ಹಿರಿಯ ಶಾಸಕ ಅಂಗಾರ ನಿರ್ಲಕ್ಷ್ಯ: ಬಿಜೆಪಿಗೆ ಹೋರಾಟದ ಎಚ್ಚರಿಕೆ

ಬೆಂಗಳೂರು, ಆಗಸ್ಟ್ 28: ಆರು ಬಾರಿ ಶಾಸಕರಾಗಿರುವ ಬಿಜೆಪಿಯ ಹಿರಿಯ ಶಾಸಕ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡದೇ ಇರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಗಡಿ ಹೋರಾಟ ಸಮಿತಿಯು ಬಿಜೆಪಿಗೆ ಎಚ್ಚರಿಕೆ ನೀಡಿದೆ. ಸರಳ, ಸಜ್ಜನ ರಾಜಕಾರಣಿಗೆ ಸಂಪುಟ ಸ್ಥಾನ ನೀಡದೇ ಇರುವುದನ್ನು ಸಂಘಟನೆ ಖಂಡಿಸಿದೆ.

ಒಂದು ವೇಳೆ ಅಂಗಾರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇದ್ದರೆ ಬಿಜೆಪಿ ವರಿಷ್ಠರ ವಿರುದ್ಧ ಸುಳ್ಯಾ ಮತ್ತು ಕಾಸರಗೋಡು ಗಡಿನಾಡು ಕನ್ನಡಿಗರೊಂದಿಗೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ರಾಜ್ಯಾಧ್ಯಕ್ಷ ಪ್ರೊ.ಬಿ.ಕೆ.ರಾ. ರಾವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Followers demand cabinet post for BJP MLA S Angara

ಆರು ಬಾರಿ ಬಿಜೆಪಿಯಿಂದ ಆರಿಸಿ ಬಂದಿರುವ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಸಿಗುವ ಗಟ್ಟಿ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ಅಂಗಾರ ಅವರು ಈ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕದಿದ್ದರೂ ಸಹ ಅವರ ಬೆಂಬಲಿಗರಿಗೆ ಇದು ಬೇಸರ ಮೂಡಿಸಿದೆ.

ಬಿಜೆಪಿಯ ಭದ್ರ ಕೋಟೆ ಕರಾವಳಿಯನ್ನು ಸಂಪುಟ ವಿಸ್ತರಣೆ ಸಮಯ ಬಿಜೆಪಿಯು ನಿರ್ಲಕ್ಷ್ಯ ಮಾಡಿದೆ ಎಂದು ಕರಾವಳಿ ಬಿಜೆಪಿ ಮುಖಂಡರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+