ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಮಕ್ಕಳಿಗಾಗಿ ಸ್ಪ್ಯಾಸ್ಟಿಕ್ ಸೊಸೈಟಿಯಿಂದ 'ವಿಂಟರ್ ಕಾರ್ನಿವಲ್'

|
Google Oneindia Kannada News

ಬೆಂಗಳೂರು, ಡಿಸೆಂಬರ್ 09 : ಒಂದು ರೀತಿಯ ಆನಂದ, ವಿಸ್ಮಯ, ಆಶ್ಚರ್ಯ ಎಲ್ಲವೂ ಆ ಮಕ್ಕಳ ಮುಖದಲ್ಲಿ ಮನೆ ಮಾಡಿದ್ದವು. ಬುದ್ಧಿಮಾಂದ್ಯ ಮತ್ತು ಅಂಗವಿಕಲ ಮಕ್ಕಳು ಜಗತ್ತನ್ನೇ ಜಯಿಸಿದಷ್ಟು ಸಂತಸಟ್ಟರು.

ಬುದ್ಧಿಮಾಂದ್ಯ ಮತ್ತು ಅಂಗವಿಕಲ ಮಕ್ಕಳಿಗೆ ತರಬೇತಿ ನೀಡುವ 'ಸ್ಪ್ಯಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆ'ಯು ಮಕ್ಕಳಿಗಾಗಿ ಚಳಿಗಾಲದ ಸಂಭ್ರಮಕ್ಕಾಗಿ ವಿಂಟರ್ ಕಾರ್ನಿವಲ್ ನ್ನು ಶನಿವಾರ ಇಂದಿರಾನಗರದಲ್ಲಿರುವ ತಮ್ಮ ಸಂಸ್ಥೆಯಲ್ಲಿ ಆಯೋಜಿಸಿತ್ತು. ಬುದ್ಧಿ ಮಾಂದ್ಯ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

Fun, food and masti for spastic children

ಚಳಿಗಾಲದ ಹಬ್ಬದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ, ಆಹಾರ ಮಳಿಗೆಗಳು, ಆಟಗಳ ಜತೆಗೆ ಕರಕುಶಲ ವಸ್ತುಗಳ ಪ್ರದರ್ಶನವನ್ನು ಕೂಡ ಆಯೋಜಿಸಲಾಗಿತ್ತು. ವಿಶೇಷ ಮಕ್ಕಳು ಬಗೆ ಬಗೆಯ ತಿಂಡಿ ತಿನಿಸುಗಳು, ಖುಷಿಕೊಡುವ ನಾನಾ ಬಗೆಯ ಮೋಜಿನ ಆಟಗಳು, ಕುಣಿದು ಕುಪ್ಪಿಸುವ ಮ್ಯೂಸಿಕ್ ಸೇರಿದಂತೆ ಇನ್ನೂ ಹಲವು ಅವಿಸ್ಮರಣೀಯ ಚಟುವಟಿಕೆಗಳನ್ನು ಭಾಗಿಯಾಗಿ ಸಂತಸ ಪಟ್ಟರು.

Fun, food and masti for spastic children

ಕಾರ್ಯಕ್ರಮದಲ್ಲಿ ನೂರಾರು ಆಕಾಶ ಬುಟ್ಟಿಗಳು, ಕಾಗದಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಗೃಹಲಂಕಾರಿ ವಸ್ತುಗಳ ಪ್ರದರ್ಶನ ನಡೆಯಿತು ಇದು ಕ್ರಿಸ್ ಮಸ್ ತಿಂಗಳಾಗಿರುವುದರಿಂದ ಸಾಂತಾ ಕ್ಲಾಸ್, ವಿಶೇಷ ಮುಖವಾಡಗಳು, ಮಕ್ಕಳುಇ ಹಾಗೂ ಶಿಕ್ಷಕರು ಸೇರಿ ತಯಾರಿಸಿದ ಕ್ರಿಸ್ ಮಸ್ ಟ್ರೀ, ಅಲಂಕಾರಿಕ ಉತ್ಪನ್ನಗಳಾದ ಬಳೆ, ಸರಗಳು, ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

English summary
Spastics Society of Karnataka has organized winter carnival on Saturday and many children who are suffering spastic enjoyed with tasty food, funny games, rocking music and many more masti
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X