡ್ರಗ್ಸ್ ಮತ್ತು ಗಾಂಜಾಗೂ ಹೋಲಿಕೆ ಮಾಡಬಾರದು. ನೂರಾರು ರೋಗವನ್ನು ಗುಣಪಡಿಸಲು ಗಾಂಜಾ ಸೊಪ್ಪನ್ನು ಬಳಸಲಾಗುತ್ತದೆ. ಅನಾದಿ ಕಾಲದಿಂದಲೂ ಗಾಂಜಾ ಬಗ್ರೆ ಪ್ರಸ್ತಾವನೆಯಿದೆ"ಎಂದು ನಟ ರಾಕೇಶ್ ಅಡಿಗ ಹೇಳಿದ್ದರು.

   English summary
   Ganja Is As Good As Tulsi: FIR Registered Against Kannada Actress Niveditha.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X