ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ವಿಡಿಯೋ ಮಾಡಿ ಬೆಂಗಳೂರಿನ ಗೃಹಿಣಿಯ ಬ್ಲ್ಯಾಕ್ ಮೇಲ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ವ್ಯಾಪಾರಿಯೊಬ್ಬರ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಾ, ಹದಿನೆಂಟು ತಿಂಗಳಲ್ಲಿ ಅರವತ್ತು ಲಕ್ಷ ರುಪಾಯಿ ತನಕ ಈ ವರೆಗೆ ವಸೂಲಿ ಮಾಡಿರುವ ಆರು ಮಂದಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ದೂರು ನೀಡಿದವರು ರಾಜಾಜಿನಗರ ನಿವಾಸಿ. ಬ್ಲ್ಯಾಕ್ ಮೇಲ್ ಮಾಡಿದ ಆರು ಮಂದಿ ಪೈಕಿ ಒಬ್ಬ ಮನೆಗೆಲಸದಾಕೆ ಕೂಡ ಇದ್ದಾಳೆ.

ಮಹಿಳೆಯ ಮಾರ್ಫ್ ಮಾಡಿದ ಫೋಟೋಗಳನ್ನು ಒಳಗೊಂಡಂತೆ ಅಶ್ಲೀಲ ವಿಡಿಯೋ ತೋರಿಸಿ, 2016 ಹಾಗೂ 2018ರ ಮಧ್ಯೆ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ, ಸಂತ್ರಸ್ತೆಯ ಮಗಳು, ಎಂಬಿಬಿಎಸ್ ವಿದ್ಯಾರ್ಥಿನಿ ಮೇಲೆ ಕೂಡ ದೌರ್ಜನ್ಯ ಎಸಗಿ, ಹಣಕ್ಕಾಗಿ ಒತ್ತಾಯ ಮಾಡಿದ್ದಾರೆ.

ಒಂದು ಕೋಟಿ ರೂ.ಬೇಡಿಕೆ ಇಟ್ಟು, ಪತಿಗೇ ಕೊಲೆ ಬೆದರಿಕೆ ಹಾಕಿದ ಪತ್ನಿ!ಒಂದು ಕೋಟಿ ರೂ.ಬೇಡಿಕೆ ಇಟ್ಟು, ಪತಿಗೇ ಕೊಲೆ ಬೆದರಿಕೆ ಹಾಕಿದ ಪತ್ನಿ!

ವ್ಯಾಪಾರಿಯ ಪತ್ನಿ 2016ರಲ್ಲಿ ಪ್ರಕಾಶ್ ನಗರದ ಲಕ್ಷ್ಮಿ ಎಂಬಾಕೆಯನ್ನು ಮನೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆ ನಂತರ ಆಕೆಯ ಸ್ನೇಹಿತೆ ಪವಿತ್ರಾ ಮತ್ತು ಪವಿತ್ರಾಳ ಗಂಡ ಪ್ರಶಾಂತ್ ಒಟ್ಟಾಗಿ, ತಮ್ಮೊಂದಿಗೆ ಮೂವರನ್ನು ಜತೆ ಮಾಡಿಕೊಂಡು ಹಣ ವಸೂಲಿ ಆರಂಭಿಸಿದ್ದಾರೆ.

Gang blackmails Bengaluru homemaker with objectionable video, extorts Rs 60 lakh

ದೂರಿನ ಪ್ರಕಾರ, ಗೃಹಿಣಿಯ ಫೋಟೋಗಳು ಮತ್ತು ವಿಡಿಯೋ ಬಳಸಿ, ಅಶ್ಲೀಲ ವಿಡಿಯೋ ಸೃಷ್ಟಿಸಲಾಗಿದೆ. ಅದನ್ನು ತೋರಿಸಿ, ಹಣ ಕೊಡಬೇಕು. ಇಲ್ಲದಿದ್ದರೆ ವೆಬ್ ಸೈಟ್ ಗಳಿಗೆ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.

ಆ ಗೃಹಿಣಿ ತನ್ನ ಆಭರಣಗಳನ್ನು ಅಡವಿಟ್ಟು ಈ ಗುಂಪಿಗೆ ಹಣ ಕೊಟ್ಟಿದ್ದಾರೆ. ಆಕೆ ಒಬ್ಬರೇ ಇದ್ದಾಗ ಮನೆಗೇ ಭೇಟಿ ನೀಡಲು ಈ ತಂಡ ಆರಂಭ ಮಾಡಿದೆ. ಜತೆಗೆ ಅವರ ಮಗಳ ಕಾಲೇಜಿನ ಬಳಿಗೂ ಹೋಗಿದೆ. "ನಿಮ್ಮ ಅಮ್ಮನಿಗೆ ಹೇಳಿ, ಲಕ್ಷ್ಮಿ ಹತ್ತಿರ ದುಡ್ಡು ಕೊಡಿಸು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಧಮಕಿ ಹಾಕಿದೆ.

ಬ್ಲ್ಯಾಕ್‌ಮೇಲ್‌ಗೆ ಹೆದರಿ ಆತ್ಮಹತ್ಯೆ: ಯುವಕ ಸಾವು, ಯುವತಿ ಸ್ಥಿತಿ ಗಂಭೀರ ಬ್ಲ್ಯಾಕ್‌ಮೇಲ್‌ಗೆ ಹೆದರಿ ಆತ್ಮಹತ್ಯೆ: ಯುವಕ ಸಾವು, ಯುವತಿ ಸ್ಥಿತಿ ಗಂಭೀರ

ಬಹಳ ದೊಡ್ಡ ಮೊತ್ತವೇ ಈ ತಂಡವು ವಸೂಲಿ ಮಾಡಿದ ಮೇಲೆ ಆ ಗೃಹಿಣಿಗೆ ಇದು ಇಲ್ಲಿಗೆ ಮುಗಿಯಲ್ಲ ಎನಿಸಿ, ತನ್ನ ಪತಿಗೆ ವಿಷಯ ತಿಳಿಸಲು ನಿರ್ಧರಿಸಿದ್ದಾರೆ. ಕುಟುಂಬದ ಇತರ ಸದಸ್ಯರ ಜತೆಗೆ ಮಾತನಾಡಿ, ಸಿಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲಿಂದ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ವರ್ಗಾವಣೆಯಾಗಿದೆ.

ತಲೆ ತಪ್ಪಿಸಿಕೊಂಡಿರುವ ಆರೋಪಿಗಳ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು ಮತ್ತು ಹಫ್ತಾ ವಸೂಲಿ ದೂರು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Bengaluru, Rajajinagar businessman’s wife has approached police alleging that a six-member gang, including domestic help, blackmailed her with an objectionable video containing her morphed images and extorted over Rs 60 lakh from her over 18 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X