ಗಾಂಧಿನಗರ ಚುನಾವಣೆ ಫಲಿತಂಶಾ 2023: 113 ಮತಗಳ ಅಂತರದಲ್ಲಿ ದಿನೇಶ್ ಗುಂಡುರಾವ್‌ಗೆ ಗೆಲುವು
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜಧಾನಿ ಬೆಂಗಳೂರಿನ ಹೃದಯ ಭಾಗ ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ದಿನೇಶ್ ಗುಂಡುರಾವ್ ಕೇವಲ 113 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಮತ್ತು ಸಪ್ತಗಿರಿ ಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ದಿನೇಶ್ ಗುಂಡುರಾವ್ ಗೆದ್ದಿದ್ದಾರೆ.
ರಾಜಧಾನಿ ಬೆಂಗಳೂರಿನ ದಟ್ಟಣೆಯ ಜಂಕ್ಷನ್ ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಇದೇ ಕ್ಷೇತ್ರದಲ್ಲಿ ಬರುವುದು ವಿಶೇಷ. ಸತತ 5 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ದಿನೇಶ್ ಗುಂಡೂರಾವ್ 6ನೇ ಬಾರಿ ಅದೃಷ್ಟದ ಪರೀಕ್ಷೆಗೆ ಇಳಿದಿದ್ದರು. 6ನೇ ಬಾರಿಗೂ ಗಾಂಧಿನಗರ ಕ್ಷೇತ್ರದಲ್ಲಿ (Gandhi Nagar Assembly Constituency) ಗೆದ್ದರೂ, ಅಂತರ ಮಾತ್ರ ಭಾರಿ ಕಡಿಮೆ ಎನಿಸಿದೆ. ಮತ್ತೊಂದು ವಿಶೇಷ ಸಂಗತಿ ಏನೆಂದರೆ ಬಿಜೆಪಿಗೆ ಬಂಡಾಯ ದೊಡ್ಡ ಹೊಡೆತ ನೀಡಿದೆ.

ಜಿದ್ದಾಜಿದ್ದಿ ಇದ್ದ ಕ್ಷೇತ್ರ ಗಾಂಧಿನಗರ
ಬಿಜೆಪಿಯ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಮಚಂದ್ರ ಗೌಡ ಅವರ ಪುತ್ರ ಸಪ್ತಗಿರಿ ಗೌಡ ಸ್ಪರ್ಧಿಸಿದ್ರು. ಹಾಗೇ ಜೆಡಿಎಸ್ ಪಕ್ಷದಿಂದ ವಿ. ನಾರಾಯಣಸ್ವಾಮಿ, ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಅಲ್ಲದೆ ಆಮ್ ಆದಿ ಪಾರ್ಟಿಯ ಗೋಪಿನಾಥ್ ಸೇರಿ 15 ಸ್ಪರ್ಧಿಗಳು ಕಣದಲ್ಲಿ ಇದ್ದರು. ಹೀಗಾಗಿ ಭರ್ಜರಿ ಪೈಪೋಟಿ ನಡುವೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ 6ನೇ ಬಾರಿ ಗೆಲುವು ಸಾಧಿಸಿದ್ದಾರೆ.
ಮತದಾರರ ಲೆಕ್ಕಾಚಾರ ಹೇಗಿತ್ತು?
ಗಾಂಧಿನಗರ ಕ್ಷೇತ್ರದಲ್ಲಿ 2,19,934 ಮತದಾರರು ಇದ್ದು, ಈ ಪೈಕಿ ಪುರುಷ ಮತದಾರರು 1,13,713 ಹಾಗೂ 1,06,198 ಮಹಿಳಾ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ & ಬಿಜೆಪಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿತ್ತು. ದಿನೇಶ್ ಗುಂಡೂರಾವ್ & ಸಪ್ತಗಿರಿ ಗೌಡ ಗೆಲುವಿಗಾಗಿ ತೀವ್ರ ಸೆಣೆಸಾಟ ನಡೆಸಿದ್ರು. ಆದರೆ ಅಂತಿಮ ಫಲಿತಾಂಶದಲ್ಲಿ ದಿನೇಶ್ ಗುಂಡೂರಾವ್ ಗೆದ್ದಿದ್ದಾರೆ. ಈ ಮೂಲಕ 6ನೇ ಬಾರಿಗೆ ಇದೇ ಕ್ಷೇತ್ರದಲ್ಲಿ ಜಯದ ನಗೆ ಬೀರಿದ್ದಾರೆ.
ಸಖತ್ ಪೈಪೋಟಿ ಏರ್ಪಟ್ಟಿತ್ತು!
ಹೌದು, ಮತ ಎಣಿಕೆ ಅರಂಭವಾದ ಬಳಿಕ ತೀವ್ರ ಕುತೂಹಲ ಕೆರಳಿತ್ತು. ಹಾಗೇ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತು ತೀವ್ರ ಕುತೂಹಲದಿಂದ ಕಾಯುತ್ತಿದ್ದರು. ಅಂತಿಮವಾಗಿ ಫಲಿತಾಂಶ ಬಂದ ನಂತರ ರೋಚಕ ಗೆಲುವು ಸಾಧಿಸಿದ ದಿನೇಶ್ ಗುಂಡೂರಾವ್ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸಂಭ್ರಮಾಚರಣೆ ನಡೆಸಿದರು.
ದತ್ತಾತ್ರೇಯ ದೇವಸ್ಥಾನ, ಗಾಂಧಿನಗರ, ಸುಭಾಷ್ ನಗರ, ಓಕಳೀಪುರಂ, ಬಿನ್ನಿಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ ವಾರ್ಡ್‌ಗಳನ್ನು ಹೊಂದಿದ್ದು, ಶ್ರಮಿಕ ವರ್ಗದ ಮತದಾರರೇ ಇಲ್ಲಿ ಹೆಚ್ಚಾಗಿದ್ದು, ಹಿಂದುಳಿದ ಸಮುದಾಯ, ತಮಿಳುನಾಡು, ರಾಜಸ್ಥಾನ ಹಾಗೂ ಗುಜರಾತ್ ಮೂಲದ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಅಂತಿಮ ರಿಸಲ್ಟ್ ಬಂದಾಗ ಕಾಂಗ್ರೆಸ್ ಅಭ್ಯರ್ಥಿ 113 ಮತಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದಾರೆ.












Click it and Unblock the Notifications