Breaking; ಬೆಂಗಳೂರಿನ ಹೋಟೆಲ್‌ನಲ್ಲಿ ಊಟ, ತಿಂಡಿ ದರ ಏರಿಕೆ?

ಬೆಂಗಳೂರು, ನವೆಂಬರ್ 13; ಬೆಂಗಳೂರು ನಗರದ ಹೋಟೆಲ್‌ನಲ್ಲಿ ಊಟ, ತಿಂಡಿಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದು ನಿಜಕ್ಕೂ ಕಹಿಸುದ್ದಿಯಾಗಿದೆ.

ಬೃಹತ್ ಬೆಂಗಳೂರು ಹೋಟೆಲ್​ ಮಾಲೀಕರ ಸಂಘ ಹೋಟೆಲ್‌ಗಳಲ್ಲಿ ಊಟ, ತಿಂಡಿಯ ದರಗಳನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಈ ಕುರಿತು ತೀರ್ಮಾನಿಸಲು ನವೆಂಬರ್ 18ರಂದು ಸಭೆ ಕರೆಯಲಾಗಿದೆ.

Food Items Price In Bengaluru Hotels May Hike Soon

ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಸಿಲಿಂಡರ್ ದರಗಳು ಹೆಚ್ಚಾದಾಗಲೇ ಏಪ್ರಿಲ್‌ನಲ್ಲಿ ದರ ಏರಿಕೆ ಮಾಡಲು ತೀರ್ಮಾನ ಮಾಡಲಾಗಿತ್ತು. ಆದರೆ ಆಗ ಕೆಲವು ಹೋಟೆಲ್‌ಗಳು ಮಾತ್ರ ದರ ಏರಿಸಿದ್ದವು.

ಈಗ ಎಲ್ಲಾ ಹೋಟೆಲ್‌ಗಳಿಗೆ ಅನ್ವಯವಾಗುವಂತೆ ದರ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಸಭೆಯಲ್ಲಿ ಈ ಕುರಿತು ವಿವರವಾದ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.

ಏಪ್ರಿಲ್‌ನಲ್ಲಿ ನಡೆದ ಸಭೆಯಲ್ಲಿ ಹೋಟೆಲ್‌ಗಳಲ್ಲಿ ಊಟ, ತಿಂಡಿ ದರಗಳನ್ನು ಶೇ 10ರಷ್ಟು ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಕೆಲವು ಹೋಟೆಲ್ ಮಾಲೀಕರು ಹೊಸ ದರ ಜಾರಿಗೊಳಿಸಿದರು. ಕೆಲವು ಹೋಟೆಲ್‌ಗಳು ದರ ಏರಿಕೆ ಮಾಡಲಿಲ್ಲ.

ಆಗ ಅಗತ್ಯ ವಸ್ತುಗಳ ದರಗಳು ಏರಿಕೆಯಾದ ಹಿನ್ನಲೆಯಲ್ಲಿ ಹೋಟೆಲ್‌ನಲ್ಲಿ ದರ ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆಗ ದರ್ಶಿನಿ, ಕೆಫೆ ಸೇರಿದಂತೆ ಚಿಕ್ಕ ಹೋಟೆಲ್‌ಗಳು ದರ ಏರಿಕೆ ಮಾಡುವುದಿಲ್ಲ ಎಂದು ಹೇಳಿದ್ದವು. ಆದರೆ ದೊಡ್ಡ ದೊಡ್ಡ ಹೋಟೆಲ್‌ಗಳು ದರ ಏರಿಕೆ ಮಾಡಿದ್ದವು.

ಈಗ ಎಲ್ಲಾ ಹೋಟೆಲ್‌ಗಳು ದರಗಳನ್ನು ಏರಿಕೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಸಹ ಮುಂದಾಗಿದೆ. ಆದ್ದರಿಂದ ಕಾಫಿ, ಟೀ ದರಗಳು ಸಹ ಏರಿಕೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+