ನೆಲಮಂಗಲ: ಮಳೆಗೆ ಒಡೆಯಿತು ಭಿನ್ನಮಂಗಲ ಕೆರೆ; ರಸ್ತೆಗಳಲ್ಲೆಲ್ಲಾ ನೀರು
ಬೆಂಗಳೂರು, ಸೆಪ್ಟೆಂಬರ್ 27: ಮಂಗಳವಾರ (ಸೆ. 27) ಸುರಿದ ಭಾರೀ ಮಳೆಯಿಂದಾಗಿ, ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲದಲ್ಲಿರುವ ಭಿನ್ನಮಂಗಲದ ಕೆರೆ ಒಡೆದಿದೆ.
ಕೆರೆ ಕೋಡಿಯು ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ಸುತ್ತಲಿನ ಪ್ರದೇಶಗಳಿಗೆ ನುಗ್ಗಿ ಜನಜೀವನ ಭಾರೀ ಪ್ರಮಾಣದಲ್ಲಿ ಅಸ್ತವ್ಯಸ್ತಗೊಂಡಿದೆ.

ನೆಲಮಂಗಲದಿಂದ ಶುರುವಾಗುವ ನೈಸ್ ರೋಡ್ ನ ಅಕ್ಕಪಕ್ಕದಲ್ಲಿರುವ ಮಾಕಳಿಯಂತೂ ಕೆರೆ ನೀರಿನಿಂದ ತುಂಬಿಕೊಂಡು ಸರೋವರದಂತಾಗಿದೆ. ಮನೆಯಿಂದ ಆಚೆ ಬರದಂತೆ ಇಲ್ಲಿನ ನಿವಾಸಿಗಳಿಗೆ ಜಲದಿಗ್ಬಂಧನ ಏರ್ಪಟ್ಟಿದೆ.
ಕೆರೆ ನೀರಿನಿಂದ ನೆಲಮಂಗಲದಲ್ಲಿ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಚಾಲನೆಗೆ ತೊಂದರೆಯಾಗಿದ್ದರೆ, ಮಾಕಳಿಯಲ್ಲಿ ತಮ್ಮ ಮನೆಗಳಿಂದ ಯಾರೂ ಹೊರಬಾರದ ಸ್ಥಿತಿಯಲ್ಲಿ ಜನರಿದ್ದಾರೆ. ಹಲವಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರ ಜೀವನ ಮೂರಾಬಟ್ಟೆಯಾಗಿದೆ.












Click it and Unblock the Notifications