ಬೆಂಗಳೂರಲ್ಲಿ ದಟ್ಟ ಮಂಜು : ವಿಮಾನ ಹಾರಾಟದಲ್ಲಿ ವ್ಯತ್ಯಯ
ಬೆಂಗಳೂರು, ನವೆಂಬರ್ 28 : ಇಂದು (ನವೆಂಬರ್ 28) ಕವಿದಿದ್ದ ದಟ್ಟ ಮಂಜಿನಿಂದಾಗಿ ದೇವನಹಳ್ಳಿ ಕೆಂಪೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 20 ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಮಂಜು ಹೆಚ್ಚಿದ್ದ ಕಾರಣ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 3 ಅಂತರರಾಷ್ಟ್ರೀಯ ವಿಮಾನಗಳ ಮಾರ್ಗ ಬದಲಿಸಿ ಚೆನ್ನೈಗೆ ಕಳುಹಿಸಲಾಗಿದೆ. ಕುವೈತ್ ಏರ್‌ಲೈನ್ಸ್ 353, ಏರ್ ಮಾರಿಷಸ್ 746 ಮತ್ತು ಏರ್ ಇಂಡಿಯಾ 978 ವಿಮಾನಗಳು ಬೆಂಗಳೂರಿನ ಬದಲಿಗೆ ಚೆನೈನಲ್ಲಿ ಭೂಸ್ಪರ್ಷ ಮಾಡಿವೆ.

ನವೆಂಬರ್ 28 ಬೆಳಿಗ್ಗೆ 4.30 ಸುಮಾರಿಗೆ ದಟ್ಟ ಮಂಜು ಆವರಿಸಿ ಲ್ಯಾಂಡಿಂಗ್ ನಲ್ಲಿ ಸಮಸ್ಯೆ ಉಂಟಾದ ಕಾರಣ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಲವು ವಿಮಾನಗಳ ಮಾರ್ಗ ಬದಲಿಸಲಾಗಿದೆ. ವಿಮಾನ ವಿಳಂಬವಾದ ಕಾರಣ ಪ್ರಯಾಣಿಕರು ನಿಲ್ದಾಣದಲ್ಲಿಯೇ ಪರದಾಡುವಂತಾಯಿತು.
8 ಗಂಟೆ ಸುಮಾರಿಗೆ ಮಂಜು ಕಡಿಮೆಯಾದ ನಂತರ ವಿಮಾನ ಸೇವೆ ಯಥಾವತ್ ಆರಂಭವಾಗಿದೆ.













Click it and Unblock the Notifications