ಜೊಮ್ಯಾಟೊ-ಸ್ವಿಗ್ಗಿಗೆ ಹೊಸ ಪೈಪೋಟಿ: ಫ್ಲಿಪ್‌ಕಾರ್ಟ್‌ನಿಂದ ಫುಡ್ ಡೆಲಿವರಿ, ಶೀಘ್ರವೇ ಆಪ್ ಪರಿಚಯ

Flipkart Food Delivery Update: ಭಾರತದಲ್ಲಿ ಅನೇಕ ಫುಡ್ ಡೆಲಿವರಿ ಆಪ್‌ಗಳಿವೆ. ಇವುಗಳು ಆಹಾರ ವಿತರಣೆ ಜೊತೆಗೆ ದೇಶದ ಆರ್ಥಿಕತೆಗೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಇದೀಗ ಈ ಫುಡ್‌ ಡೆಲಿವರಿ ಆಪ್ ಗಳ ಸಾಲಿಗೆ ಭಾರತದ ಪ್ರಮುಖ ಇ-ಕಾಮರ್ಸ್ ದೈತ್ಯ ಸಂಸ್ಥೆಯಾದ 'ಫ್ಲಿಪ್‌ಕಾರ್ಟ್' ಸಹ ಸೇರಿಕೊಳ್ಳುತ್ತಿದೆ. ಇದೇ ತಿಂಗಳು ಸ್ವಾತಂತ್ರ್ಯ ದಿನಾಚರಣೆ ವೇಳೆ ಆಹಾರ ವಿತರಣೆ 'ಫ್ಲಿಪ್‌ಕಾರ್ಟ್ ಆಪ್' ಲೋಕಾರ್ಪಣೆ ಮಾಡಲಿದೆ. ಆರಂಭಿಕ ಭಾರೀ ವಿನಾಯಿತಿ ನೀಡುವ ಸಾಧ್ಯತೆ ಇದೆ.

ಶೀಘ್ರದಲ್ಲೇ ಆಹಾರ ವಿತರಣಾ (ಫುಡ್ ಡೆಲಿವರಿ) ಮಾರುಕಟ್ಟೆಗೆ 'ಫ್ಲಿಪ್‌ಕಾರ್ಟ್ ಕಂಪನಿ' ಲಗ್ಗೆ ಇಡಲಿದೆ. ಇದೇ ತಿಂಗಳ ಆಗಸ್ಟ್ 15ರ ಆಸುಪಾಸಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫ್ಲಿಪ್‌ಕಾರ್ಟ್‌ನಿಂದ ಮನೆ ಮನೆಗೆ ವಿತರಣೆ ಸೇವೆ ಶುರುವಾಗಲಿದೆ. ಗ್ಯಾಡ್ಜೆಟ್ಸ್, ಬಟ್ಟೆ, ಇನ್ನಿತರ ವಸ್ತುಗಳಂತೆ ಆಹಾರ ಸಹ ವಿತರಿಸಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಜೊಮ್ಯಾಟೊ ಮತ್ತು ಸ್ವಿಗ್ಗಿ ಸಂಸ್ಥೆಗಳ ದ್ವಿಮುಖ ಹಿಡಿತಕ್ಕೆ ದೊಡ್ಡ ಮಟ್ಟದ ಸವಾಲು ಎದುರಾಗಲಿದೆ ಎಂದು ಊಹಿಸಲಾಗಿದೆ.

Flipkart Food Delivery

ಹೋಟೆಲ್ ಮಾಲೀಕರ ಸೆಳೆಯುತ್ತಿರುವ ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್ ಸ್ವತಂತ್ರವಾಗಿ ಹೊಸ ಮಾರುಕಟ್ಟೆ ವ್ಯವಸ್ಥೆ ಸೃಷ್ಟಿಸಲಿದೆ. ಇದಕ್ಕೂ ಮೊದಲು ಕೇಂದ್ರ ಸರ್ಕಾರದ ಬೆಂಬಲಿತ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ವೇದಿಕೆಯ ಮೂಲಕ ಈ ಹೊಸ ಸೇವೆ ನೀಡಲು ಸಜ್ಜಾಗಿದೆ. ಈಗಾಗಲೇ ಉದ್ದೇಶಿ ಬೆಂಗಳೂರಿನಲ್ಲಿರುವ ನೂರಾರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಲು ಕೈಜೋಡಿಸಿವೆ. ಅವುಗಳೊಂದಿಗೆ ಫುಡ್ ಡೆಲಿವರಿ ಆರಂಭಿಸಲಿದೆ. ಆಹಾರ ಒದಗಿಸುವ ಹೋಟೆಲ್, ರಸ್ಟೋರೆಂಟ್‌ಗಳಿಂದ ಶೇಕಡಾ 10 ರಷ್ಟು ಕಮಿಷನ್ ಪಡೆಯುತ್ತವೆ.

ಕಡಿಮೆ ಕಮಿಷನ್ ಮತ್ತು ಸ್ಪರ್ಧೆ ಅಧಿಕ

ಅಸ್ತಿತ್ವದಲ್ಲಿರುವ ಜೊಮ್ಯಾಟೊ ಮತ್ತು ಸ್ವಿಗ್ಗಿ ಆಹಾರ ವಿತರಣೆ ಆಪ್/ಸಂಸ್ಥೆಗಳು ಹೋಟೆಲ್ ಮಾಲೀಕರಿಂದ ಶೇಕಡಾ 16 ರಿಂದ 30 ರವರೆಗೆ ಕಮಿಷನ್ ಪಡೆಯುತ್ತವೆ. ಇದರಿಂದಾಗಿ ಹೋಟೆಲ್ ಉದ್ಯಮಿಗಳು ನಷ್ಟ ಅನುಭವಿಸುತ್ತಿವೆ. ಇದರಿಂದ ಗ್ರಾಹಕರಿಗೂ ಹೆಚ್ಚಿನ ದರ ವಿಧಿಸಲಾಗುತ್ತಿದೆ. ಇದೀಗ ಫ್ಲಿಪ್‌ಕಾರ್ಟ್ ಕೂಡ ಅತ್ಯಂತ ಕಡಿಮೆ ಕಮಿಷನ್ ಮೂಲಕ ಗ್ರಾಹಕ ಸ್ನೇಹಿ ಕಾರ್ಯ ನಿರ್ವಹಣೆಗೆ ಸಿದ್ಧವಾಗಿದೆ. ಹೆಚ್ಚಿನ ಹೋಟೆಲ್ ಮಾಲೀಕರ ಸೆಳೆಯಲು ಕಂಪನಿ ಮುಂದಾಗಿದೆ.

ಸದ್ಯ ಗ್ಯಾಡ್ಜೆಟ್‌, ಬಟ್ಟೆ ಬರೆ ಸಿಗುವ ಪ್ಲಿಪ್‌ಕಾರ್ಟ್ ಆಪ್‌ನಲ್ಲಿಯು ಫುಡ್ ಡೆಲಿವರಿ ಸೇವೆ ಲಭ್ಯವಾಗಲಿದೆ. ಇನ್ನೂ ಫುಡ್‌ ಡೆಲಿವರಿ ಆಪ್ ಬಳಕೆದಾರರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಮೊಬೈಲ್ ಬಿಡುಗಡೆಗೂ ಮುಂದಾಗಿದೆ. ಈ ಮಹತ್ವಾಕಾಂಕ್ಷಿ ಪ್ರಾಯೋಗಿಕ ಉಪಕ್ರಮವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತದೆ. ಇದರ ಜವಾಬ್ದಾರಿಯನ್ನು ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರ ಆಪ್ತ ಕಂಪನಿಯ ಮಾಜಿ ಚೀಫ್ ಆಫ್ ಸ್ಟಾಫ್ ಆಶಿಶ್ ವಿಜಯವರ್ಗಿಯಾ ಅವರಿಗೆ ನೀಡಲಾಗಿದೆ ಎಂದು ವರದಿ ಆಗಿದೆ.

ಐಟಿ ಕೇಂದ್ರವಾಗಿ ಗುರುತಿಸಿಕೊಂಡ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ಸೇವೆ ನೀಡಲಾಗುತ್ತಿದೆ. ಸಿಗುವ ಜನರ ಸ್ಪಂದನೆ, ತಾಂತ್ರಿಕ ಸವಾಲುಗಳ ಮೇಲೆ ನಿಗಾ ಇಟ್ಟು ಬಳಿಕ ಹಂತ ಹಂತವಾಗಿ ನಗರಾದ್ಯಂತ, ರಾಜ್ಯಾದ್ಯಂತ ವಿಸ್ತರಣೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+