ದಿ. ಧರ್ಮಸಿಂಗ್ ಸೋದರ ಸಂಬಂಧಿ ಪುತ್ರನನ್ನು ಅಪಹರಿಸಿ ಹತ್ಯೆ
ಬೆಂಗಳೂರು, ಫೆಬ್ರವರಿ 1: ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಹೋದರ ಸಂಬಂಧಿಯ ಪುತ್ರ ನಿಗೂಢ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇಪ್ಪತ್ತೆಂಟು ವರ್ಷದ ಸಿದ್ಧಾರ್ಥ ಸಿಂಗ್ ಅವರನ್ನು ಅಪಹರಿಸಿ ಕೊಲೆ ಮಾಡಿ ಆಂಧ್ರ ಪ್ರದೇಶದ ನೆಲ್ಲೂರಿನ ಕಾಡಿನಲ್ಲಿ ಹೂತು ಹಾಕಿರುವ ಸಂಗತಿ ಹೊರ ಬಿದ್ದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಪರಹಣ ಕುರಿತ ಪೂರ್ಣ ವರದಿ ಇಲ್ಲಿದೆ.
ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಸಹೋದರ ಸಂಬಂಧಿ ದೇವೆಂದರ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ದಾಸರಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಜ. 19 ರಂದು ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಇದಾದ ನಂತರ ಸಿದ್ಧಾರ್ಥ ಸಿಂಗ್ ನಾಪತ್ತೆಯಾಗಿದ್ದರು. ಈ ಮಧ್ಯೆ ನಾನು ಸ್ನೇಹಿತರನ್ನು ನೋಡಲು ಅಮೆರಿಕಾಗೆ ಹೋಗುತ್ತಿರುವುದಾಗಿ ಪೋಷಕರಿಗೆ ಮೊಬೈಲ್ ನಲ್ಲಿ ಸಂದೇಶ ರವಾನಿಸಿದ್ದರು. ಆನಂತರ ಎಲ್ಲಾ ಕಡೆ ವಿಚಾರಿಸಿದರೂ ಸಿದ್ಧಾರ್ಥ ಪತ್ತೆಯಾಗಿರಲಿಲ್ಲ. ಕುಟುಂಬಕ್ಕೆ ಅನುಮಾನ ವ್ಯಕ್ತವಾಗಿ ಜ. 25 ರಂದು ಅಮೃತಹಳ್ಳಿ ಪೊಲೀರಿಗೆ ಸಿದ್ಧಾರ್ಥ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದರು.

ನಿಜವಾದ ಸಂಶಯ: ನಾಪತ್ತೆ ಪ್ರಕರಣ ಸಿಕೊಂಡಿದ್ದ ಅಮೃತಹಳ್ಳಿ ಪೊಲೀಸರು ಸಿದ್ಧಾರ್ಥ ಮೊಬೈಲ್ ನಂಬರ್ ಆಧರಿಸಿ ತನಿಖೆ ಮಾಡಿದರೂ ಸುಳಿವು ಸಿಕ್ಕಿರಲಿಲ್ಲ. ಆಂಧ್ರ ಪ್ರದೇಶಕ್ಕೆ ಹೋಗಿರುವ ಬಗ್ಗೆ ಮೊಬೈಲ್ ಸಂಪರ್ಕದಿಂದ ಅಲ್ಪ ಮಾಹಿತಿ ಸಿಕ್ಕಿತ್ತು. ಕೆಲ ದಿನಗಳ ಹಿಂದಷ್ಟೇ ಆಂಧ್ರ ಪ್ರದೇಶದ ನೆಲ್ಲೂರಿನ ಅರಣ್ಯದಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ಮೃತ ದೇಹ ಪತ್ತೆಯಾಗಿತ್ತು. ನೆಲ್ಲೂರು ಪೊಲೀಸರು ಸ್ಥಳ ಮೃತ ದೇಹ ಪರಿಶೀಲನೆ ನಡೆಸಿದಾಗ ಸಿದ್ದಾರ್ಥ ಸಿಂಗ್ ಬಗ್ಗೆ ಬಗ್ಗೆ ಕುರುಹು ಪತ್ತೆಯಾಗಿತ್ತು. ನೆಲ್ಲೂರು ಪೊಲೀಸರನ್ನು ಸಂಪರ್ಕಿಸಿದ್ದ ಅಮೃತಹಳ್ಳಿ ಪೊಲೀಸರಿಗೆ ಸಿದ್ಧಾರ್ಥ ಸಿಂಗ್ ಮೃತ ದೇಹ ಎಂಬುದು ಖಚಿತವಾಗಿತ್ತು. ದುಷ್ಕರ್ಮಿಗಳು ಅಪಹರಿಸಿ ಹತ್ಯೆ ಮಾಡಿ ಕಾಡಿನಲ್ಲಿ ಹೂತು ಹಾಕಿರುವ ಸಂಗತಿ ಹೊರ ಬಿದ್ದಿದೆ.

ಕಾರ್ಯಾಚರಣೆ: ಪ್ರಕರಣದ ಬೆನ್ನಿಗೆ ಬಿದ್ದ ಅಮೃತಹಳ್ಳಿ ಪೊಲೀಸರು ವಿನೋದ್ ಮತ್ತು ಶ್ಯಾಮ್ ಎಂಬುವರು ಸಿದ್ಧಾರ್ಥನನ್ನು ಕಾರಿನಲ್ಲಿ ಅಪಹರಿಸಿ ಹತ್ಯೆ ಮಾಡಿರುವ ಸಂಗತಿಯನ್ನು ಪತ್ತೆ ಮಾಡಿದ್ದಾರೆ. ಈ ಹತ್ಯೆಯ ಸಂಬಂಧ ವಿನೋದ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ಯಾಮ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಬಂಧಿತ ಆರೋಪಿಯೊಂದಿಗೆ ಅಮೃತಹಳ್ಳಿ ಪೊಲೀಸರು ಸ್ಥಳ ಮಹಜರು ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

Recommended Video
ಹತ್ಯೆ ಯಾಕೆ ? ಇನ್ನು ಸಿದ್ಧಾರ್ಥ ಸಿಂಗ್ ಅವರನ್ನು ಕಾರಿನಲ್ಲಿ ಅಪಹರಿಸಿದ್ದು ಯಾಕೆ ? ಶ್ರೀಮಂತನಾಗಿದ್ದ ಸಿದ್ದಾರ್ಥ ಸಿಂಗ್ ನನ್ನು ಅಪಹರಿಸಿ ಹಣ ಮಾಡುವ ಉದ್ದೇಶದಿಂದ ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದು, ಪೂರ್ಣ ತನಿಖೆ ವೇಳೆ ಹತ್ಯೆಯ ರಹಸ್ಯ ಬಯಲಾಗಲಿದೆ.












Click it and Unblock the Notifications