'ಕೇಂದ್ರ ಸರ್ಕಾರಕ್ಕೆ ಯುವ ಜನರ ಬಗ್ಗೆ ಚಿಂತೆಯಿಲ್ಲ'
(ಮೋದಿ ಭಾಷಣ ಪೂರ್ಣಪಾಠ - ಭಾಗ 3) ನಮ್ಮ ದೇಶದ ಶೇ.65 ಯುವಜನರ ವಯಸ್ಸು 35 ವರ್ಷಕ್ಕಿಂತ ಕೆಳಗಿದೆ. ಕಾಂಗ್ರೆಸ್ ಗೆ ಯುವಜನರು ಕೇವಲ ವೋಟರ್ ಮಾತ್ರ. ನಮಗೆ ಯುವಕರು ಶಕ್ತಿ. ಯುವಜನತೆಯ ಸಬಲೀಕರಣ ಮಾಡಬೇಕಿದೆ. ಸಬಲೀಕರಣ ಮಾಡಿದರೆ ಭಾರತ ಶಕ್ತಿ ಶಾಲಿಯಾಗುತ್ತದೆ. ಯುವಜನರಿಗಾಗಿ ಯಾವುದೇ ಯೋಜನೆಗಳಿಲ್ಲ. ಎಲ್ಲ ವಿಶ್ವ ಯುವಶಕ್ತಿಗಾಗಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುತ್ತದೆ. ಆದರೆ ಕಾಂಗ್ರೆಸ್ ಉದ್ಯೋಗ ನೀಡುವ ಭರವಸೆ ಭರವಸೆಯಾಗಿಯೇ ಉಳಿಯಿತು.
ನಿಮ್ಮಲ್ಲಿ ಯಾರಿಗಾದರೂ ದೆಹಲಿಯ ಸರ್ಕಾರ ಉದ್ಯೋಗ ನೀಡಿದೆಯಾ? ಇಷ್ಟೇ ಅಲ್ಲ, ದೇಶದ ಕೋಟ್ಯಂತರ ಜನರನ್ನು ಕೇಂದ್ರ ಸರ್ಕಾರ ನಿರುದ್ಯೋಗಿಯಾಗಿಸಿತು. ಕಾರ್ಖಾನೆಗಳು ಬಂದ್ ಆದವು, ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಕಲ್ಲಿದ್ದಲು ತಿಂದರು, ಕಲ್ಲಿದ್ದಲಿನ ಫೈಲ್ ತಿಂದರು. ಸುಪ್ರೀಂ ಕೋರ್ಟ್ ನಲ್ಲಿ ಹೇಳುತ್ತಾರೆ ಫೈಲ್ ಕಾಣೆಯಾಗಿದೆ. ಫೈಲ್ ಮಾತ್ರವಲ್ಲ ಸರ್ಕಾರವೇ ಕಾಣೆಯಾಗಿದೆ. ಹಿಂದೂಸ್ಥಾನದ ಜೀವನವೇ ಹೋಗಿದೆ. ಕಾಂಗ್ರೆಸ್ ಸರ್ಕಾರ ದೇಶದ ಜನರ ಜೀವನವನ್ನೇ ಕೆಡಿಸಿತು.
ಕೌಶಲ್ಯಾಭಿವೃದ್ಧಿ ಬಗ್ಗೆ ವಿಶ್ವ ಯೋಚಿಸುತ್ತಿದ್ದರೆ ದೆಹಲಿಯ ಸರ್ಕಾರ ಏನು ಮಾಡಿತು? ನಿಮಗೆ ಈ ವಿಷಯ ಕೇಳಿ ಆಶ್ಚರ್ಯವಾಗಬಾರದು. ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿ 1000 ಕೋಟಿ ನೀಡಿತು, ಗುಜರಾತ್ ಸಣ್ಣ ರಾಜ್ಯ. ಗುಜರಾತ್ ನಲ್ಲಿ ನಾವು ಕೌಶಲ್ಯಾಭಿವೃದ್ಧಿಗೆ 800 ಕೋಟಿ ರೂ. ಮೀಸಲಿಟ್ಟಿದ್ದೇವೆ. ಕೇಂದ್ರ ಸರ್ಕಾರಕ್ಕೆ ಯುವ ಜನರ ಬಗ್ಗೆ ಚಿಂತೆಯಿಲ್ಲ. ಭಾರತ ಯುವ ದೇಶ. ಕೌಶಲ್ಯಾಭಿವೃದ್ಧಿಗೆ ಗಮನ ಹರಿಸಬೇಕು.

ಕೇಂದ್ರ ಸರ್ಕಾರ ಪ್ರೈಮ್ ಮಿನಿಸ್ಟರ್ ನ್ಯಾಷನಲ್ ಕೌನ್ಸಿಲ್ ಆನ್ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್. ಇದಾದ ಬಳಿಕ 25 ದಿನದಲ್ಲಿ ಇನ್ನೊಂದು ಸಮಿತಿ ರಚಿಸಿತು. ಎರಡನೇ ಮಗು ಹುಟ್ಟಿಸಿತು. ಇದಕ್ಕೆ ಸ್ಕಿಲ್ ಡೆವಲಪ್ ಮೆಂಟ್ ಕೋ ಆರ್ಡಿನೇಷನ್ ಕಮಿಟಿ. ಎರಡೂವರೆ ವರ್ಷ ಸಂಪೂರ್ಣ ಮೌನವಾಗಿ ಕುಳಿತಿತ್ತು. 2011ರಲ್ಲಿ ಸ್ಕಿಲ್ ಡೆವಲಪ್ ಮೆಂಟ್ ಅಡ್ವೈಸರಿ ಕಚೇರಿ ಆರಂಭಿಸಿತು. ಎಲ್ಲಾ ಕಚೇರಿಗಳನ್ನು ಕ್ಲೋಸ್ ಮಾಡಿತು. ಬಳಿಕ ಸ್ಕಿಲ್ ಡೆವಲಪ್‌ಮೆಂಟ್ ಏಜೆನ್ಸಿ ಆರಂಭಿಸಿತು. ಈ ಏಜೆನ್ಸಿ ಏನು ಮಾಡುತ್ತೋ ನೋಡೋಣ.
ಪ್ರಜಾತಂತ್ರದ ಕತ್ತು ಹಿಸುಕುವುದು ಕಾಂಗ್ರೆಸ್ ಶೈಲಿ. ಮಾಧ್ಯಮಗಳ ಮೇಲೆ ಅಂಕುಶ ಹಾಕಿದ್ದರು. ಅಂದು ತುರ್ತು ಪರಿಸ್ಥಿತಿ ಇತ್ತು. ಈಗಲೂ ಅದೇ ಸ್ಥಿತಿ ಇದೆ. ಸೋಷಿಯಲ್ ಮೀಡಿಯಾಗಳ ಬೂಮ್ ಇದೆ. ಎಲ್ಲರೂ ಸಾಮಾಜಿಕ ತಾಣಗಳ ಮೂಲಕ ತಮ್ಮ ಧ್ವನಿ ಎತ್ತುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ತಾಣಗಳ ಹೆದರಿಕೆ ಶುರುವಾಗಿದೆ. ಇದಕ್ಕೂ ಕಡಿವಾಣ ಹಾಕಲು ಮುಂದಾಗಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಟಿವಿ ಚಾನೆಲ್‌ಗಳಿಗೆ ಪತ್ರ ಬರೆಯಿತು. ಆಗಸ್ಟ್ 15ರಂದು ಪ್ರಧಾನ ಮಂತ್ರಿ ಭಾಷಣವನ್ನು ಮಾಡಿದರು. ಇದಾದ ಬಳಿಕ ಅಷ್ಟು ಸಣ್ಣ ರಾಜ್ಯ ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಷಣ ಪ್ರಚಾರ ಯಾಕೆ ಮಾಡಿದ್ರಿ ಎಂದು ಕೇಂದ್ರ ಸರ್ಕಾರ ಫತ್ವಾ ಹೊರಡಿಸಿತು. ಇತರೆ ಭಾಷಣಗಳ ಜೊತೆ ಹೋಲಿಕೆ ಯಾಕೆ ಅಂತಾ ಕೇಳಿತು.











Click it and Unblock the Notifications