ಹಣ್ಣು-ತರಕಾರಿ ಬೆಲೆಯಲ್ಲಿ ದಿಢೀರ್ ಏರಿಕೆ: ಇಂದಿನ ಬೆಲೆ ಎಷ್ಟು?
ಬೆಂಗಳೂರು, ಮೇ 9: ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ವ್ಯಾಪಾರ-ವಹಿವಾಟಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ಅತ್ತ ಸಂಬಳ ಕಡಿತ ಮತ್ತು ಆರ್ಥಿಕ ಸಂಕಷ್ಟದಿಂದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದರೆ, ಇತ್ತ ತರಕಾರಿ ಮತ್ತು ಹಣ್ಣಿನ ಬೆಲೆ ಜಾಸ್ತಿಯಾಗಿದೆ.
Recommended Video
ಕಳೆದ ಎರಡು ಮೂರು ದಿನಗಳಿಗೆ ಹೋಲಿಸಿದರೆ, ಇಂದು ಕೆಲ ತರಕಾರಿ ಮತ್ತು ಹಣ್ಣುಗಳ ರೇಟು ಹೆಚ್ಚಾಗಿದೆ.
ಒಂದು ಕೆ.ಜಿ ಸೇಬಿನ ಬೆಲೆ ಮೂರು ದಿನಗಳ ಹಿಂದೆ 100 ರೂಪಾಯಿ ಇತ್ತು. ಇವತ್ತು ಕೆ.ಜಿ ಸೇಬಿನ ದರ 190 ಆಗಿದೆ. 80 ರೂಪಾಯಿ ಇದ್ದ ಕೆ.ಜಿ ದಾಳಿಂಬೆ ಬೆಲೆ ಇಂದು 140ಕ್ಕೆ ಏರಿದೆ. 80 ರೂಪಾಯಿ ಇದ್ದ ದ್ರಾಕ್ಷಿ ಬೆಲೆ 100 ರೂಪಾಯಿ ಆಗಿದೆ. ಇಂದು ರಸಪುರಿ ಮಾವಿನ ಬೆಲೆ 100 ರೂಪಾಯಿ, ಸಪೋಟ ಬೆಲೆ 70 ರೂಪಾಯಿ, ಪಚ್ಚ ಬಾಳೆಹಣ್ಣಿನ ಬೆಲೆ ಕೆ.ಜಿಗೆ 30 ರೂಪಾಯಿ ಆಗಿದೆ.

ಎರಡು ದಿನಗಳ ಹಿಂದೆ ಬೀನ್ಸ್ ಬೆಲೆ ಕೆ.ಜಿಗೆ 60 ರೂಪಾಯಿ ಇತ್ತು. ಇಂದು 70 ರೂಪಾಯಿ ಆಗಿದೆ. 60 ರೂಪಾಯಿ ಇದ್ದ ಕೆ.ಜಿ ಕ್ಯಾರೆಟ್ ಬೆಲೆ ಈಗ 80 ರೂಪಾಯಿ ಆಗಿದೆ. 40 ರೂಪಾಯಿ ಇದ್ದ ಆಲೂಗೆಡ್ಡೆ ಬೆಲೆ 50 ಆಗಿದೆ. ಹೀರೇಕಾಯಿ 50 ರೂಪಾಯಿ, ಬೆಳ್ಳುಳ್ಳಿ 80 ರೂಪಾಯಿ, ಟೊಮ್ಯಾಟೊ 20 ರೂಪಾಯಿ, ಶುಂಠಿ 30 ರೂಪಾಯಿ, ಲಿಂಬೆ 10 ರೂಪಾಯಿ, ಈರುಳ್ಳಿ 50 ರೂಪಾಯಿಗೆ ಏರಿಕೆಯಾಗಿದೆ.












Click it and Unblock the Notifications