ಜಯನಗರದಲ್ಲಿ ಫೀಲ್ ಬೆಂಗಳೂರು ಸೈಕಲ್ ಡೇ

ಬೆಂಗಳೂರು, ಜ.23 : ಸೈಕಲ್ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿವಿಧ ಸಂಘಟನೆಗಳ ವತಿಯಿಂದ ಪ್ರತಿ ತಿಂಗಳು ನಡೆಸುವ ಫೀಲ್ ಬೆಂಗಳೂರು ಸೈಕಲ್ ಜಾಥಾ ಜ.26ರ ಭಾನುವಾರದಂದು ನಡೆಯಿತು. ಬೆಂಗಳೂರು ದಕ್ಷಿಣ ಭಾಗ ಮತ್ತು ಜಯನಗರದಲ್ಲಿ ಈ ಬಾರಿಯ ಫೀಲ್ ಬೆಂಗಳೂರು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜ.26ರಂದು ಗಣರಾಜ್ಯೋತ್ಸವ ಮತ್ತು ರಸ್ತೆ ಸುರಕ್ಷತಾ ಸಪ್ತಾಹದ ಜೊತೆಗೆ ಫೀಲ್ ಬೆಂಗಳೂರು ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. [ಸೈಕಲ್ ಡೇ ಚಾಲನೆ]

ಜಯನಗರದ 10ನೇ ಮುಖ್ಯರಸ್ತೆಯ ಶಾಲಿನಿ ಕ್ರೀಡಾಂಗಣದಿಂದ ಆರಂಭವಾದ ಸೈಕಲ್ ಜಾಥಾ, ಆರ್.ವಿ.ರಸ್ತೆ, ಅಶೋಕ ಪಿಲ್ಲರ್, ಅರವಿಂದ ರಸ್ತೆಯ ಮೂಲಕ ಪುನಃ ಶಾಲಿನಿ ಕ್ರೀಡಾಂಗಣಕ್ಕೆ ಬಂದು ತಲುಪಿತು. ನಂತರ ಕ್ರೀಡಾಂಗಣದಲ್ಲಿ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸೈಕಲ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾದ ‘ಫೀಲ್‌ ಬೆಂಗಳೂರು' ಸೈಕಲ್‌ ಜಾಥಾವನ್ನು ಡಲ್ಟ್‌, ಬಿಎಂಟಿಸಿ, ತೋಟಗಾರಿಕೆ ಇಲಾಖೆ, ಬಿಟಿಪಿ, ಬಿಎಂಆರ್‌ಸಿಎಲ್‌ ಜಂಟಿಯಾಗಿ ಆಯೋಜಿಸುತ್ತವೆ. ಪತ್ರಿ ತಿಂಗಳ ಕೊನೆಯ ಭಾನುವಾರ ಸೈಕಲ್ ಡೇ ಆಚರಿಸಲಾಗುತ್ತದೆ.

ನಾಲ್ಕನೇ ಕಾರ್ಯಕ್ರಮ ಜಯನಗರದಲ್ಲಿ

ನಾಲ್ಕನೇ ಕಾರ್ಯಕ್ರಮ ಜಯನಗರದಲ್ಲಿ

`ಫೀಲ್ ಬೆಂಗಳೂರು` ಸೈಕಲ್ ಡೇ ಕಾರ್ಯಕ್ರಮ ಸರಣಿಯ ನಾಲ್ಕನೇ ಕಾರ್ಯಕ್ರಮ ಜ.26ರಂದು ಬೆಂಗಳೂರು ದಕ್ಷಿಣ ಭಾಗ ಮತ್ತು ಜಯನಗರದಲ್ಲಿ ನಡೆಯಿತು. ಸಂಸದ ಅನಂತ್ ಕುಮಾರ್ ಜಾಥಾಕ್ಕೆ ಚಾಲನೆ ನೀಡಿದರು.

ಗಣರಾಜ್ಯೋತ್ಸವದ ಜೊತೆ ಸೈಕಲ್ ಜಾಥಾ

ಗಣರಾಜ್ಯೋತ್ಸವದ ಜೊತೆ ಸೈಕಲ್ ಜಾಥಾ

ಜ.26ರ ಗಣರಾಜ್ಯೋತ್ಸವದ ಜೊತೆಗೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಯನಗರದ 10ನೇ ಮುಖ್ಯರಸ್ತೆಯ ಶಾಲಿನಿ ಕ್ರೀಡಾಂಗಣದಿಂದ ಆರಂಭವಾದ ಸೈಕಲ್ ಜಾಥಾ, ಆರ್.ವಿ.ರಸ್ತೆ, ಅಶೋಕ ಪಿಲ್ಲರ್, ಅರವಿಂದ ರಸ್ತೆಯ ಮೂಲಕ ಪುನಃ ಶಾಲಿನಿ ಕ್ರೀಡಾಂಗಣಕ್ಕೆ ಬಂದು ತಲುಪಿತು.

ಯಾರು-ಯಾರು ಭಾಗವಹಿಸಿದ್ದರು

ಯಾರು-ಯಾರು ಭಾಗವಹಿಸಿದ್ದರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಜಯನಗರ ಶಾಸಕ ವಿಜಯ ಕುಮಾರ್ ಮುಂತಾದವರು ಸೈಕಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಯೋಜಕರು ಯಾರು?

ಆಯೋಜಕರು ಯಾರು?

ಸೈಕಲ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಫೀಲ್‌ ಬೆಂಗಳೂರು` ಸೈಕಲ್‌ ಡೇ ಕಾರ್ಯಕ್ರಮವನ್ನು ಡಲ್ಟ್‌, ಬಿಎಂಟಿಸಿ, ತೋಟಗಾರಿಕೆ ಇಲಾಖೆ, ಬಿಟಿಪಿ, ಬಿಎಂಆರ್‌ಸಿಎಲ್‌ ಜಂಟಿಯಾಗಿ ಆಯೋಜಿಸುತ್ತವೆ. ಪತ್ರಿ ತಿಂಗಳ ಕೊನೆಯ ಭಾನುವಾರ ಸೈಕಲ್ ಡೇ ನಡೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+