• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ರಾಜಕೀಯ : ಸಿದ್ದರಾಮಯ್ಯ v/s ಪರಮೇಶ್ವರ!

By Gururaj
|

ಬೆಂಗಳೂರು, ಸೆಪ್ಟೆಂಬರ್ 06 : ಡಾ.ಜಿ.ಪರಮೇಶ್ವರ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ. ಪ್ರಭಾವಿಯಾದ ಗೃಹ ಖಾತೆಯ ಸಚಿವರು. ತುಮಕೂರು ಮೂಲದ ಪರಮೇಶ್ವರ ಬೆಂಗಳೂರಿನಲ್ಲಿ ರಾಜಕಾರಣ ಆರಂಭಿಸಿದ್ದಾರೆ?.

ಹೌದು, ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ ಬೆಂಗಳೂರು ನಗರದ ರಾಜಕಾರಣವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರು. ಬಿಡಿಎ ಅಧ್ಯಕ್ಷರು ಅವರೇ.

ಬಿಡಿಎ ಅಧ್ಯಕ್ಷರಾದ ಪರಮೇಶ್ವರ, ಸಿದ್ದರಾಮಯ್ಯಗೆ ಹಿನ್ನಡೆ!

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಪರಮೇಶ್ವರ ಅವರು ಬೆಂಗಳೂರಿನ ಯಾವುದಾದರೂ ಕ್ಷೇತ್ರದಿಂದ ಚುನಾವಣೆಗೆ ಸರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅವರು ಸ್ವ ಕ್ಷೇತ್ರ ಕೊರಟಗೆರೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಕೊರಟಗೆರೆಯಲ್ಲಿ ಪರಮೇಶ್ವರ್ ರಾಜಕೀಯ ಆಟವೇ ಬೇರೆ

ಪರೋಕ್ಷವಾಗಿ ಬೆಂಗಳೂರಿನ ರಾಜಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಡಿತದಲ್ಲಿದೆ. ಸಿದ್ದರಾಮಯ್ಯ ಬೆಂಬಲಿಗರು ನಗರದ ರಾಜಕಾರಣವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಆದ್ದರಿಂದ, ಪರಮೇಶ್ವರ ಅವರ ನಗರದ ರಾಜಕೀಯ ನಿಯಂತ್ರಿಸಲು ಬಯಸಿದ್ದಾರೆ. ಆದರೆ, ಇದರಲ್ಲಿ ಪರಮೇಶ್ವರ ಅವರು ಯಶಸ್ವಿಯಾಗುವೇ ಎಂದು ಕಾದು ನೋಡಬೇಕಿದೆ...

ಸಿದ್ದರಾಮಯ್ಯಗೆ ಅಧಿಕಾರ ಕೈ ತಪ್ಪಿದ ಕಾರಣ ಬಹಿರಂಗ!

ಕಾಂಗ್ರೆಸ್‌ನಲ್ಲಿ ನಾಯಕರು ಯಾರು?

ಕಾಂಗ್ರೆಸ್‌ನಲ್ಲಿ ನಾಯಕರು ಯಾರು?

ಬೆಂಗಳೂರಿನ ರಾಜಕಾರಣದ ವಿಚಾರ ಬಂದರೆ ಬಿಜೆಪಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಪ್ರಬಲ ನಾಯಕರು. ನಗರದ ರಾಜಕೀಯವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಬಿಬಿಎಂಪಿಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಒಬ್ಬ ನಾಯಕರ ಕೈಯಲ್ಲಿಯೇ ನಗರದ ಆಡಳಿತವಿಲ್ಲ. ಆಯಾಯ ಕ್ಷೇತ್ರದಲ್ಲಿ ಅವರವರು ಪ್ರಭಾವಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್ ಅವರು ಸಾಕಷ್ಟು ಪ್ರಭಾವವನ್ನು ನಗರದಲ್ಲಿ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಪರಮೇಶ್ವರ

ಬೆಂಗಳೂರಿನಲ್ಲಿ ಪರಮೇಶ್ವರ

ಬೆಂಗಳೂರು ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಬಿಬಿಎಂಪಿಯಲ್ಲಿ 198 ವಾರ್ಡ್‌ಗಳಿವೆ. ನಗರದ ರಾಜಕಾರಣವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬೆಂಗಳೂರು ನಗರಾಭಿವದ್ಧಿ ಸಚಿವರಾದ ಬಳಿಕ ಪರಮೇಶ್ವರ ಅವರು ನಗರದ ರಾಜಕೀಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸಿದ್ದಾರೆ.

ಬಿಡಿಎಗೆ ಹೊಸ ಅಧ್ಯಕ್ಷರು ನೇಮಕವಾದರೂ ಅವರೂ ನನ್ನ ಬೆಂಬಲಿಗರು ಆಗಿರಬೇಕು ಎಂಬುದು ಪರಮೇಶ್ವರ ಅವರ ವಾದವಾಗಿದೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಯಾವಾಗ ಭರ್ತಿಯಾಗಲಿದೆ? ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆ.

ಸಿದ್ದರಾಮಯ್ಯ ಬೆಂಬಲಿಗರು

ಸಿದ್ದರಾಮಯ್ಯ ಬೆಂಬಲಿಗರು

ಬೆಂಗಳೂರು ನಗರದ ರಾಜಕಾರಣ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಹಿಡಿತದಲ್ಲಿದೆ. ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಹೆಬ್ಬಾಳ ಶಾಸಕ ಬೈರತಿ ಸುರೇಶ್, ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜು ಎಲ್ಲರೂ ಸಿದ್ದರಾಮಯ್ಯ ಅವರ ಆಪ್ತರು.

ಮತ್ತೊಂದು ಕಡೆ ಸಚಿವ ಕೆ.ಜೆ.ಜಾರ್ಜ್, ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ.ಹ್ಯಾರೀಸ್, ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಎಲ್ಲರೂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಆದ್ದರಿಂದ, ಬೆಂಗಳೂರು ನಗರ ಸಿದ್ದರಾಮಯ್ಯ ಕೈಯಲ್ಲಿದೆ.

ಕೆಪಿಸಿಸಿ ಅಧ್ಯಕ್ಷರ ಲಾಬಿ

ಕೆಪಿಸಿಸಿ ಅಧ್ಯಕ್ಷರ ಲಾಬಿ

ಬಿಬಿಎಂಪಿ ಮೇಯರ್ ಪಟ್ಟವನ್ನು ಗಾಂಧಿನಗರ ವಾರ್ಡ್‌ನ ಕಾರ್ಪೊರೇಟರ್‌ಗೆ ಕೊಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಯತ್ನ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಅವರ ಪ್ರಭಾವ ಹೈಕಮಾಂಡ್ ಮಟ್ಟದಲ್ಲಿಯೂ ಹೆಚ್ಚಿದೆ.

ದಿನೇಶ್ ಗುಂಡೂರಾವ್ ಅವರು ನಗರದಲ್ಲಿ ತಮ್ಮ ಪ್ರಭಾವ ಮತ್ತಷ್ಟು ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಆದರೆ, ಈಗ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ, ಬಿಡಿಎ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಪರಮೇಶ್ವರ ಅವರು ನಗರದಲ್ಲಿ ಹಿಡಿತ ಸಾಧಿಸುವ ಪ್ರಯತ್ನ ಆರಂಭಿಸಿದ್ದಾರೆ.

ಕೊರಟಗೆರೆ ಯಿಂದ ಬೆಂಗಳೂರು

ಕೊರಟಗೆರೆ ಯಿಂದ ಬೆಂಗಳೂರು

ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದವರು ಡಾ.ಜಿ.ಪರಮೇಶ್ವರ. ಕೆಪಿಸಿಸಿ ಅಧ್ಯಕ್ಷರಾಗಿದ್ದರೂ 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ, 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ.

ಲೋಕಸಭೆ ಚುನಾವಣೆ ಸಮಯದಲ್ಲಿ ನಗರದ ಆಡಳಿತ ಯಾರ ಹಿಡಿತದಲ್ಲಿ ಇರಲಿದೆ? ಎಂಬ ಬಗ್ಗೆ ತಿಳಿಯಲಿದೆ. ನಗರದ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮೂರು ಲೋಕಸಭಾ ಸ್ಥಾನಗಳು ಬಿಜೆಪಿ ವಶದಲ್ಲಿ ಇವೆ. ಯಾರು ನಗರದ ರಾಜಕಾರಣ ಹಿಡಿತಕ್ಕೆ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲಿದ್ದಾರೆ? ಎಂಬುದು ಸದ್ಯದ ಕುತೂಹಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Deputy Chief Minister of Karnataka and Bengaluru development minister G. Parameshwara wish to take control on Bengaluru city politics. In the Congress party now city politics in Former CM Siddaramaiah hand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more