ಬೆಂಗಳೂರಿನಲ್ಲಿ ಜು.17ರಂದು ಬೃಹತ್ ಉಚಿತ ಆರೋಗ್ಯ ಶಿಬಿರ
ಬೆಂಗಳೂರು, ಜುಲೈ 16 : ವಾಸವಿ ಕ್ಲಬ್ಸ್ ಇಂಟರ್‌ನ್ಯಾಷನಲ್ (ಜಿಲ್ಲೆ -ವಿ 301ಎ) ವತಿಯಿಂದ 3ನೇ ಬಾರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರಿನಲ್ಲಿ ಜುಲೈ 17ರಂದು ಭಾನುವಾರ ಆಯೋಜಿಸಲಾಗಿದೆ.
ಭಾನುವಾರ ಜುಲೈ 17ರಂದು ನಡೆಯುವ ಆರೋಗ್ಯ ಶಿಬಿರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಲಿದ್ದು, ಮಾಜಿ ಗೃಹ ಸಚಿವ ಪಿಜಿಆರ್ ಸಿಂಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಿಮ್ಸ್ ಹಾಸ್ಪಿಟಲ್, ವಿಎಸ್ ಡೆಂಟಲ್ ಕೇರ್, ಒಕ್ಕಲಿಗರ ಸಂಘ ಡೆಂಟಲ್ ಕಾಲೇಜು ಮತ್ತು ಅಪೊಲೋ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಲಿರುವ ಈ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ತಜ್ಞ ವೈದ್ಯರು ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. [ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ]

ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆ, ಬಿಪಿ, ಇಸಿಜಿ, ಎಕೋ, ಶುಗರ್ ಟೆಸ್ಟ್, ಆರ್ಥೋಪೆಡಿಕ್ಸ್, ನರರೋಗ ತಪಾಸಣೆ, ಥೈರಾಯಿಡ್, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ; ದಂತ ತಪಾಸಣೆ, ನೇತ್ರ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ತಜ್ಞವೈದ್ಯರು ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಈ ಬಾರಿಯ ಶಿಬಿರದಲ್ಲಿ ದಂತ ತಪಾಸಣೆಗಾಗಿಯೇ 2 ಕೋಟಿ ರು. ಮೌಲ್ಯದ ಸರ್ಜಿಕಲ್ ವಿಶೇಷ ಬಸ್ ಆಗಮಿಸಲಿದೆ. ದಂತ ತಪಾಸಣೆ, ಚಿಕಿತ್ಸೆ ಸೇರಿದಂತೆ ಹಲವು ಆಧುನಿಕ ಚಿಕಿತ್ಸಾ ಸೌಲಭ್ಯಗಳು ಈ ಬಸ್‌ನಲ್ಲಿರುವುದು ವಿಶೇಷ. [ರಕ್ತದೊತ್ತಡ ಮಿದುಳಿಗೆ ಕೊಡಲಿ ಪೆಟ್ಟು ನೀಡೀತು, ಹುಷಾರ್!]
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ, ಇದರ ಲಾಭ ಪಡೆಯಬಹುದು ಎಂದು ರಜತಾ ಡೆವಲಪರ್ಸ್ ಅಧ್ಯಕ್ಷ ವಿಎನ್. ಕೆಸಿಜಿಎಫ್ ಭೂಪಾಳಂ ಸುನಿಲ್ ಹೇಳಿದ್ದಾರೆ. ಜತೆಗೆ ಕಣ್ಣಿನ ಪೊರೆ ಇದ್ದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸಾ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದೂ ಅವರು ತಿಳಿಸಿದರು. [ಮಲೇರಿಯಾ ಬಗ್ಗೆ ತಿಳಿಯಲೇಬೇಕಾದ 10 ಸಂಗತಿಗಳು]
ದಿನಾಂಕ : 17 ಜುಲೈ, 2016, ಭಾನುವಾರ
ಸಮಯ : ಬೆಳಗ್ಗೆ 9 ಗಂಟೆಯಿಂದ
ಸ್ಥಳ : ಆದಿಲಕ್ಷ್ಮಮ್ಮ ಕನ್‌ವೆನ್ಷನ್ ಹಾಲ್, ವಾಸವಿ ದೇವಸ್ಥಾನದ ಎದುರು, ವಿವಿಪುರಂ, ಬೆಂಗಳೂರು.
-
ದುಬಾರಿ ಆ್ಯಂಟಿ ಏಜಿಂಗ್ ಕ್ರೀಮ್ಗಿಂತ ಈ ತರಕಾರಿಯೇ ಪರಿಣಾಮಕಾರಿಯಂತೆ: ಚಿರಯೌವನ ತ್ವಚೆಗೆ ನೈಸರ್ಗಿಕ ಉಪಾಯ -
CBSE 10ನೇ ತರಗತಿ ಫಲಿತಾಂಶ 2026: ದಕ್ಷಿಣ ಭಾರತದ ವಿದ್ಯಾರ್ಥಿಗಳದ್ದೇ ಮೇಲುಗೈ, ಶೇ. 98.91ರಷ್ಟು ಸಾಧನೆ ಮಾಡಿದ ಬೆಂಗಳೂರು -
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕರಿದ ತಿಂಡಿ, ಟೀ-ಕಾಫಿ ಬ್ಯಾನ್: ಸಿರಿಧಾನ್ಯಗಳಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ನಿಮ್ಮ ಮನೆ ದಿಕ್ಕು ಸರಿಯೇ? ರಾಶಿ ಪ್ರಕಾರ ವಾಸ್ತು ಸೂಚನೆಗಳು ಇಲ್ಲಿವೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ











Click it and Unblock the Notifications