ಬೆಂಗಳೂರಲ್ಲಿ ಮೋದಿ ಮಾಡಿದ ಭಾಷಣದ ಪೂರ್ಣಪಾಠ
ಬೆಂಗಳೂರು, ನ. 18 : ಬಿಜೆಪಿಯ ಬಹು ನಿರೀಕ್ಷಿತ 'ಭಾರತ ಗೆಲ್ಲಿಸಿ' ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಿತು. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯದ ವಿವಿಧ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.
ಮೋಡಾಚ್ಛಾದಿತ ವಾತಾವರಣವಿದ್ದರೂ ಅರಮನೆ ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಗುಜರಾತ್ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.
ವೇದಿಕೆಯಲ್ಲಿ ವಿರಾಜಮಾನರಾಗಿರುವ ಆದರಣೀಯ ರಾಜನಾಥ್ ಸಿಂಗ್ ಜೀ, ಪ್ರಹ್ಲಾದ್ ಜೋಶಿಜೀ, ವೆಂಕಯ್ಯ ನಾಯ್ಡುಜೀ, ಥಾವರ್ ಚಂದ್ ಗೆಹ್ಲೋಟ್ ಜೀ, ಅನಂತ್ ಕುಮಾರ್ ಜೀ, ಪ್ರಹ್ಲಾದ್ ಜೋಶಿ, ಸದಾನಂದ ಗೌಡಾಜೀ, ಜಗದೀಶ್ ಶೆಟ್ಟರ್, ಭಾರತೀಯ ಜನತಾ ಪಕ್ಷದ ಎಲ್ಲಾ ವರಿಷ್ಠ ನಾಯಕರೇ, ಬೆಂಗಳೂರಿನ, ಕರ್ನಾಟಕದ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ, ಸಂತ ಬಸವೇಶ್ವರ, ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ನನ್ನ ಸತ್ಪ್ರಣಾಮಗಳು.

ಬಂಧು ಭಗಿನಿಯರೇ, ಇಂದು ನಾನು ಬೆಂಗಳೂರಿಗೆ ಬಂದಿದ್ದೇನೆ. ಮೊದಲಿಗೆ ವಿಜ್ಞಾನ ಜಗತ್ತಿನಲ್ಲಿ ಭಾರತಕ್ಕೆ ಗೌರವ ತಂದ ಪ್ರೊ. ಸಿ ಎನ್ ಆರ್ ರಾವ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತ ಕ್ರೀಡಾ ಕ್ಷೇತ್ರವನ್ನು ಉತ್ತುಂಗಕ್ಕೇರಿಸಿದ ಸಚಿನ್ ಗೂ ಭಾರತ ರತ್ನ ಪಡೆದಿದ್ದಕ್ಕೆ ಅಭಿನಂದನೆ.
ನಮ್ಮ ಬೆಂಗಳೂರು ಅಭಿವೃದ್ಧಿಯಲ್ಲಿ ಭಾರತದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನವೇ ಸ್ಥಾನ ಗಳಿಸಿತ್ತು. ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವಿದ್ಯುತ್ ಪಡೆದ ನಗರ ಬೆಂಗಳೂರು. ಇದು ಜ್ಞಾನದ ಶತಾಬ್ದಿ. ಇಂದು ಉನ್ನತ ಶಿಕ್ಷಣ, ಸೆಂಟರ್ ಫಾರ್ ಎಕ್ಸಲೆನ್ಸಿಯಲ್ಲಿ ಬೆಂಗಳೂರು ಜ್ಞಾನ ನಗರಿ ಎಂಬ ಹೆಸರಿನಲ್ಲಿ ಸ್ಥಾನ ಪಡೆದಿದೆ. ಎಲ್ಲಾ ಕರ್ನಾಟಕ ವಾಸಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ನಾನು ಬೆಂಗಳೂರಿಗೆ ಹಲವು ಬಾರಿ ಬಂದಿದ್ದೇನೆ. ಕರ್ನಾಟಕ ಇತಿಹಾಸದಲ್ಲಿ ಯಾವತ್ತೂ ರಾಜಕೀಯ ಪಕ್ಷಕ್ಕೆ ಇಂತಹ ದೃಶ್ಯ ನೋಡುವ ಸೌಭಾಗ್ಯ ಸಿಕ್ಕಿಲ್ಲ. ಎಲ್ಲಿ ನೋಡಿದರೂ ಕೇಸರಿ ಸಮುದ್ರದ ಅಲೆ ಏಳುತ್ತಿದೆ. ಇದೆಂತಹ ಅದ್ಭುತ ದೃಶ್ಯ. ಅನಂತ್, ಪ್ರಹ್ಲಾದ್ ಹಾಗೂ ಅಶೋಕ್ ಬಳಿ ಕೇಳಿದೆ. ಈ ರೀತಿ ಮುಂಚೆ ಯಾವಾಗ ಹೀಗೆ ಆಗಿತ್ತು? ಅವರು ಹೇಳಿದರು. ಬಿಜೆಪಿ ಮಾತ್ರವಲ್ಲ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಯಾವತ್ತೂ ಇಷ್ಟು ಜನ ಸೇರಿರಲಿಲ್ಲ. ಇದರ ಹಿಂದೆ ಕರ್ನಾಟಕ ಬಿಜೆಪಿ ಕಾರ್ಯಕರ್ತರ ಶ್ರಮವಿದೆ. ನಿಮಗೆ ನನ್ನ ಅಭಿನಂದನೆ.
ಬಿಜೆಪಿ ಮೇಲೆ ದಾಳಿ ಹೆಚ್ಚಾಗುತ್ತಿದೆ. ನರೇಂದ್ರ ಮೋದಿ ಮೇಲೆಯೂ ದಾಳಿ ಹೆಚ್ಚಾಗುತ್ತಿದೆ. ಅವರಿಗೆ ಇಂತಹ ದೃಶ್ಯ ನೋಡಲು ಸಿಗುತ್ತಿಲ್ಲ. ಬಿಜೆಪಿಯನ್ನು ಸದೆಬಡಿಯಲು ಯಾವ ರೀತಿಯ ಭಾಷೆ ಪ್ರಯೋಗ, ಷಡ್ಯಂತ್ರ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಸಂದರ್ಭದಲ್ಲಿ ಇಬ್ಬರು ಪ್ರಧಾನಿಗಳನ್ನು ಸ್ಮರಿಸುತ್ತೇನೆ. ಭಾರತದ ಭಾಗ್ಯ ಬದಲಿಸಲು ಇಬ್ಬರು ಪ್ರಧಾನಿಗಳು ನಮಗೆ ಸಂದೇಶ ನೀಡಿದ್ದಾರೆ.
ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳಿದರು - 'ಜೈ ಜವಾನ್, ಜೈ ಕಿಸಾನ್'
ವಾಜಪೇಯಿ ಹೇಳಿದರು - 'ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್'
-
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications