'ಬಡವರ ಬಗ್ಗೆ ಕಾಂಗ್ರೆಸ್ ತಮಾಷೆ ಮಾಡುತ್ತದೆ'
(ಮೋದಿ ಭಾಷಣ ಪೂರ್ಣಪಾಠ - ಭಾಗ 4) ಭಾರತ ರತ್ನ ಲತಾ ಮಂಗೇಷ್ಕರ್ ಅವರ ಹಾಡು ಕೇಳಿದ ತಕ್ಷಣ ರೋಮಾಂಚನವಾಗಲ್ವಾ? ನೀವು ಕನ್ನಡ ಭಾಷಿಕರು. ನಿಮಗೆ ಅವರ ಬಗ್ಗೆ ಗೊತ್ತಿರಬೇಕು. ಅವರ ಹಾಡು ಕೇಳಿದ ತಕ್ಷಣ ಸಂತಸವಾಗಲ್ವಾ? ಶಾಂತಿ ಸಿಗಲ್ವಾ? ಹೇ ಮೇರೇ ವತನ್ ಕೇ ಲೋಗೋ ಹಾಡು ಕೇಳಿದಾಗ ಭಾರತೀಯ ಸೇನೆಯ ಮುಂದೆ ತಲೆ ಬಾಗಿಸಿ ನಿಲ್ಲಬೇಕೆಂದು ಅನ್ನಿಸುತ್ತದೆ.
ಆದರೆ ಲತಾ ಮಂಗೇಷ್ಕರ್ ಮೋದಿ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ ಎಂದು ಕೆಲ ದಿನಗಳ ಹಿಂದೆ ಹೇಳಿದರು. ಆದರೆ ಕಾಂಗ್ರೆಸ್ ಗೆ ಇದು ಸಹ್ಯವಾಗಲಿಲ್ಲ. ಪ್ರಜಾತಂತ್ರದಲ್ಲಿ ಇಷ್ಟು ಮಾತು ಹೇಳುವ ಅಧಿಕಾರವಿಲ್ಲವಾ. ಯಾರಾದರೂ ಮೋದಿ ಜೀವನಪೂರ್ತಿ ಜೈಲಲ್ಲಿರಬೇಕು ಎನ್ನುವುದು ತಪ್ಪಾ? ಮೋದಿಗೆ ಮರಣ ದಂಡನೆಯಾಗಲಿ ಎಂದು ಹೇಳುವ ಅಧಿಕಾರವಿಲ್ಲವಾ? ಮೋದಿ ಪ್ರಧಾನಿ ಮಾಡಬೇಕು ಎಂದು ಹೇಳುವ ಅಧಿಕಾರವಿಲ್ಲವಾ? ಮೋದಿಗೆ ಬೆಂಬಲಿಸಿದ್ದಕ್ಕೆ ಭಾರತ ರತ್ನ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಹೇಳುತ್ತದೆ.
ಕಾಂಗ್ರೆಸ್ ಪಕ್ಷಕ್ಕೆ ಪ್ರಜಾತಂತ್ರದ ಮೇಲೆ ಶ್ರದ್ಧೆ, ಭರವಸೆಯಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆಯೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತು. ಮೋದಿ ಹೆಸರು ಘೋಷಣೆಯಾದ ನಂತರ ಬಿಜೆಪಿ ವೇಗವಾಗಿ ಹೋಗುತ್ತಿದೆ. ಮೋದಿ ಜೊತೆ ಹೋದರೆ ಅರ್ಥ ವ್ಯವಸ್ಥೆ ಒಳ್ಳೆಯದಾಗುತ್ತದೆ ಎಂದು ಸಮೀಕ್ಷೆ ಹೇಳಿತು. ಆದರೆ ಇದನ್ನು ಒಪ್ಪಲು ಕಾಂಗ್ರೆಸ್ ಸಿದ್ಧವಿಲ್ಲ.

4 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಪೀನಿಯನ್ ಪೋಲ್ ಬಂದಿದೆ. ಚುನಾವಣಾ ಪೂರ್ವ ಸಮೀಕ್ಷೆಗೂ ತಡೆ ಹಾಕಲು ಬಂದರು. ಕಾಂಗ್ರೆಸಿಗರೇ ಎಷ್ಟು ದಿನ ತಲೆ ಮರೆಸಿಕೊಂಡಿರುತ್ತೀರಿ. ಈಗ ನೀವು ಹೊರಡುವ ಸಮಯ ಬಂದಿದೆ. ಟಿವಿಯ ಪರದೆಯಲ್ಲಿ ಅಭಿಪ್ರಾಯ ಬರುತ್ತದೋ ಇಲ್ವೋ, ಆದರೆ ದೇಶದ ಅಭಿಪ್ರಾಯ ಸಿದ್ಧವಾಗಿದೆ.
ದೆಹಲಿಯ ಯುಪಿಎ ಸರ್ಕಾರ ಬಹುಮತದಿಂದ ಉಳಿದಿಲ್ಲ, ಸಿಬಿಐ ಮೂಲಕ ಉಳಿದಿದೆ. ಸರ್ಕಾರ ಬೀಳುತ್ತೆ ಅಂದಾಗ ಸಿಬಿಐಯನ್ನು ಬಳಸುತ್ತಾರೆ. ಈ ಭಯದಿಂದ ಮಿತ್ರ ಪಕ್ಷಗಳು ಕಾಂಗ್ರೆಸ್ ಜೊತೆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉಳಿದಿದೆ. ಕೇಂದ್ರ ಸರ್ಕಾರಕ್ಕೆ ವಿಜ್ಞಾನದಲ್ಲಿ ವಿಶ್ವಾಸವಿಲ್ಲ, ಪ್ರಜಾತಂತ್ರದಲ್ಲಿ ವಿಶ್ವಾಸವಿಲ್ಲ. 15 ರೂ.ಗೆ ಬಿಸ್ಲೇರಿ ಕುಡಿಯುತ್ತಿದ್ದರೆ 20 ರೂ.ಗೆ ಐಸ್ ಕ್ರೀಂ ತಿನ್ನುತ್ತೀರಿ ಎಂದಾದರೆ, 26 ರೂ. ಆದಾಯವಿದ್ದರೆ ಅವರು ಬಡವರಲ್ಲ ಎಂದು ಸರ್ಕಾರ ಹೇಳಿತು. 26 ರೂ. ಆದಾಯವಿದ್ದರೂ ಆ ಮನೆಯಲ್ಲಿ 5 ಜನವಿದ್ದರೆ ಅವರು ಬಡವರಲ್ಲವೇ? ಆದರೆ ಕೇಂದ್ರ ಸರ್ಕಾರ ಇದನ್ನು ಒಪ್ಪಲ್ಲ. 26 ರೂ.ಗೆ 300 ಗ್ರಾಂ ಈರುಳ್ಳಿ ಸಿಗಲ್ಲ ಅನ್ನೋದು ಗೊತ್ತಿಲ್ವೇ?
ಬಡವರಲ್ಲಿ ಬಡವರ ಬಗ್ಗೆಯೂ ಚಿಂತೆ ಮಾಡುವುದು ಬಿಜೆಪಿಯ ಧರ್ಮ. ಕಾಂಗ್ರೆಸ್ ಸರ್ಕಾರ ಬಡತನವೆಂದರೆ ಮಾನಸಿಕ ಅವಸ್ಥೆ ಎನ್ನುತ್ತದೆ. ಕಾಂಗ್ರೆಸ್ ಬಡವರ ಬಗ್ಗೆ ತಮಾಷೆ ಮಾಡುತ್ತದೆ. ಅವರಿಗೆ ಅವರ ವೈಯಕ್ತಿಕ ಕೆಲಸವೇ ಮುಖ್ಯವಾಗುತ್ತದೆ.
-
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications