ಕರ್ನಾಟಕದ ಯುವಜನತೆಗೆ ಸ್ಪೆಷಲ್ ಪ್ಯಾಕೇಜ್
(ಮೋದಿ ಭಾಷಣ ಪೂರ್ಣಪಾಠ - ಭಾಗ 2) ಇಂದು ವಿಶ್ವದಲ್ಲಿ ಐಟಿ ಕ್ಷೇತ್ರದಲ್ಲಿ ಕರ್ನಾಟಕ, ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಗಳು ವಿಶ್ವಾದ್ಯಂತ ತಮ್ಮ ಶಕ್ತಿ ತೋರಿಸಿಕೊಟ್ಟಿದ್ದಾರೆ. ಭಾರತದ ಹೆಸರು ಬೆಳಗಿಸಿದ್ದಾರೆ. ಸಿಲಿಕಾನ್ ವ್ಯಾಲಿ ಬಳಿಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಾಫ್ಟ್ ವೇರ್ ಎಂಜಿನಿಯರ್ ಗಳಿದ್ದಾರೆ.
2000ನೇ ಇಸವಿಯಲ್ಲಿ ಐಟಿ ಕಾಯ್ದೆ ಜಾರಿಗೆ ಬಂತು. ವಾಜಪೇಯಿಯವರು ವಿಜ್ಞಾನಕ್ಕೆ ಒತ್ತು ನೀಡಿದರು. ಆಧುನಿಕ ಭಾರತ ನಿರ್ಮಾಣಕ್ಕೆ ಅವರು ಕಂಡ ಕನಸು ನವ ಯುವಕರ ಜೊತೆಯಾಗಿತ್ತು. ಯುವಕರ ಭಾಗ್ಯದ ಜೊತೆಗಿತ್ತು.
2003ರ ಆ.15ರಂದು ವಾಜಪೇಯಿ ಅವರು, ಕೆಂಪು ಕೋಟೆಯಿಂದ ಚಂದ್ರಯಾನದ ಘೋಷಣೆ ಮಾಡಿದರು. 2003ರ ಕನಸು 2008ರಲ್ಲಿ ಸಾಕಾರವಾಯಿತು. ನಾವು ಚಂದ್ರಯಾನದತ್ತ ಮುನ್ನಡೆದವು. ಮೊನ್ನೆಯಷ್ಟೇ ಮಂಗಳ ಯಾನ. ಮಂಗಳನತ್ತ ಸಾಗಲು ನಾವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದೇವೆ. ಆದರೆ, ಮಹಾಪುರುಷರು ವ್ಯವಸ್ಥೆಯ ಬಗ್ಗೆ ಚಿಂತೆ ಮಾಡುತ್ತಾರೆ. ಆದರೆ ವ್ಯವಸ್ಥೆ ತಪ್ಪು ಕೈಗಳಿಗೆ ಹೋದಾಗ ಆಗ ದೇಶ ಸ್ಥಿತಿ ಏನಾಗುತ್ತದೆ ಅನ್ನೋದು ದೇಶದ ಐಟಿ ಮಂದಿಗೆ ಗೊತ್ತು.

ಅಟಲ್ ಸರ್ಕಾರವಿದ್ದಾಗ ನಮ್ಮ ದೇಶದಲ್ಲಿ ಐಟಿ ವಲಯದ ಬೆಳವಣಿಗೆ ಶೇ.40 ಇತ್ತು. ಯುಪಿಎ 1ರ ಅವಧಿಯಲ್ಲಿ ಶೇ.40ರಿಂದ ಶೇ.35ಕ್ಕೆ ಇಳಿಯಿತು. ಕೇಂದ್ರ ಕಾಂಗ್ರೆಸ್ ಸರ್ಕಾರ ಯುವ ಐಟಿ ಎಂಜಿನಿಯರ್ ಗಳ ಮೇಲೆ ಪ್ರಹಾರ ನಡೆಸಿತು. ಯುಪಿಎ-2 ಬಂತು, ಈಗ ಐಟಿ ವಲಯದ ಬೆಳವಣಿಗೆ ಶೇ.9ಕ್ಕೆ ಬಂದು ನಿಂತಿದೆ. ನೀವೇ ಹೇಳಿ. ಬೆಳವಣಿಗೆ ಇಷ್ಟೇ ಆದರೆ ರಫ್ತು ಹೇಗೆ ಸಾಧ್ಯ? ನಮ್ಮ ಯುವಕರು ನಿರುದ್ಯೋಗಿಗಳಾದರೆ ದೇಶದ ಭವಿಷ್ಯ ಏನಾಗಬಹುದು? ಭಾರತ ಎಷ್ಟು ಹೆಚ್ಚು ಸೆಂಟರ್ ಫಾರ್ ಎಕ್ಸಲೆನ್ಸಿ ನಿರ‍್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋ ವಿಷಾದವಿದೆ.
ವಿಶ್ವದ ಅತಿದೊಡ್ಡ ರೈಲ್ವೆ ನೆಟ್ ವರ್ಕ್ ಜೊತೆ ಇದೆ. ರೈಲು ಇಲಾಖೆ ಸ್ವತಃ ದೇಶದ 4 ಭಾಗಗಳಲ್ಲಿ ರೈಲ್ವೆ ಇಲಾಖೆಗೆ ಬೇಕಾಗುವ ಉದ್ಯೋಗಿಗಳು ಹಾಗೂ ಸಿಬ್ಬಂದಿಗಾಗಿ ವಿವಿ ಸ್ಥಾಪಿಸಲು ಸಾಧ್ಯವಿರಲಿಲ್ಲವೇ? ಅಲ್ಲಿಂದಲೇ ನವ ಯುವಕರನ್ನು ರಚಿಸಲು ಸಾಧ್ಯವಿರಲಿಲ್ಲವೇ? ಆಧುನೀಕರರಣ ಮಾಡಲು ಸಾಧ್ಯವಿರಲಿಲ್ಲವೇ? ಆದರೆ ಕೇಂದ್ರ ಸರ್ಕಾರ ಅದನ್ನು ಮಾಡಲಿಲ್ಲ. ಆದರೆ ರೈಲ್ವೆಯನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿತು. ಇದರಿಂದಾಗಿ ಇಂದು ರೈಲಿನ ವ್ಯವಸ್ಥೆ ಹದಗೆಟ್ಟಿದೆ.
ದೇಶ ಆರ್ಥಿಕ ಸಂಕಷ್ಟದಲ್ಲಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಯುಪಿಎಯ ರೂಪಾಯಿ ಐಸಿಯುನಲ್ಲಿದೆ. ನಮ್ಮ ರಫ್ತು ಕಮ್ಮಿಯಾಗಿದೆ. ದೆಹಲಿಯ ಸರ್ಕಾರ ಪಿಂಕ್ ರೆವೆಲ್ಯೂಷನ್ ಆರಂಭಿಸಿತು, ಮಟನ್ ರಫ್ತು ಮಾಡಲು ಆರಂಭಿಸಿತು. ದೇಶದ ಜಾನುವಾರುಗಳನ್ನು ರಫ್ತು ಮಾಡಲು ಕತ್ತರಿಸುತ್ತಿದ್ದಾರೆ. ಕಸಾಯಿಖಾನೆಗಳಿಗೆ ಇನ್ಸೆಂಟಿವ್, ಸಬ್ಸಿಡಿ ನೀಡುತ್ತೀರಿ. ನೀವು ಕಸಾಯಿಖಾನೆಗಳಿಗೆ ಇನ್ಸೆಂಟಿವ್ ನೀಡುತ್ತಿದ್ದೀರಲ್ಲಾ, ಅದೇ ರೀತಿಯ ಇನ್ಸೆಂಟಿವ್ ಕರ್ನಾಟಕದ ಯುವಕರಿಗೆ ನೀಡಿದ್ದರೆ, ಸ್ಪೆಷಲ್ ಪ್ಯಾಕೇಜ್ ನೀಡಿದ್ದರೆ ಆಮದು ರಫ್ತಿಗೆ ಇನ್ಸೆಂಟಿವ್ ನೀಡಿದ್ದರೆ ಈ ದುರ್ಗತಿ ಬರುತ್ತಿರಲಿಲ್ಲ.
ನಮ್ಮ ಗೋವುಗಳು ಬದುಕುತ್ತಿದ್ದವು. ಆದರೆ ಕಾಂಗ್ರೆಸ್ ನವರ ಆದ್ಯತೆ ನೋಡಿ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂತು. ಮೊದಲ ಸಂಪುಟ ಸಭೆಯಲ್ಲಿ ಬಿಜೆಪಿ ಸರ್ಕಾರ ತಂದಿದ್ದ ಗೋರಕ್ಷಣೆ ಕಾನೂನನ್ನು ವಾಪಸ್ ಪಡೆಯಿತು. ಈ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮುಂದುವರಿಯುವಂತೆ ಮಾಡಿತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಪೋಟಾ ಕಾಯ್ದೆ ವಾಪಸ್ ಪಡೆದು ಅಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿತು. ಈ ಮೂಲಕ ಭಯೋತ್ಪಾದಕರು, ನಕ್ಸಲರು ಬೆಳೆಯುವಂತೆ ಮಾಡಿತು.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications