ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು 1982ರಲ್ಲಿಯೇ ಕ್ಯಾಸಿನೋ ನೋಡಿದ್ದೇನೆ: ಮಾಜಿ ಸಿಎಂ ಎಚ್‌ಡಿಕೆ

|
Google Oneindia Kannada News

ಬೆಂಗಳೂರು, ಸೆ. 13: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ ಮಾಫಿಯಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ಸ್ ಮಾಫಿಯಾ, ಶ್ರೀಲಂಕಾ ಪ್ರವಾಸ, ಕೆಸಿನೋ ಹೀಗೆ ಹಲವು ಆರೋಪ-ಪ್ರತ್ಯಾರೋಪಗಳು ರಾಜಕೀಯ ನಾಯಕರಲ್ಲಿ ವಿನಿಮಯ ಆಗುತ್ತಿವೆ. ಒಂದೆಡೆ ಸಿಸಿಬಿ ತನಿಖೆಯನ್ನು ತೀವ್ರಗೊಳಿಸಿದೆ. ಮತ್ತೊಂದೆಡೆ ರಾಜಕೀಯ ನಾಯಕರ ವಾಗ್ಯುದ್ಧ ಕೂಡ ಮತ್ತಷ್ಟು ಜೋರಾಗಿಯೆ ಮುಂದುವರೆದಿದೆ.

ಇಲ್ಲಿಯವರೆಗೆ ಡ್ರಗ್ಸ್ ವಿಚಾರವಾಗಿ ಮಾಡಲಾಗುತ್ತಿದ್ದ ಆರೋಪ-ಪ್ರತ್ಯಾರೋಪಗಳು ಇದೀಗ ಕ್ಯಾಸಿನೋಕ್ಕೆ ಬಂದು ನಿಂತಿವೆ. ಡ್ರಗ್ಸ್ ಜೊತೆಗೆ ಇದೀಗ ಕೆಸಿನೊ ವಿಚಾರವೂ ಪ್ರಸ್ತಾಪವಾಗುತ್ತಿದೆ. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಿಎಂ ಎಚ್‌ಡಿಕೆ ಅವರೊಂದಿಗಿನ ಶ್ರೀಲಂಕಾ ಪ್ರವಾಸದ ಬಗ್ಗೆ ಮಾತನಾಡಿದ್ದರು. ಅದಕ್ಕೆ ಟ್ವೀಟ್ ಮೂಲಕ ನಿನ್ನೆ ಉತ್ತರ ಕೊಟ್ಟಿದ್ದ ಕುಮಾರಸ್ವಾಮಿ ಅವರು, ಇವತ್ತು ಬೆಂಗಳೂರಿನ ನೈಟ್ ಪಾರ್ಟಿಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಡ್ರಗ್ಸ್ ಹಾವಳಿಯಿದೆ ಎಂಬುದನ್ನೂ ವಿವರಿಸಿದ್ದಾರೆ. ಹಾಗಾದರೆ ಬೆಂಗಳೂರಿನ ಎಲ್ಲೆಲ್ಲಿ ಡ್ರಗ್ಸ್ ಹಾವಳಿಯಿದೆ?

ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಿಲ್ಲ

ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಿಲ್ಲ

ಡ್ರಗ್ಸ್ ದಂಧೆ ಇರೋದು ಬರಿ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲ. ನಾನು ಸಿನಿಮಾ ಕ್ಷೇತ್ರದಲ್ಲಿಯೂ ಇದ್ದವನು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿನ ಡ್ರಗ್ಸ್ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಕ್ಯಾಸಿನೋದಲ್ಲಿಯೇ ಡ್ರಗ್ಸ್ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಡ್ರಗ್ಸ್ ಅನ್ನೋದು ನಮ್ಮ ಬೆಂಗಳೂರಿನಲ್ಲಿ ನೈಟ್ ಬಾರ್‌ಗಳಲ್ಲೂ ಇದೆ. ಸಂಜೆ ಮೇಲೆ ಮಲ್ಯ ರಸ್ತೆ, ಎಂಜಿ ರಸ್ತೆಗೆ ಹೋದರೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸಂಜೆ ಮೇಲೆ ನೈಟ್ ಪಾರ್ಟಿಗಳು ನಡೆಯುತ್ತವೆ ಎಂದಿದ್ದಾರೆ.

ಜಮೀರ್ ಅಹ್ಮದ್ ಜತೆ ಕೊಲಂಬೋಗೆ ಹೋಗಿದ್ದು ಏಕೆ? ಕುಮಾರಸ್ವಾಮಿ ಹೇಳಿದ ಸಂಗತಿಜಮೀರ್ ಅಹ್ಮದ್ ಜತೆ ಕೊಲಂಬೋಗೆ ಹೋಗಿದ್ದು ಏಕೆ? ಕುಮಾರಸ್ವಾಮಿ ಹೇಳಿದ ಸಂಗತಿ

1982ರಲ್ಲೇ ಕ್ಯಾಸಿನೋ

1982ರಲ್ಲೇ ಕ್ಯಾಸಿನೋ

ನನ್ನ ಧರ್ಮಪತ್ನಿಯೊಂದಿಗೆ ಮಲೆಷ್ಯಾ ಪ್ರವಾಸಕ್ಕೆ ಹೋಗಿದ್ದಾಗ 1982ರಲ್ಲಿಯೇ ಕ್ಯಾಸಿನೋ ನೋಡಿದ್ದೇನೆ. ಅಲ್ಲಿ ಡ್ರಗ್ಸ್ ಇರಲಿಲ್ಲ. ಡ್ರಗ್ಸ್ ದಂಧೆ ಕ್ಯಾಸಿನೋದಲ್ಲಿ ಮಾತ್ರ ನಡೆಯುತ್ತದೆ ಅಂತಿಲ್ಲ. ಬೆಂಗಳೂರಿನ 5 ಸ್ಟಾರ್ ಹೋಟಲ್‌ಗಳಲ್ಲಿ ಬೆಳಗ್ಗೆ 5 ಗಂಟೆವರೆಗೂ ಮ್ಯಾಸಿಕ್ ಹಾಕಿಕೊಂಡು ನಡೆಸೋ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತದೆ. ಐಪಿಎಲ್, ಕೆಪಿಎಲ್ ಮತ್ತು ಕೆಲವು ಅವಾರ್ಡ್ ಫಂಕ್ಷನ್‌ಗಳಿಗೆ ಸೆಲೆಬ್ರಟಿ ನಟರನ್ನು ಕರೆಸುತ್ತಾರೆ. ಕಾರ್ಯಕ್ರಮ ಮಾಡಿ ಅವಾರ್ಡ್ ಕೊಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳು ಪ್ರಾರಂಭವಾದ ನಂತರ ಡ್ರಗ್ಸ್ ದಂಧೆ ಪ್ರಾರಂಭವಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

ನಿಷ್ಪಕ್ಷಪಾತದ ತನಿಖೆ

ನಿಷ್ಪಕ್ಷಪಾತದ ತನಿಖೆ

ಡ್ರಗ್ ಮಾಫಿಯಾದ ಕುರಿತು ನಿಷ್ಪಕ್ಷಪಾತದ ತನಿಖೆ ನಡೆಯಬೇಕು. ಅದನ್ನು ದಿಕ್ಕು ತಪ್ಪಿಸೋ ಕೆಲಸ ನೆಡೆಯುತ್ತಿದೆ ಎಂದು ಎಚ್‌ಡಿಕೆ ಅವರು ಪರೋಕ್ಷವಾಗಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಜಮೀರ್ ಅಹ್ಮದ್ ನಿಮ್ಮ ಹೆಸರು ಹೇಳುವ ಮೂಲಕ ಗೊಂದಲ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಅವರನ್ನೇ ಕೇಳಬೇಕು. ಯಾಕೆ ಹೇಳಿದರು ಅಂತಾ. ಕಳೆದ 2014ರ ವಿಚಾರವನ್ನು ಈಗ ಯಾಕೆ ಪ್ರಸ್ತಾಪಿಸಿದ್ದಾರೆ ಅಂತಾ. ನಿನ್ನೆಯೆ ನಾನು ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದೇನೆ.

ರಾಜಕಾರಣಿಗಳೂ ಡ್ರಗ್ ಮಾಫಿಯಾದಲ್ಲಿದ್ದಾರೆ: ಸಂಚಲನ ಸೃಷ್ಟಿಸಿದ HDKರಾಜಕಾರಣಿಗಳೂ ಡ್ರಗ್ ಮಾಫಿಯಾದಲ್ಲಿದ್ದಾರೆ: ಸಂಚಲನ ಸೃಷ್ಟಿಸಿದ HDK

Recommended Video

HD kumaraswamy : ನಾವು ಬೇರೆಯವರ ತರ ಕದ್ದು ಮುಚ್ಚಿ ಕೊಲಂಬೊ ಹೋಗಿರ್ಲಿಲ್ಲ | Oneindia Kannada
ತನಿಖೆ ದಾರಿ ತಪ್ಪಿಸಲು..

ತನಿಖೆ ದಾರಿ ತಪ್ಪಿಸಲು..

ಡ್ರಗ್ಸ್ ತನಿಖೆ ಹಾಗೂ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬಳಸಿದ್ದಾರೆ. ನಾವು 2014ರಲ್ಲಿಯೇ ಪಕ್ಷದ ಸಭೆ ಮಾಡಲು ಶ್ರೀಲಂಕಾಕ್ಕೆ ಹೋಗಿದ್ದೇವು. ಗೋವಾ, ಬೇರೆ ಕಡೆಗಿಂತ ಅಲ್ಲಿ ಕಡಿಮೆ ಖರ್ಚಾಗುತ್ತದೆ ಎಂತಾ ಅಲ್ಲಿಗೆ ಹೋಗಿ ಸಭೆ ಮಾಡಿದ್ದೇವು. ಆ ವಿಚಾರವನ್ನ ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು. ನನ್ನನ್ನು ಅವರೇ ಯಾಕೆ ಕರೆದುಕೊಂಡು ಹೋಗಬೇಕು? ನಮಗೆ ಹೋಗೊದಕ್ಕೆ ಬರೋಲ್ವಾ? ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.

English summary
Former CM H D Kumaraswamy has spoken about the Drugs Mafia racket in Bengaluru. Former CM H D Kumaraswamy describes the drug supply at late night parties at 5 star hotels in Bengaluru. Know more about HDK reaction drug mafia
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X