ಇದೇ ಕಾರಣಕ್ಕಾಗಿ ಸರ್ಕಾರ ದರ್ಶನ್ ಕೇಸ್‌ನಲ್ಲಿ ಗಟ್ಟಿ ನಿಲುವು!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಗುರುವಾರ ಇವರನ್ನು ಕೋರ್ಟ್‌ಗೆ ಹಾಜರು ಪಡಿಸಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಲಾಯಿತು. ಬೆಂಗಳೂರಿನ ಮೆಜೆಸ್ಟ್ರೇಟ್ ಕೋರ್ಟ್ 2 ದಿನ ಪೊಲೀಸ್ ಕಸ್ಟಡಿಗೆ ಸೂಚಿಸಿದೆ. ಇನ್ನು ದರ್ಶನ್ ಶನಿವಾರದ ವರೆಗೂ ಪೊಲೀಸ್ ಕಸ್ಟಡಿಯಲ್ಲಿ ಇರುತ್ತಾರೆ.
ದರ್ಶನ್ ಕೇಸ್ ಹೊರಗೆ ಬಂದಾಗಿನಿಂದಲೂ ಸರ್ಕಾರ ಹಾಗೂ ಪೊಲೀಸರು ನಡೆದುಕೊಳ್ಳುವ ಧಾಟಿ ಜನರ ಮೆಚ್ಚುಗೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಯಾರು ತಲೆ ಹಾಕ ಬಾರದು ಎಂದು ಸಿಎಂ ಸಿದ್ಧರಾಮಯ್ಯ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ತಾವು ಯಾರ ಒತ್ತಡಕ್ಕೂ ಮಣೆಯುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಸರ್ಕಾರದ ಈ ನಿಲುವಿನಿಂದ ದರ್ಶನ್ ಸಂಕಷ್ಟ ಇನ್ನು ಹೆಚ್ಚಾಗುತ್ತಲೇ ಇದೆ.

ಸಚಿವ ಸಂಪುಟದ ಸಭೆಯಲ್ಲಿ ಪ್ರಸ್ತಾಪ
ಪ್ರಕರಣದ ಬಗ್ಗೆ ಸಿದ್ಧರಾಮಯ್ಯ ಹೊಂದಿರುವ ನಿಲುವ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದೆ. ಪ್ರಕರಣ ಬಯಲಿಗೆ ಬಂದ ದಿನದಿಂದಲೂ ಎಷ್ಟೇ ಒತ್ತಡಗಳೂ ಬಂದರೂ ಸಿಎಂ ಈ ಪ್ರಕರಣದಲ್ಲಿ ತಲೆ ಹಾಕುತ್ತಿಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಮೊನ್ನೆ ಮೊನ್ನೆ ಪಬ್ಲಿಕ್ ಪ್ರಾಸಿಕ್ಯೂಟರ್ ಬದಲಾವಣೆ ಆಗುತ್ತೆ ಎಂಬ ಸುದ್ದಿ ವೇಗ ಪಡೆದಿತ್ತು. ಆದರೆ ಇದಕ್ಕೂ ಸರ್ಕಾರ ಸೊಪ್ಪು ಹಾಕಲಿಲ್ಲ. ಸರ್ಕಾರದ ಈ ನಿಲುವು ತಪ್ಪಿತಸ್ಥರಿಗೆ ನ್ಯಾಯ ಸಿಗಬೇಕೆಂದಾಗಿದೆ.
ಸಾಕ್ಷಿಗಳ ಸಂಗ್ರಹ
ಸಿಎಂ ಈ ಪ್ರಕರಣದ ಮಾಹಿತಿಯನ್ನು ಕಾಲಕಾಲಕ್ಕೆ ಪಡೆಯುತ್ತಿದ್ದಾರೆ. ಹಲ್ಲೇಯ ದೃಶ್ಯ ಅಥವಾ ಫೋಟೋಗಳನ್ನೇ ನೋಡಿ ಸಿಎಂ ತಮ್ಮ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ಜು ಹಲ್ಲೇ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಫುಟೇಜ್‌ಗಳು ಸಹ ಪೊಲೀಸರಿಗೆ ಸಿಕ್ಕಿವೆ. ಇವುಗಳನ್ನು ನೋಡಿದ ಬಳಿಕವೇ ಸಿಎಂ ಸಿದ್ದರಾಮಯ್ಯ ತಮ್ಮ ನಿರ್ಧಾರಕ್ಕೆ ಸ್ಟಿಕ್ ಆನ್ ಆಗಿದ್ದಾರೆ ಎನ್ನಲಾಗಿದೆ.
ಪ್ರಬಲ ಸಮುದಾಯ
ಇನ್ನು ಈ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡದೇ ಇರಲು ಇನ್ನು ಹಲವು ಕಾರಣಗಳು ಇವೆ. ರೇಣುಕಾಸ್ವಾಮಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವ. ಅವರ ಮನೆಗೆ ಈಗಾಗಲೇ ಈ ಸಮುದಾಯದ ಮಠಾಧೀಶರು, ಬಿಜೆಪಿ ಮುಖಂಡರು ಭೇಟಿ ನೀಡಿದ್ದಾರೆ. ಈ ಕೇಸ್‌ನಲ್ಲಿ ಕೊಂಚ ಯಾಮಾರಿದ್ರೂ ದೊಡ್ಡ ಸಮುದಾಯದ ವಿರುದ್ಧ ಕಟ್ಟಿಕೊಳ್ಳಬೇಕಾಗುತ್ತದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕ ಎಲ್ಲ ಸಾಕ್ಷಿಗಳು ಸಹ ದರ್ಶನ್ ವಿರುದ್ಧವಾಗಿವೆ. ಹೀಗಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂಬುದು ಮನಸ್ಥಿತಿ ಆಗಿದೆ. ಹೀಗಾಗಿಯೇ ಈ ಪ್ರಕರಣದಲ್ಲಿ ಯಾರು ತಲೆ ಹಾಕಬೇಡಿ ಎಂದು ಸಿಎಂ ಪದೆ ಪದೇ ಹೇಳುತ್ತಿದ್ದಾರೆ.












Click it and Unblock the Notifications