ಸ್ನೇಹಿತರ ಜೊತೆ ಮಲಗುವಂತೆ ಪತಿಯಿಂದ ಬಲವಂತ: ಬೇಸತ್ತ ಪತ್ನಿಯಿಂದ ಬೆಂಗಳೂರಿನಲ್ಲಿ ದೂರು
ಬೆಂಗಳೂರು ಡಿಸೆಂಬರ್ 10: ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ.
ಥಣಿಸಂದ್ರ ಮುಖ್ಯರಸ್ತೆಯ ಸಂಪಿಗೆಹಳ್ಳಿಯ 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪತ್ನಿ, ತನ್ನ ಪತಿ ತನ್ನ ಸ್ನೇಹಿತರ ಜೊತೆ ಮಲಗಲು ಒತ್ತಾಯಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಜೊತೆಗೆ ಪತಿ ಲೈಂಗಿಕ ವಿಡಿಯೊಗಳೊಂದಿಗೆ ಬ್ಲಾಕ್‌ಮೇಲ್ ಮಾಡುತ್ತಿರುವುದಾಗಿ ದೂರಿದ್ದಾರೆ.
ಪತ್ನಿ ದೂರಿನ ಮೇರೆಗೆ ಟೆಕ್ಕಿಯಾಗಿರುವ 36 ವರ್ಷದ ಪತಿಯನ್ನು ಬಂಧಿಸಲಾಗಿದೆ. ಇತರ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ತನ್ನ ಪತಿ ತನ್ನ ಮೇಲೆ ಹಲ್ಲೆ ನಡೆಸುತ್ತಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಪತಿ ಅವರ ಇಬ್ಬರು ಸ್ನೇಹಿತರ ಜೊತೆ ಮಲಗಲು ಬಲವಂತಪಡಿಸಿದರು. ಬಳಿಕ ತಮ್ಮ ಮೊಬೈಲ್ ಫೋನ್‌ನಲ್ಲಿ ಅದರ ಕೃತ್ಯಗಳನ್ನು ರೆಕಾರ್ಡ್ ಮಾಡಿದ್ದಾನೆ. ಇದನ್ನು ಸಹಿಸದೆ ಆಕೆ ವಿಚ್ಛೇದನ ಕೋರಿದಾಗ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

ದಂಪತಿಗಳು ಏಪ್ರಿಲ್ 2011 ರಲ್ಲಿ ವಿವಾಹವಾದರು. ಇಬ್ಬರಿಗೂ ಒಬ್ಬ ಮಗನೂ ಇದ್ದಾನೆ. ಕುಡಿತ ಹಾಗೂ ಮಾದಕ ವ್ಯಸನಿಯಾಗಿರುವ ಆರೋಪಿ ಪತಿ ಮಹಿಳೆಯ ಸಹೋದರಿಗೆ ಹಣ ನೀಡುವಂತೆ ಬಲವಂತ ಮಾಡುತ್ತಿದ್ದನು ಎಂದು ಪತ್ನಿ ದೂರಿದ್ದಾರೆ. ಇದರಿಂದ ಬೇಸತ್ತ ಪತ್ನಿ ಸಂಪಿಗೆಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕುಡಿದ ಅಮಲಿನಲ್ಲಿ ನನ್ನ ಪತಿ ನನ್ನನ್ನು ಥಳಿಸುತ್ತಿದ್ದರು. ಪರಿಸ್ಥಿತಿ ಹದಗೆಡುತ್ತಿದ್ದಂತೆ ನಾನು ಅವನಿಗೆ ವಿಚ್ಛೇದನ ನೀಡಲು ನಿರ್ಧರಿಸಿದೆ. ಇದರಿಂದ ಕುಪಿತಗೊಂಡ ಆತ ಈಗ ವಿಡಿಯೋ ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ವ್ಯಕ್ತಿ ಗಾಂಜಾ ಚಟ ಹೊಂದಿದ್ದು, ಮನೆಯೊಳಗೆ ಹೂವಿನ ಕುಂಡದಲ್ಲಿ ಎರಡು ಗಾಂಜಾ ಸಸಿಗಳನ್ನು ಬೆಳೆಸಿದ್ದ ಎಂದು ಆಕೆ ಹೇಳಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯ ವಿಚಾರಣೆ ಆರಂಭಿಸಿದ್ದಾರೆ.












Click it and Unblock the Notifications