ಭಾರತದಲ್ಲಿ ಅಮೃತದ ಮಳೆಯಾಗಬೇಕು : ಮೋದಿ
(ಮೋದಿ ಭಾಷಣ ಪೂರ್ಣಪಾಠ - ಭಾಗ 5) ವಾಂಖೆಡೆಯಲ್ಲಿ ಕ್ರಿಕೆಟ್ ನಡೆಯುತ್ತಿತ್ತು. ಸಚಿನ್ ನಿವೃತ್ತಿಯಾಗುತ್ತಿದ್ದರು. ಇಡೀ ದೇಶ ಸಚಿನ್ ಮಯವಾಗಿತ್ತು. ಕ್ರೀಡಾಭಿಮಾನಿಗಳು ಸಚಿನ್ ತೆಂಡೂಲ್ಕರ್ ಶತಕ ಬಾರಿಸುತ್ತಾರಾ ಇಲ್ಲಾ ಈರುಳ್ಳಿ ಬೆಲೆ ಸೆಂಚುರಿ ಹೊಡೆಯುತ್ತಾ ಅಂತಾ ಮಾತನಾಡುತ್ತಿದ್ದರು. ಇದು ನಿಮ್ಮ ಬೆಲೆ ಏರಿಕೆಯ ಕೊಡುಗೆ.
ನೀವು ಹಸಿವಿನಿಂದ ನಿಂತಿದ್ದೀರಿ. ನಿಮ್ಮ ಪ್ರೀತಿಗೆ ಸಲಾಂ, ನಿಮ್ಮ ಬೆಂಬಲಕ್ಕೆ ಸಲಾಂ. ಪ್ರಧಾನಿಗಳು ಫುಡ್ ಪ್ರೈಸ್ ಹಣದುಬ್ಬರ ನಿಯಂತ್ರಣಕ್ಕೆ ಒಂದು ಸಮಿತಿ ರಚಿಸಿದ್ದರು. ಅದಕ್ಕೆ ನನ್ನನ್ನು ಯಾಕೆ ಅಧ್ಯಕ್ಷರು ಮಾಡಿದ್ದರು ಎಂದು ಗೊತ್ತಿಲ್ಲ. ನನ್ನ ಜೊತೆಗೆ 4 ರಾಜ್ಯಗಳ ಸಿಎಂಗಳು ಸಮಿತಿಯಲ್ಲಿದ್ದರು. ನಾವು ಕಷ್ಟಪಟ್ಟು 2011ರಲ್ಲಿ ಸರ್ಕಾರಕ್ಕೆ ವರದಿ ನೀಡಿದೆವು. ವರದಿ ನೋಡಿ ಪ್ರಧಾನಿ ಅಭಿನಂದಿಸಿದ್ದರು. ಬೆಲೆ ಏರಿಕೆ ತಡೆಯಲು 20 ಶಿಫಾರಸುಗಳನ್ನು ಪ್ರಧಾನಿಗೆ ನೀಡಿದ್ದೆ. 64 ಕೆಲಸ ಕಾರ‍್ಯ ಮಾಡಬೇಕು ಎಂದು ಹೇಳಿದ್ದೆ. ಆದರೆ ಇದನ್ನು ಕೇಂದ್ರ ಸರ್ಕಾರ ಕೇಳಲಿಲ್ಲ. ನಾನು ನೀಡಿದ ವರದಿಯನ್ನು ಕೇಂದ್ರ ಸರ್ಕಾರ ಹಾಗೇ ಇಟ್ಟಿದೆ.
ಎಫ್.ಸಿ.ಐ.ಯನ್ನು ಮೂರು ಭಾಗಗಳನ್ನಾಗಿ ಮಾಡಿ ಎಂದಿದ್ದೆವು. ಒಂದು ಸಂಗ್ರಹ, ಇನ್ನೊಂದು ಉಗ್ರಾಣ, ಮತ್ತೊಂದು ವಿತರಣೆ ಮಾಡಿ ಎಂದು ಹೇಳಿದೆ. ಅದರೆ ಕೇಂದ್ರ ಸರ್ಕಾರ ಇದನ್ನ ಕೇಳಲಿಲ್ಲ. ಅಟಲ್ ಜೀ ಸರ್ಕಾರ ಇದ್ದಾಗ ಈರುಳ್ಳಿಯನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಿತ್ತು. ಇದರಿಂದಾಗಿ ಬೆಲೆಯಲ್ಲಿ ಏರಿಳಿಕೆಯಾಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಪಟ್ಟಿಯಿಂದ ಹೊರಹಾಕಿತು. ಈಗ ಈರುಳ್ಳಿಯಿಂದಾಗಿ ಬಡವರು ಅಳುವಂತಾಗಿದೆ. ಸ್ವಾತಂತ್ರ್ಯಾ ನಂತರ ಕನಸು ಕಟ್ಟಿಕೊಳ್ಳುವ ಅಗತ್ಯವಿತ್ತು. ಸುರಾಜ್ಯವನ್ನು ಸ್ವರಾಜ್ಯ ಮಾಡಬೇಕಾದ ಅಗತ್ಯವಿತ್ತು. ಅಧಿಕಾರ ಎನ್ನುವುದು ವಿಷವಿದ್ದ ಹಾಗೆ. ವಿಷ ವಿಷ ಎಂದು ದೇಶದ ಜನರನ್ನು ಕಾಂಗ್ರೆಸಿಗರು ಸರ್ಕಾರದಿಂದ ದೂರ ಇಟ್ಟರು.

ಕೆಲವೇ ವರ್ಷಗಳಲ್ಲಿ ಭಾರತದ 75ನೇ ವರ್ಷಾಚರಣೆ ನಡೆಯಲಿದೆ. ಈಗಲೇ ಸಂಕಲ್ಪ ಮಾಡೋಣ. ಭಾರತ ಅಮೃತ ವರ್ಷಾಚರಣೆ ಮಾಡಬೇಕಾದರೆ ಭಾರತದಲ್ಲಿ ಅಮೃತದ ಮಳೆಯಾಗಬೇಕು. ಸ್ವರಾಜ್ಯ, ಬಡವರ ಕಲ್ಯಾಣ, ಗ್ರಾಮ, ಬಡವರು, ರೈತರ ಬಗ್ಗೆ ಮಾತನಾಡಬೇಕು. ರೈತರನ್ನ ತಂತ್ರಜ್ಞಾನದ ಜೊತೆ ಜೋಡಿಸಬೇಕು. ದೇಶದ ಎಲ್ಲಾ ನಾಗರಿಕರು ಕನಸು ಕಟ್ಟಿಕೊಂಡರೆ ನಮ್ಮ ದೇಶ ವಿಶ್ವದಲ್ಲಿ ಅತ್ಯುನ್ನತ ಮಟ್ಟಕ್ಕೇರಲಿದೆ. ನಮ್ಮ ದೇಶ ಹೊಸ ಶಕ್ತಿ ಪಡೆದುಕೊಂಡು ಬರಬೇಕು. ನಾನು ಕನಸು ಕಾಣುತ್ತಿದ್ದೇನೆ. ಉತ್ತಮ ಆಡಳಿತದ ಕಡೆ ಸಾಗಬೇಕು, ಭ್ರಷ್ಟಾಚಾರ ದೂರವಿಟ್ಟು ಕ್ಲೀನ್ ಆಗಿರೋಣ. ವಿಷದ ಮಾತು ಹೇಳುವವರಿಂದ ದೂರವಿದ್ದು ಅಮೃತ ಪಡೆಯುವ ಯತ್ನ ಮಾಡಬೇಕು. ನನಗೆ ವಿಶ್ವಾಸವಿದೆ, ಹೊಸ ಶಕ್ತಿ ಜೊತೆ ಹೊರಹೊಮ್ಮೋಣ. ೨೧ನೇ ಶತಮಾನದಲ್ಲಿ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ಭಾರತ್ ಮಾತಾ ಕೀ ಜಯ್
ಭಾರತ್ ಮಾತಾ ಕೀ ಜಯ್
ಭಾರತ್ ಮಾತಾ ಕೀ ಜಯ್
ನಾನು ಒಂದು ವಿಷಯ ಮರೆತೆ, ನನಗೆ ಕರ್ನಾಟಕ ಪ್ರೇರಣೆ ನೀಡಿದೆ. ಇಲ್ಲಿನ ನಾಗರಿಕರು, ಇಲ್ಲಿನ ಬಿಜೆಪಿ, ಕಾರ್ಯಕರ್ತರು 10 ರೂ. ನೀಡಿ ಬಂದದ್ದು ಸ್ವಾಗತಾರ್ಹ. ಇದು ನನಗೆ ದೊಡ್ಡ ವಿಷಯ. ನಿಮಗೆ ಅಭಿನಂದನೆ. 3.5 ಲಕ್ಷ ಜನ ನೀಡಿದ 35 ಲಕ್ಷವನ್ನು ಭಾರತದ ಏಕತೆಗೆ ವಲ್ಲಭ ಭಾಯ್ ಪಟೇಲ್ ನೆನಪಿಗಾಗಿ ಪ್ರತಿಮೆ ನಿರ‍್ಮಾಣಕ್ಕೆ ನೀಡಿದ್ದು ಸ್ವಾಗತಾರ್ಹ. ಕರ್ನಾಟಕ ಬಿಜೆಪಿಗೆ ಅಭಿನಂದನೆ.
ಸರ್ದಾರ್ ವಲ್ಲಭ್ ಬಾಯ್ ಪಟೇಲ್ ಅಮರ್ ರಹೇ
ಏಕ್ ಭಾರತ್, ಶ್ರೇಷ್ಠ ಭಾರತ್
ಏಕ್ ಭಾರತ್, ಶ್ರೇಷ್ಠ ಭಾರತ್
ಏಕ್ ಭಾರತ್, ಶ್ರೇಷ್ಠ ಭಾರತ್











Click it and Unblock the Notifications