Namma Metro: ಹೈದರಾಬಾದ್‌ನಂತೆ 'ಫ್ರೀ ಬಸ್ ಯೋಜನೆ' ಬೆಂಗಳೂರು ಮೆಟ್ರೋ ಮೇಲೆ ದುಷ್ಪರಿಣಾಮ ಬೀರಿಲ್ಲ
ಬೆಂಗಳೂರು, ಮೇ 23: ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದ ಎರಡು ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತಂದಿದೆ. ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆಯಿಂದ ಅಲ್ಲಿನ ಹೈದರಾಬಾದ್ ಮೆಟ್ರೋಗೆ (Hyderabad Metro) ಭಾರಿ ಹೊಡೆತ ಬಿದ್ದಿದೆ. ಆದರೆ ಕರ್ನಾಟಕದಲ್ಲಿ ಶಕ್ತಿ ಯೋಜನೆಯಿಂದಾಗಿ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಸಾರಿಗೆಗೆ ಯಾವುದೇ ತೊಂದರೆ ಆಗಿಲ್ಲ. ಹೇಗೆ ಅಂತಿರಾ ಮುಂದೆ ಓದಿ.
ತೆಲಂಗಾಣದಲ್ಲಿ ಮಹಿಳೆಯರಿಗಾಗಿ ಕಾಂಗ್ರೆಸ್ ಸರ್ಕಾರ 'ಮಹಾಲಕ್ಷ್ಮಿ' ಯೋಜನೆ ಜಾರಿಗೊಳಿಸಿದ ಅಲ್ಲಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದೆ. ಆದರೆ ಇದರಿಂದ ಹೈದರಾಬಾದ್ ಮೆಟ್ರೋ ಯೋಜನೆ ವಿನ್ಯಾಸ-ನಿರ್ಮಾಣ-ಹಣಕಾಸು-ನಿರ್ವಹಿಸುವಿಕೆ-ವರ್ಗಾವಣೆ ಆಧಾರದಲ್ಲಿ ತೊಡಗಿಸಿಕೊಂಡಿದ್ದ ಎಲ್ ಆಂಡ್ ಟಿ ಕಂಪನಿಯು ಯೋಜನೆಯಿಂದ ಹೊರಗುಳಿಯಲು ತೀರ್ಮಾನಿಸಿದೆ. ಈ ಬಗ್ಗೆ ಇತ್ತೀಚೆಗೆ ವರದಿ ಆಗಿದೆ.

ಸದ್ಯ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಇರುವ ಕಾರಣ, ಗ್ಯಾರೆಂಟಿಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಪರಿಚಯಿಸಿದ್ದಕ್ಕೆ ಅವರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಉಚಿತ ಬಸ್ ಪ್ರಯಾಣ ಯೋಜನೆ ಮುಂದುವರಿಸುವುದಾಗಿ ಹೇಳಿದೆ ಎಂದು TOI ಮಾಹಿತಿ ನೀಡಿದೆ.
ಮೆಟ್ರೋ ಓಡಾಟದಲ್ಲಿ ಜನರು ನಿರಾಸಕ್ತಿ
ಮಹಾಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ. ಆದರೆ ತೆಲಂಗಾಣದಲ್ಲಿ ಈ ಯೋಜನೆಯಿಂದ ಹೈದರಾಬಾದ್ ಮೆಟ್ರೋ ಗೆ ಹೊಡೆದ ಬಿದ್ದಿದೆ. ಇಲ್ಲಿ ಮೆಟ್ರೋದಲ್ಲಿ ಜನರು ಓಡಾಡಲು ಆಸಕ್ತಿ ತೋರುತ್ತಿಲ್ಲ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಇಳಿಮುಖದ ಆಗಿದೆ ಎಂದು ಎಲ್‌ಆಂಡ್ ಟಿ ಮುಖ್ಯಸ್ಥರು ಮಾಹಿತಿ ಹಂಚಿಕೊಂಡಿದ್ದರು.
ಆದರೆ ಬೆಂಗಳೂರಿನಲ್ಲಿ ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋ ಪ್ರಯಾಣ ಮತ್ತು ಆದಾಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಪಾದಿಸಿದ್ದಾರೆ. ಇಲ್ಲಿ ಮೆಟ್ರೋ ಪ್ರಯಾಣಿಕರು ದಿನದಿಂದ ದಿನಕ್ಕೆ ಕ್ರಮೇಣವಾಗಿ ಹೆಚ್ಚಾಗುತ್ತಿರುವುದು ಕಂಡು ಬಂದಿದೆ.

67 ಕೋಟಿಗೂ ಹೆಚ್ಚು ಟಿಕೆಟ್
ಕಳೆದ ವರ್ಷ 2023ರ ಜೂನ್ 11ರಂದು ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಅಲ್ಲಿಂದ ಈವರೆಗೆ 67 ಕೋಟಿಗೂ ಹೆಚ್ಚು ಟಿಕೆಟ್‌ಗಳನ್ನು ಮಹಿಳೆಯರಿಗೆ ಉಚಿತವಾಗಿದೆ ನೀಡಲಾಗಿದೆ. ಈ ಯೋಜನೆಯಡಿ BMTC ಸುಮಾರು 879 ಕೋಟಿ ರೂ. ಖರ್ಚು ಮಾಡಿದೆ ಎಂದು ಸಚಿವರು ತಿಳಿಸಿದರು.
ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷ 2023ರ ಜನವರಿಯಲ್ಲಿ 1.7 ಕೋಟಿಯಷ್ಟಿತ್ತು. ಶಕ್ತಿ ಯೋಜನೆ ಜಾರಿ ಬಳಿಕವು ಈ ವರ್ಷ 2024 ರ ಏಪ್ರಿಲ್ ವೇಳೆಗೆ ಆ ಪ್ರಯಾಣಿಕರ ಸಂಖ್ಯೆಯಲ್ಲಿ 2 ಕೋಟಿಗೆ ಏರಿಕೆ ಆಗಿದೆ. ಈ ಅವಧಿಯಲ್ಲಿ ಆದಾಯ 39 ಕೋಟಿ ರೂ.ನಿಂದ 52 ಕೋಟಿ ರೂಪಾಯಿಗೆ ಹೆಚ್ಚಾಗಿದೆ.
ನಮ್ಮ ಮೆಟ್ರೋ ಮೇಲೆ ದುಷ್ಪರಿಣಾಮ ಬೀರಿಲ್ಲ
ಇದರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯು ಮೆಟ್ರೋದ ಪ್ರಯಾಣಿಕರ ಮೇಲೆ ಪರಿಣಾಮ ಬೀರಿಲ್ಲ ಎಂಬುದು ತಿಳಿಯುತ್ತದೆ. ಯೋಜನೆಯ ಪರಿಚಯದ ನಂತರವು ಯಾವ ನಕಾರಾತ್ಮಕ ಬೆಳವಣಿಗೆಗಳು ಆಗಿಲ್ಲ.
ಬೆಂಗಳೂರು ನಮ್ಮ ಮೆಟ್ರೋ ಅಧಿಕಾರಿಗಳ ಪ್ರಕಾರ, ಬೆನ್ನಿಗಾನಹಳ್ಳಿ ಮತ್ತು ಚಲ್ಲಘಟ್ಟದಲ್ಲಿ ಎರಡು ಮೆಟ್ರೋ ಲಿಂಕ್‌ಗಳನ್ನು ತೆರೆಯಲಾಯಿತು. ಇದರಿಂದ ಒಂದೇ ಮಾರ್ಗ (ನೇರಳೆ ಮಾರ್ಗ) ದಲ್ಲಿ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ಸಂಪೂರ್ಣ 48 ಕಿಮೀ ವರೆಗೆ ಸಂಚರಿಸಬಹುದಾಗಿದೆ. ಇದು ಲಕ್ಷಾಂತರ ಜನರಿಗೆ ಅನುಕೂಲ ಮಾಡಿಕೊಟ್ಟಿತು.
ಮೆಟ್ರೋ ಪ್ರಯಾಣಿಕರು, ಆದಾಯದಲ್ಲಿ ನಷ್ಟ ಆಗಿಲ್ಲ
ಇನ್ನೂ ಐಟಿ ಕಂಪನಿಗಳು ಹೈಬ್ರೀಡ್ ಇಲ್ಲವೇ ಕಡ್ಡಾಯ ಕಚೇರಿಯಿಂದ ಕೆಲಸ ಮಾಡುವ ಹಳೇಯ ಪದ್ಧತಿಗಳಿಗೆ ಮರಳಿದವು. ಇದು ಸಹ ಮೆಟ್ರೋ ಪ್ರಯಾಣಿಕರ ಏರಿಕೆಗೆ ಕಾರಣವಾಯಿತು. ಕಳೆದ ಒಂದು ವರ್ಷದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ 2.7 ಕೋಟಿಗೆ ಏರಿಕೆ ಆಗಿದೆ. ಇದೆಲ್ಲ ನೋಡಿದರೆ, ಹೈದರಾಬಾದ್ ಮೆಟ್ರೋ ನಂತೆ, ನಮ್ಮ ಮೆಟ್ರೋ ಸಾರಿಗೆಯು ಪ್ರಯಾಣಿಕರ ನಷ್ಟ, ಆದಾಯ ನಷ್ಟ ಅನುಭವಿಸಿಲ್ಲ ಎಂಬುದು ತಿಳಿಯುತ್ತದೆ.












Click it and Unblock the Notifications