ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಿವೃತ್ತ ಡಿಜಿಪಿ ಸಿ ದಿನಕರನ್ ವಿಧಿವಶ
ಬೆಂಗಳೂರು, ಅ.4: ನಿವೃತ್ತ ಡಿಜಿಪಿ ಸಿ ದಿನಕರನ್(77) ಗುರುವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಇಂದಿರಾನಗರದ ಕಲ್ಲಪಳ್ಳಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಹೋರಾಟದ ಮೂಲಕ ಡಿಜಿಪಿ ಹುದ್ದೆಯನ್ನು ದಿನಕರ್ ಗಿಟ್ಟಿಸಿಕೊಂಡಿದ್ದರು. ಅವರ ಸಾವಿಗೆ ಸ್ನೇಹಿತರು, ಕುಟುಂಬದವರು, ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.












Click it and Unblock the Notifications