ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ: ಎಸ್.ಎಂ.ಕೃಷ್ಣ ಮೋದಿಗೆ ಪತ್ರ

ಬೆಂಗಳೂರು, ಜನವರಿ 20: ತುಮಕೂರಿನ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಶಿವಕುಮಾರ ಸ್ವಾಮೀಜಿಗಳಿಗೆ ಇದೀಗ 111 ವರ್ಷ ವಯಸ್ಸು, ಕಳೆದ 80 ವರ್ಷಗಳಿಗಿಂತ ಹೆಚ್ಚು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ದೈವಭಕ್ತಿ, ಆಂಗ್ಲ ಭಾಷೆಯ ಹಿಡಿತ, ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದ ಮೇಲಿನ ನೈಪುಣ್ಯತೆ, ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಟ ಇವೆಲ್ಲಾ ಕ್ಷೇತ್ರಗಳಲ್ಲೂ ಸ್ವಾಮೀಜಿ ಸೇವೆ ಸಲ್ಲಿಸಿದ್ದಾರೆ. ಬಡವ, ಬಲ್ಲಿದರ ಪರವಾಗಿ ನಿಂತಿದ್ದಾರೆ.

Former Chief minister Sm Krishna urges Bharata Ratna to Siddaganga Seer

ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನವನ್ನು ನೀಡಬೇಕು ಎನ್ನುವುದು ಲಕ್ಷಾಂತರ ಭಕ್ತರ ಮನವಿಯಾಗಿದೆ. ಅವರನ್ನು ನಡೆದಾಡುವ ದೇವರೆಂದೇ ಎಲ್ಲರು ನಂಬಿದ್ದಾರೆ. ಶ್ರೀಗಳಿಗೆ ಕೇಂದ್ರ ಸರ್ಕಾರ ಕೊಡ ಮಾಡುವ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+