ಗತ ಚರಿತ್ರೆಯನ್ನು ಮರಿಬೇಡ್ರೀ ಮಿಸ್ಟರ್ ಮೋದಿ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಏ 5: ಮೋದಿ ಒಬ್ಬರೇ ಈ ದೇಶ ರಕ್ಷಣೆ ಮಾಡುವವರು ಬೇರೆ ಯಾರ ಕೈಲೂ ಮಾಡೋಕಾಗಲ್ಲ ಅಂತ ಬಿಜೆಪಿಯವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಭೈರೇಗೌಡರ ಪರ ಶುಕ್ರವಾರ (ಏ 5) ಕೆಆರ್ ಪುರದ ಡಾ. ಬಿ. ಆರ್ ಅಂಬೇಡ್ಕರ್ ಮೈದಾನದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಪುಲ್ವಾಮಾದಲ್ಲಿ 42 ಯೋಧರು ಹುತಾತ್ಮರಾದರು. ದೇಶದ ಯೋಧರ ಬಗ್ಗೆ ಅಪಾರ ಗೌರವ ನಮಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಮ್ಮ ನಮನ ಸಲ್ಲಿಸಬೇಕಾಗಿರುವುದು ಸೈನಿಕರಿಗೆ ಹೊರತು, ಬಿಜೆಪಿಯವರಿಗಲ್ಲ. ಸರ್ಜಿಕಲ್ ಸ್ಟ್ರೈಕ್ ರಾಜಕೀಯವಾಗಿ ಬಳಸಿಕೊಳ್ಳಲು ಮೋದಿ ಮತ್ತು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಹನ್ನೆರಡು ಸರ್ಜಿಕಲ್ ಸ್ಟ್ರೈಕ್ ಆಗಿದೆ, ನಾಲ್ಕು ಯುದ್ದಗಳಾಗಿವೆ. ನಾಲ್ಕೂ ಬಾರಿಯೂ ನಾವು ಯುದ್ದದಲ್ಲಿ ಎದುರಾಳಿಯನ್ನು ಸೋಲಿಸಿದ್ದೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇಂದಿರಾಗಾಂಧಿ ಇದ್ದಾಗ ಯುದ್ದ ಮಾಡಿ ಬಾಂಗ್ಲಾದೇಶ ನಿರ್ಮಾಣ ಆಯ್ತಲ್ಲಾ ಅದು ಮೋದಿಯವರು ಮಾಡಿದ್ದಾ? ಇದೇ ವಾಜಪೇಯಿ, ಇಂದಿರಾಗಾಂಧಿ ಅವರನ್ನು ನೀನು ದುರ್ಗೆ ಎಂದು ಹೇಳಿದ್ದರು. ಮೋದಿಯವರಿಗೆ ಇದನ್ನು ಜ್ಞಾಪಿಸುತ್ತೇನೆ ಎಂದ ಸಿದ್ದರಾಮಯ್ಯ, ಚರಿತ್ರೆ ಮರಿಬೇಡ್ರಿ ಮಿಸ್ಟರ್ ಮೋದಿಯವರೇ ಎಂದು ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

ಬಿಜೆಪಿಯವರು ಈಗ ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟು ಹಾಕಿ ಎನ್ನುತ್ತಿದ್ದಾರೆ

ಬಿಜೆಪಿಯವರು ಈಗ ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟು ಹಾಕಿ ಎನ್ನುತ್ತಿದ್ದಾರೆ

ಬಿಜೆಪಿಯವರು ಈಗ ನಮ್ಮ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟು ಹಾಕಿ ಎನ್ನುತ್ತಿದ್ದಾರೆ. ನನ್ನ ಮುಖ ನೋಡಬೇಡಿ ಅಂತಾರೆ ಸದಾನಂದಗೌಡ. ಎಲ್ಲರ ಮುಖವನ್ಬೂ ನೋಡಿಯಾಯಿತು. ಸದಾನಂದಗೌಡರು ಈಗ ಮುಖಹೀನರಾಗಿದ್ದಾರೆ. ಏಕೆಂದರೆ, ಸದಾನಂದಗೌಡ ಅವರು ಏನೂ ಕೆಲಸ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಸದಾನಂದ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೋದಿಯವರೇ ನೀವು ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು

ಮೋದಿಯವರೇ ನೀವು ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು

ಟೀಕೆ ಮಾಡಬೇಕು, ಆದರೆ ಟೀಕೆ ಅರ್ಥಪೂರ್ಣವಾಗಿರಬೇಕು. ಮೋದಿಯವರೇ ನೀವು ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು, ಮೋದಿ ಏನಾದರೂ ಸ್ವಾತಂತ್ರ್ಯ ಹೋರಾಟ ಮಾಡಿದ್ರ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟ ಮಾಡಿ ದೇಶಕ್ಕಾಗಿ ಬಲಿದಾನ ಆಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿ, ಮನೆ ಮಠ ಕಳೆದುಕೊಂಡವರು ನೂರಾರು ಜನ ಇದ್ದಾರೆ. ಆದರೆ ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟ ಮಾಡಲೇ ಇಲ್ಲ - ಸಿದ್ದರಾಮಯ್ಯ.

ಬೆಂಗಳೂರು ಉತ್ತರ ಕ್ಷೇತ್ರದ ಎಂಪಿ ಯಾರೂ ಅಂತಲೇ ಇಲ್ಲಿನ ಜನರಿಗೆ ಗೊತ್ತಿಲ್ಲ

ಬೆಂಗಳೂರು ಉತ್ತರ ಕ್ಷೇತ್ರದ ಎಂಪಿ ಯಾರೂ ಅಂತಲೇ ಇಲ್ಲಿನ ಜನರಿಗೆ ಗೊತ್ತಿಲ್ಲ

ಬೆಂಗಳೂರು ಉತ್ತರ ಕ್ಷೇತ್ರದ ಎಂಪಿ ಯಾರೂ ಅಂತಲೇ ಇಲ್ಲಿನ ಜನರಿಗೆ ಗೊತ್ತಿಲ್ಲ. ಯಾವತ್ತಾದಾರೂ ಜನರ ಕೈಗೆ ಇವರು ಸಿಕ್ಕಿದ್ದಾರಾ ನಮ್ಮ ಹಾಲಿ ಎಂಪಿಗಳು ಎಂದು ವ್ಯಂಗ್ಯವಾಡಿರುವ ಕೃಷ್ಣ ಭೈರೇಗೌಡ, ಅಭಿವೃದ್ಧಿ ಕೆಲಸಕ್ಕೆ ಎಂದಾದರೂ ಗೌಡರು ಕಾಣಿಸಿಕೊಂಡಿದ್ದಾರಾ?

ಯುಪಿಎ ಸರ್ಕಾರ ಇದ್ದಾಗ ತುಮಕೂರು, ಹೊಸೂರು, ಏರ್ಪೋರ್ಟ್ ರೋಡ್ ನಲ್ಲಿ ಫ್ಲೈ ಓವರ್ ನಿರ್ಮಾಣ ಆಯ್ತು ಎಂದು ಅಭ್ಯರ್ಥಿ ಭೈರೇಗೌಡ್ರು ಹೇಳಿದ್ದಾರೆ.

ಯುಪಿಎ ಸ್ಯಾಂಕ್ಷನ್ ಮಾಡಿದ್ದ ಫ್ಲೈ ಓವರ್

ಯುಪಿಎ ಸ್ಯಾಂಕ್ಷನ್ ಮಾಡಿದ್ದ ಫ್ಲೈ ಓವರ್

ಯುಪಿಎ ಸ್ಯಾಂಕ್ಷನ್ ಮಾಡಿದ್ದ ಫ್ಲೈ ಓವರ್ ಅದು, ಆದರೆ ಇದುವರೆಗೂ ಕೂಡ ಎಂಪಿ ಸದಾನಂದಗೌಡರು ಈ ಕ್ಷೇತ್ರಕ್ಕೆ ಒಂದೇ ಒಂದು ಫ್ಲೈ ಓವರ್ ಮಾಡಿಸೋ ಪ್ರಯತ್ನವನ್ನು ಮಾಡಲಿಲ್ಲ. ಕನಿಷ್ಟ ಅವರಿಗೆ ಇಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಅನ್ನೋ ಮಾಹಿತಿಯಾದರೂ ಇದೆಯಾ?

ಎಲ್ಲಿಂದ ಬಂದ್ರು ಅನ್ನೋದು ಮುಖ್ಯ ಅಲ್ಲ, ಎಲ್ಲಿಂದ ಎಲ್ಲಿಗೆ ಬೇಕಾದ್ರೂ ಹೋಗಬಹುದು, ಆದರೆ ಇಲ್ಲಿಗೆ ಬಂದ ಮೇಲೆ ಏನ್ ಮಾಡಿದ್ರು ಅನ್ನೋದು ಮುಖ್ಯ - ಕೃಷ್ಣ ಭೈರೇಗೌಡ
ಸದಾನಂದಗೌಡರು ತನಗೆ ಓಟು ಹಾಕಬೇಡಿ ಮೋದಿ ಅವರಿಗೆ ಓಟ್ ಹಾಕಿ ಅಂತಿದ್ದಾರೆ

ಸದಾನಂದಗೌಡರು ತನಗೆ ಓಟು ಹಾಕಬೇಡಿ ಮೋದಿ ಅವರಿಗೆ ಓಟ್ ಹಾಕಿ ಅಂತಿದ್ದಾರೆ

ಸದಾನಂದಗೌಡರು ತನಗೆ ಓಟು ಹಾಕಬೇಡಿ ಮೋದಿ ಅವರಿಗೆ ಓಟ್ ಹಾಕಿ ಅಂತಿದ್ದಾರಂತೆ, ಸದಾನಂದಗೌಡರು ಮಾನಸಿಕವಾಗಿ ದೈಹಿಕವಾಗಿ ಹೊರಗಿನವರಾಗೇ ಉಳಿದುಬಿಟ್ಟರು. ಇಲ್ಲಿನ ಜನರ ಜೊತೆಗೆ ಬೆರೆಯಲೇ ಇಲ್ಲ ಎಂದು ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವು ಶಾಸಕರು ಈ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+