ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಫಾರೂಕ್ ನಿಧನ

|
Google Oneindia Kannada News

ಬೆಂಗಳೂರು, ನವೆಂಬರ್ 21: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಎಂ.ಫಾರೂಕ್‌ ಇಂದು ನಿಧನ ಹೊಂದಿದ್ದಾರೆ.

75 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಅವರು ಇಂದು ಬೆಳಿಗ್ಗೆ 6 ಗಂಟೆಗೆ ನಿಧನಹೊಂದಿದರು. ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಪತ್ನಿಯನ್ನು ಅಗಲಿದ್ದಾರೆ.

ಸುಪಾರಿ ಕೇಸ್ ರದ್ದುಪಡಿಸಲು ಹೈಕೋರ್ಟಿಗೆ ರವಿ ಬೆಳಗೆರೆ ಅರ್ಜಿಸುಪಾರಿ ಕೇಸ್ ರದ್ದುಪಡಿಸಲು ಹೈಕೋರ್ಟಿಗೆ ರವಿ ಬೆಳಗೆರೆ ಅರ್ಜಿ

1943 ಆಗಸ್ಟ್‌ 17 ರಂದು ಹುಟ್ಟಿದ್ದ ಫಾರೂಕ್ ಅವರು ಬೆಂಗಳೂರು ಮತ್ತು ಕಾಸರಗೋಡಿನಲ್ಲಿ ಶಿಕ್ಷಣ ಮಾಡಿದ್ದರು. ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು.

Former justice of Karnataka high court AM Farooq passed away

ಫಾರೂಕ್ ಅವರು ಹಿರಿಯ ವಕೀಲರು, ನಿವೃತ್ತ ನ್ಯಾಯಮೂರ್ತಿಗಳಾದ ಕೆ.ಜಗನ್ನಾತ ಶೆಟ್ಟಿ, ಸಂತೋಷ ಹೆಗ್ಡೆ ಅವರ ಬಳಿ ಕಿರಿಯ ವಕೀಲರಾಗಿ ಕೆಲಸ ಮಾಡಿದ್ದರು. ಫಾರೂಕ್ ಅವರು 1968ರಲ್ಲಿ ವಕೀಲಿಕೆ ಪ್ರಾರಂಭಿಸಿದ್ದರು.

ನ್ಯಾಷನಲ್ ಹೆರಾಲ್ಡ್ ವಿವಾದ: ತಡೆಯಾಜ್ಞೆ ನೀಡದ ಕೋರ್ಟ್, ಕಾಂಗ್ರೆಸ್‌ಗೆ ಹಿನ್ನಡೆನ್ಯಾಷನಲ್ ಹೆರಾಲ್ಡ್ ವಿವಾದ: ತಡೆಯಾಜ್ಞೆ ನೀಡದ ಕೋರ್ಟ್, ಕಾಂಗ್ರೆಸ್‌ಗೆ ಹಿನ್ನಡೆ

ಫಾರೂಕ್ ಅವರು ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಫಾರೂಕ್ ಅವರ ಮಗಳ ಗಂಡ ಮೊಹಮ್ಮದ್ ನವಾಜ್ ಅವರು ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಧಾರ್ಮಿಕ ಆಚರಣೆ ಮಧ್ಯೆ ಪ್ರವೇಶಿಸುವುದಿಲ್ಲ: ಕೇರಳ ಸರ್ಕಾರಧಾರ್ಮಿಕ ಆಚರಣೆ ಮಧ್ಯೆ ಪ್ರವೇಶಿಸುವುದಿಲ್ಲ: ಕೇರಳ ಸರ್ಕಾರ

ಫಾರೂಕ್ ಅವರ ಪರ್ಥಿವ ಶರೀರವನ್ನು ಹೆಬ್ಬಾಳದ ಮೇಲ್ಸೇತುವೆ ಬಳಿ ಇರುವ ನ್ಯಾಯಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಅಂತ್ಯಕ್ರಿಯೆಯನ್ನು ಇಂದು ಸಂಜೆ 4:30 ಕ್ಕೆ ಜಯಮಹಲ್‌ನಲ್ಲಿರುವ ಅಬ್ದುಲ್ ಖದ್ದೂಸ್ ಕಬ್ರಸ್ಥಾನದಲ್ಲಿ ಮಾಡಲಾಗುತ್ತದೆ.

English summary
Former justice of Karnataka high court AM Farooq passed away today. He was 75 years old and suffering from age related problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X