• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಡಿಎ ಅಧ್ಯಕ್ಷರಾದ ಪರಮೇಶ್ವರ, ಸಿದ್ದರಾಮಯ್ಯಗೆ ಹಿನ್ನಡೆ!

By Gururaj
|
   ಜಿ ಪರಮೇಶ್ವರ್ ಗೆ ಬಿಡಿಎ ಅಧ್ಯಕ್ಷ ಸ್ಥಾನದ ಭಾಗ್ಯ | ಸಿದ್ದರಾಮಯ್ಯಗೆ ಹಿನ್ನಡೆ | Oneindia Kannada

   ಬೆಂಗಳೂರು, ಆಗಸ್ಟ್ 22 : ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದರೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕವಾಗಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.

   ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ ಬಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿದರು. ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

   ಬಿಡಿಎ ಜನರ ನಂಬಿಕೆ ಉಳಿಸಿಕೊಳ್ಳಲಿ ಎಂದ ಪರಮೇಶ್ವರ್

   'ಬಿಡಿಎ ಬೆಂಗಳೂರಿಗರ ನಂಬಿಕೆ ಉಳಿಸಿಕೊಳ್ಳುವ ರೀತಿ ಪಾರದರ್ಶಕ ಆಡಳಿತ ನಡೆಸಬೇಕು. ಕಾಮಗಾರಿಗಳ ಖರ್ಚು ವೆಚ್ಚದ ಬಗ್ಗೆ ನಿಗಾ ವಹಿಸಿ‌ ನಿಗದಿತ ಸಮಯದೊಳಗೆ ಕೆಲಸ ಮುಗಿಸಿ‌ ಜನರ ಮನ್ನಣೆ ಗಳಿಸಬೇಕು.

   ತಡವಾಗಿ ಕಾಮಗಾರಿ ಮುಗಿಸುವವರ ಟೆಂಡರ್ ರದ್ದು ಮಾಡಿ ಸರಿಯಾಗಿ ಕೆಲಸ ಮುಗಿಸಿ ಕೊಡುವವರಿಗೆ ಆದ್ಯತೆ ನೀಡಿ' ಎಂದು ಅಧಿಕಾರಿಗಳಿಗೆ ಸೂಚಿಸಿದರು.

   ಸರಕಾರ, ಬಿಡಿಎ ಸೇರಿಕೊಂಡು ಬೆಂಗ್ಳೂರನ್ನು ಹಾಳು ಮಾಡ್ತಿವೆ: ಸುಪ್ರೀಂ

   ನಿಗಮ ಮಂಡಳಿಗಳ ಪೈಕಿ ಬಿಡಿಎ ಅಧ್ಯಕ್ಷ ಪಟ್ಟ ಬಹಳ ಪ್ರಭಾವಿಯಾಗಿದೆ. ಕಾಂಗ್ರೆಸ್‌ನ ಇಬ್ಬರು ಶಾಸಕರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಪರಮೇಶ್ವರ ಅವರು ಅಧ್ಯಕ್ಷರಾಗಿದ್ದಾರೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟಾಗಿದೆ.

   ಭೈರತಿ ಸುರೇಶ್, ಎಂ.ಟಿ.ಬಿ.ನಾಗರಾಜ್

   ಭೈರತಿ ಸುರೇಶ್, ಎಂ.ಟಿ.ಬಿ.ನಾಗರಾಜ್

   ಜಿ.ಪರಮೇಶ್ವರ ಅವರು ಬಿಡಿಎ ಅಧ್ಯಕ್ಷರಾಗಿದ್ದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟಾಗಿದೆ. ಸಿದ್ದರಾಮಯ್ಯ ಆಪ್ತರಾದ ಹೆಬ್ಬಾಳ ಶಾಸಕ ಬೈರತಿ ಸುರೇಶ್, ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಅವರು ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು.

   ಆದರೆ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಪರಮೇಶ್ವರ ಅವರು ಬಿಡಿಎಯನ್ನು ತಮ್ಮ ಹಿಡಿತದಲ್ಲಿಯೇ ಇಟ್ಟುಕೊಳ್ಳಲು ಬಯಸಿದ್ದರು. ಅಂತಿಮವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಿಗಮ-ಮಂಡಳಿ ನೇಮಕದ ಸಂದರ್ಭದಲ್ಲಿ ಪರಮೇಶ್ವರ ಅವರ ಆಪ್ತ ಶಾಸಕರಿಗೆ ಬಿಡಿಎ ಅಧ್ಯಕ್ಷ ಪಟ್ಟ ಒಲಿಯುವ ಸಾಧ್ಯತೆ ಇದೆ.

   ನಿಗಮ-ಮಂಡಳಿ ನೇಮಕ ಕಗ್ಗಂಟು

   ನಿಗಮ-ಮಂಡಳಿ ನೇಮಕ ಕಗ್ಗಂಟು

   ಕಾಂಗ್ರೆಸ್‌-ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳು ಕಳೆದರೂ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಅಂತಿಮವಾಗಿಲ್ಲ. ಬಜೆಟ್ ಅಧಿವೇಶನ, ಆಷಾಢ, ಪ್ರವಾಹ ಪರಿಸ್ಥಿತಿ ಹೀಗೆ ಒಂದೊಂದು ಕಾರಣದಿಂದಾಗಿ ನೇಮಕಾತಿ ಮುಂದಕ್ಕೆ ಹೋಗತ್ತಿದೆ.

   30 ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೆ, ಹೈಕಮಾಂಡ್ ನಾಯಕರು ಈ ಪಟ್ಟಿಗೆ ಅಂತಿಮ ಒಪ್ಪಿಗೆಯನ್ನು ನೀಡಿಲ್ಲ. ಆದ್ದರಿಂದ, ನೇಮಕಾತಿ ವಿಳಂಬವಾಗುತ್ತಿದೆ. ಇದು ಹಲವು ಶಾಸಕರ ಅಸಮಾಧಾನಕ್ಕೂ ಕಾರಣವಾಗಿದೆ.

   ಬಿಡಿಎ ಅಧ್ಯಕ್ಷ

   ಬಿಡಿಎ ಅಧ್ಯಕ್ಷ

   ಮಂಗಳವಾರ ಪರಮೇಶ್ವರ ಅವರು ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಮಾತನಾಡಿದ ಅವರು, 'ಅಧ್ಯಕ್ಷರು ಇಲ್ಲ ಎಂದು ಕೆಲಸಗಳು ವಿಳಂಬವಾಗಬಾರದು. ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಬೆಂಗಳೂರು ಅಭಿವೃದ್ಧಿ ಸಚಿವನಾದ ನಾನೇ ಅಧ್ಯಕ್ಷನಾಗಿದ್ದೇನೆ' ಎಂದು ಪರಮೇಶ್ವರ ಅವರು ಹೇಳಿದರು.

   ಅಧಿಕಾರಿಗಳ ಜೊತೆ ಸಭೆ ನಡೆಸಿದ ಪರಮೇಶ್ವರ ಅವರು, 'ಅನೇಕ ಕಡೆ ಬಿಡಿಎ ಆಸ್ತಿಗಳು ಉತ್ತುವರಿಯಾದ ವಿಚಾರವನ್ನು ಪ್ರಸ್ತಾಪಿಸಿದರು. ಇವುಗಳ ಪತ್ತೆಗೆ ಸಮಗ್ರ ಸಮೀಕ್ಷೆ ನಡೆಸಬೇಕು. ಇದರಿಂದ ಬಿಡಿಎಗೆ ಉತ್ತಮ ಆದಾಯವೂ ಬರಲಿದೆ' ಎಂದರು.

   ಬಿಡಿಎ ಏಕೆ ಮುಚ್ಚ ಬಾರದು?

   ಬಿಡಿಎ ಏಕೆ ಮುಚ್ಚ ಬಾರದು?

   'ಬಿಡಿಎಯನ್ನು ಏಕೆ ಮುಚ್ಚಬಾರದು ಎಂಬ ಬಗ್ಗೆ ಹಿಂದೊಮ್ಮೆ ಚರ್ಚೆ ನಡೆದಿತ್ತು' ಎಂದು ನೆನಪಿಸಿಕೊಂಡ ಸಚಿವವರು, 'ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡುವ ಮೂಲಕ ಪ್ರಾಧಿಕಾರವನ್ನು ಆರೋಗ್ಯಕರ ದಾರಿಯಲ್ಲಿ ಮುನ್ನಡೆಸಬೇಕು' ಎಂದರು ಹೇಳಿದರು.

   'ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಪ್ರಾಧಿಕಾರ ಸ್ಥಾಪಿಸಲಾಗಿದೆ. ಆದರೆ, ಇತ್ತೀಚೆಗೆ ಬಿಡಿಎ ಮೂಲ ಆಶಯ ಈಡೇರಿಸುವುದಕ್ಕಿಂತ ಹೆಚ್ಚಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ' ಎಂದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Deputy Chief Minister of Karnataka and Bengaluru development minister Dr.G.Parameshwara took charge as chairman of Bangalore Development Authority (BDA). Karnataka Government yet to appoint president to Board and Corporations.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more