ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ, ವಿಡಿಯೋ ತೆಗೆದ ಪಾಪಿಗಳು

ಬೆಂಗಳೂರು, ಡಿಸೆಂಬರ್ 15: 26 ವರ್ಷದ ಮಹಿಳೆಯೊಬ್ಬರ ಮೇಲೆ ಆರು ಯುವಕರು ಅತ್ಯಾಚಾರ ಎಸಗಿ, ಆಕೆಯನ್ನು ಬೆತ್ತಲೆಯಾಗಿ ಬಿಸಾಡಿದ ಹೀನಾತಿಹೀನ ಘಟನೆ ರಾಜಧಾನಿ ಬೆಂಗಳೂರಿನ ಆನೇಕಲ್ ನಲ್ಲಿ ನ.23 ರಂದೇ ನಡೆದಿದ್ದು, ಇಂದು(ಡಿ.15) ಬೆಳಕಿಗೆ ಬಂದಿದೆ.

ಸಂಜೆಯ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ಅವರ ಮೇಲೆ ದಾಳಿ ನಡೆಸಿದ ಆರು ಪುಂಡರು ಆಕೆಗೆ ನೀಡಿದ ಚಿತ್ರಹಿಂಸೆಯನ್ನು ಪೊಲೀಸರ ಬಳಿ ಹೇಳಿಕೊಳ್ಳುವಾಗ ಆಕೆಯ ಮುಖ ಕಿವುಚಿಕೊಳ್ಳುತ್ತಿತ್ತು. ತನಗೆ ಕಲ್ಲಿನಿಂದ ಹೊಡೆದು, ನಾನು ನೋವಿನಿಂದ ಕಿರುಚುತ್ತಿದ್ದಾಗ ಅದನ್ನು ವಿಡಿಯೋ ಮಾಡಿಕೊಂಡು, ಒಬ್ಬರಾದ ನಂತರ ಒಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

Gang Rape in Anekal in Bengaluru by 6 men

ಅತ್ಯಾಚಾರವಾದ 36 ಗಂಟೆಗಳ ಕಾಲ ರಸ್ತೆಯಲ್ಲೇ ಬಿದ್ದಿದ್ದ ಆಕೆ ಒಂದು ಸ್ವಲ್ಪವೂ ನಡೆದಾಡುವುದಕ್ಕೆ ಸಾಧ್ಯವಿಲ್ಲದೆ ಬೆತ್ತಲಾಗಿ ಬಿದ್ದಿದ್ದರು. ನಂತರ ತೆವಳಿಕೊಂಡು ಬಂದು ಕಸದಬುಟ್ಟಿಯೊಂದರಲ್ಲಿದ್ದ ಹರಿದ ಶರ್ಟ್ ಅನ್ನು ಹಾಕಿಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದರು.

ಭೂಕಂಪವೊಂದರಲ್ಲಿ ತಮ್ಮವರನ್ನೆಲ್ಲ ಕಳೆದುಕೊಂಡ ಈ ಮಹಿಳೆ ಬೆಂಗಳೂರಿನ ಹೊಟೇಲ್ ವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತ ಒಂಟಿಯಾಗಿ ಬದುಕುತ್ತಿದ್ದಾರೆ.

ಇದೀಗ ಘಟನೆಯ ಕುರಿತು ಆಕೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಅತ್ಯಾಚಾರಿಗಳ ಪತ್ತೆಗೆ ಬಲೆಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+