ಹೂವಿನ ಸೌಂದರ್ಯ ಲೋಕ ಕಾಣಿರಿ, ಮನತುಂಬಿಕೊಳ್ಳಿರಿ

ಬೆಂಗಳೂರು, ಆಗಸ್ಟ್, 03 : ಹೂಗಳಲ್ಲಿ ಗುಲಾಬಿ, ಮಲ್ಲಿಗೆ, ದಾಸವಾಳ ಇವುಗಳ ಹೊರತಾಗಿ ಬೇರೆ ಯಾವ ಹೂಗಳ ಪರಿಚಯವೂ ನಮಗಿರದು. ಜನರಿಗೆ ರಾಷ್ಟ್ರದಾದ್ಯಂತ ಅರಳುವ ನಾನಾ ಹೂಗಳ ಪರಿಚಯ ಮಾಡಿಸುವ ಸಲುವಾಗಿ ಸ್ವತಂತ್ರ ದಿನಾಚರಣೆಯ ದಿನದಂದು ವೈವಿಧ್ಯ ಹೂಗಳ ಪ್ರದರ್ಶನ ಜರುಗಲಿದೆ.

ಲಾಲ್ ಬಾಗಿನ ಜೊತೆಯಲ್ಲಿ, ಕಬ್ಬನ್ ಪಾರ್ಕಿನಲ್ಲಿಯೂ ಕೂಡ ಮೊದಲ ಬಾರಿ ಹೂಗಳ ಪ್ರದರ್ಶನ ಜರುಗಲಿದ್ದು, ಈ ನಿರ್ಧಾರವನ್ನು ಕಬ್ಬನ್ ಪಾರ್ಕಿನ ಡೆಪ್ಯೂಟಿ ನಿರ್ದೇಶಕ ಮಹಾಂತೇಶ್ ಮುರ್ಗೋಡ್ ಹಾಗೂ ಸಿಬ್ಬಂದಿ ವರ್ಗ ತೆಗೆದುಕೊಂಡಿದ್ದಾರೆ. ಹೂಗಳ ಪ್ರದರ್ಶನ ಆಗಸ್ಟ್ 15 ಮತ್ತು 17 ರಂದು ಪಾರ್ಕಿನ ಆವರಣದಲ್ಲಿ ಏರ್ಪಡಿಸಲಾಗಿದೆ.[ನಮ್ಮ ಮೆಟ್ರೋ ಸುರಂಗ ಮಾರ್ಗದಲ್ಲಿ ಸಂಚರಿಸಲು ಸಿದ್ಧರಾಗಿ]

Flower show at Cubbon Park too

ಈ ಉದ್ಯಾನವನವು ಸುಮಾರು 250 ಎಕರೆ ಇದ್ದು, 400 ಜಾತಿಗಳ 7,426 ಗಿಡಗಳು ಇಲ್ಲಿ ಕಾಣ ಸಿಗಲಿದ್ದು, ಪ್ರತಿ ಭಾನುವಾರ ಏರ್ಪಡಿಸುವ ವಿವಿಧ ಕಾರ್ಯಕ್ರಮಗಳಿಗೆ ಸುಮಾರು 5000 ಮಂದಿ ಆಗಮಿಸುತ್ತಾರೆ. ಈ ಬಾರಿ ಹೂಗಳ ಪ್ರದರ್ಶನ ಕಣ್ತುಂಬಿಕೊಳ್ಳಲು ಸುಮಾರು15,000 ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಊಹಿಸಲಾಗಿದೆ.

ಹೂ ಪ್ರದರ್ಶನದ ವಿಶೇಷತೆಗಳು:

* ಪ್ರದರ್ಶನಕ್ಕೆ ಕೆಲವು ಹೂಗಳನ್ನು ಉದ್ಯಾನವನದಲ್ಲೇ ಬೆಳೆಸಿದ್ದು, ಇನ್ನು ಕೆಲವನ್ನು ಹೊರ ರಾಜ್ಯ ಹಾಗೂ ದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ.

* ಈ ಹೂಗಳ ಪ್ರದರ್ಶನದಲ್ಲಿ 'ರೆಡ್ ಜಡೆ ವಿನೆ' ಎಂಬ ಹೂವು ಪ್ರಮುಖ ಆಕರ್ಷಣೆಯಾಗಿದ್ದು, ಇದನ್ನು ಥೈಲ್ಯಾಂಡ್ ನಿಂದ ತರಿಸಿಕೊಳ್ಳಲಾಗುತ್ತಿದೆ.

* ಕೇವಲ ಹೂಗಳು ಮಾತ್ರವಲ್ಲದೇ, ನೂರು ವರ್ಷ ತುಂಬಿದ ವೈವಿಧ್ಯ ಮರಗಳು, ಹಾಗೂ ಓಕ್ ಮರವನ್ನು ಕಾಣಬಹುದಾಗಿದೆ.

* ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಂದ ಒಡೆಯರ್ ಮನೆತನ ಆಳಿದ ರಾಜರುಗಳ ಪ್ರತಿಮೆಗಳ ಪ್ರದರ್ಶನ ಜೊತೆಯಲ್ಲಿ ಈ ಉದ್ಯಾನವನಕ್ಕೆ ಅವರು ನೀಡಿದ ಹಲವಾರು ಕೊಡುಗೆಗಳ ಮಾಹಿತಿಯನ್ನು ನೀಡಲಾಗುವುದು.

* ಈ ಪ್ರದರ್ಶನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಣಿ ಪ್ರಮೋದಾ ದೇವಿ ಆಗಮಿಸಲಿದ್ದು, ಮೈಸೂರು ಮನೆತನದ ಹಲವಾರು ಛಾಯಾಚಿತ್ರಗಳ ಪ್ರದರ್ಶನವೂ ಸಹ ಇರುತ್ತದೆ.

* ಲಾಲ್ ಬಾಗಿನಲ್ಲಿ ಹೂಗಳ ಪ್ರದರ್ಶನವನ್ನು ಮೊದಲ ಬಾರಿಗೆ 1912ರಲ್ಲಿ ಮೈಸೂರಿನ ಹಾರ್ಟಿಕಲ್ಚರಲ್ ಸೊಸೈಟಿ ಪ್ರಾರಂಭಿಸಿತ್ತು. ಹೂಗಳ ಪ್ರದರ್ಶನವು ಆಗಸ್ಟ್ 7 ರಿಂದ 16 ರವರೆಗೆ ಇದ್ದು, ದೊಡ್ಡವರಿಗೆ ಪ್ರತಿದಿನ ಒಳಗೆ ಪ್ರವೇಶ ಪಡೆಯಲು 40ರೂಗಳಿದ್ದು, ರಜೆದಿನಗಳಲ್ಲಿ 50 ರೂವನ್ನು ನಿಗದಿಪಡಿಸಲಾಗಿದೆ. ಮಕ್ಕಳಿಗೆ 10 ರೂ ಮಾತ್ರ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+