Bengaluru: ಈವರೆಗೆ ವಿಸರ್ಜನೆಗೊಂಡ ಮಣ್ಣಿನ-ಪಿಓಪಿ 'ಗಣೇಶ ಮೂರ್ತಿ'ಗಳೆಷ್ಟು? ವಿವರ
ಬೆಂಗಳೂರು, ಸೆಪ್ಟಂಬರ್ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿ ನಡೆದಿದೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡೇ ದಿನದಲ್ಲಿ 1.5 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆ ಆಗಿವೆ. ಕಳವಳಕಾರಿ ಸಂಗತಿ ಎಂದರೆ ಸರ್ಕಾರ ಪರಿಸರ ಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಮ ಕೈಗೊಂಡರು ಸಹಿತ ಅಧಿಕ ಸಂಖ್ಯೆಯಲ್ಲಿ POP ಗಣೇಶಗಳು ಪ್ರತಿಷ್ಠಾಪನೆ ಆಗಿವೆ.
ಹಾಗಾದರೆ ಯಾವ ವಾರ್ಡ್‌ಗಳಲ್ಲಿ ಎಷ್ಟೆಷ್ಟು ಮಣ್ಣಿನ ಗಣೇಶ ಮೂರ್ತಿಗಳು ಮತ್ತು ಪಿಓಪಿ ಗಣೇಶ ಮೂರ್ತಿಗಳು ಬಿಬಿಎಂಪಿ ನಿರ್ಮಿಸಿದ ತಾತ್ಕಾಲಿಕ ಕಲ್ಯಾಣಿ/ಹೊಂಡ, ಮೊಬೈಲ್ ಟ್ಯಾಂಕರ್/ಕೆರೆಗಳಲ್ಲಿ ವಿಸರ್ಜನೆ ಆಗಿವೆ ಎಂದು ತಿಳಿಯೋಣ.
ಪಿಓಪಿ ಮತ್ತು ಮಣ್ಣಿನ ಮೂರ್ತಿಗಳು ಸೇರಿ ಪ್ರತಿಷ್ಠಾಪನೆ ದಿನ ಸೋಮವಾರ (ಸೆ.18) ಒಟ್ಟು 1,53,965 ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ. ಮಂಗಳವಾರ ಸೆ.19ರಂದು ಒಟ್ಟು 28,347 ಗಣಪಗಳು ವಿಸರ್ಜನೆಗೊಂಡಿವೆ.

ವಲಯವಾರು ವಿಸರ್ಜನೆ ಪಟ್ಟಿ (ಸೋಮವಾರ)
* ಪೂರ್ವ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 24,990
POP ಗಣೇಶ ಮೂರ್ತಿಗಳು: 206
* ಪಶ್ಚಿಮ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 35,887
POP ಗಣೇಶ ಮೂರ್ತಿಗಳು: 134
* ದಕ್ಷಿಣ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 50,848
POP ಗಣೇಶ ಮೂರ್ತಿಗಳು: 8,992
* ಬೊಮ್ಮನಹಳ್ಳಿ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 7,291
POP ಗಣೇಶ ಮೂರ್ತಿಗಳು: 147
* ದಾಸರಹಳ್ಳಿ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 1,138
POP ಗಣೇಶ ಮೂರ್ತಿಗಳು: 53

* ಮಹದೇವಪುರ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 5,860
POP ಗಣೇಶ ಮೂರ್ತಿಗಳು: 18
* ಆರ್.ಆರ್.ನಗರ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 10,180
POP ಗಣೇಶ ಮೂರ್ತಿಗಳು: 152
* ಯಲಹಂಕ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 7414
POP ಗಣೇಶ ಮೂರ್ತಿಗಳು: 546
ಮಂಗಳವಾರದ ವಿಸರ್ಜಿಸಿದ ಮೂರ್ತಿಗಳ ಮಾಹಿತಿ
* ಪೂರ್ವ ವಲಯ: ಒಟ್ಟು 5,761
* ಪಶ್ಚಿಮ ವಲಯ: ಒಟ್ಟು 7,607
* ದಕ್ಷಿಣ ವಲಯ: ಒಟ್ಟು 9,117
* ಬೊಮ್ಮನಹಳ್ಳಿ ವಲಯ: ಒಟ್ಟು 875
* ದಾಸರಹಳ್ಳಿ ವಲಯ: ಒಟ್ಟು 259
* ಮಹದೇವಪುರ ವಲಯ: ಒಟ್ಟು 2,452
* ಆರ್.ಆರ್.ನಗರ ವಲಯ: ಒಟ್ಟು 927
* ಯಲಹಂಕ ವಲಯ: ಒಟ್ಟು 1,349












Click it and Unblock the Notifications