ಬೆಸ್ಕಾಂ ವಿದ್ಯುತ್ ಖರೀದಿ ಪ್ರಸ್ತಾಪಕ್ಕೆ ಎಫ್‌ಕೆಸಿಸಿಐ ವಿರೋಧ

ಬೆಂಗಳೂರು, ಫೆಬ್ರವರಿ 20 : ಕೆಇಆರ್ ಸಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕಿರು ಅವಧಿ ರೂಪದ ವಿದ್ಯುತ್ ಖರೀದಿಸುವ ಬೆಸ್ಕಾಂ ಪ್ರಸ್ತಾಪಕ್ಕೆ ಎಫ್‌ಕೆಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಚಾರವೂ ಸೇರಿದಂತೆ ಬೆಸ್ಕಾಂ ದರ ಪರಿಷ್ಕರಣೆ ಕುರಿತು ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಎಫ್‌ಕೆಸಿಸಿಐ ತನ್ನ ಲಿಖಿತ ಹೇಳಿಕೆಯನ್ನು ಆಯೋಗಕ್ಕೆ ಸಲ್ಲಿಸಿದೆ. ಬೆಸ್ಕಾಂ ತನ್ನ ಬಂಡವಾಳ ಹೆಚ್ಚಳ, ವೆಚ್ಚ ಭರಿಸುವಿಕೆ, ಗ್ರಾಹಕರ ಮೇಲೆ ವಿಧಿಸಲಿರುವ ದರ ವ್ಯತ್ಯಾಸ ಹಾಗೂ ಕೆಲವೊಂದು ತಾಂತ್ರಿಕ ಸಮಸ್ಯೆಗಳ ಕುರಿತು ಎಫ್‌ಕೆಸಿಸಿಐ ವಿವರವಾದ ಹೇಳಿಕೆಯನ್ನು ದಾಖಲಿಸಿವೆ.

ಆಯೋಗವು ಬೆಸ್ಕಾಂಗೆ ಕಿರು ಅವಧಿ ರೂಪದಲ್ಲಿ 267.05ಕೋಟಿ ರೂ ಮೊತ್ತದಷ್ಟು ವಿದ್ಯುತ್ ಖರೀದಿಗೆ ಅವಕಾಶ ಕಲ್ಪಿಸಿದೆ. ಇದರ ಬದಲು ನಾಲ್ಕು ಪಟ್ಟು(988.30 ಕೋಟಿ ರೂ.) ಖರೀದಿಸುತ್ತಿರುವುದು ಸರಿಯಲ್ಲ. ಜತೆಗೆ ಬಂಡವಾಳ ಕಡಿಮೆ ಇದ್ದರೂ , ಹೆಚ್ಚಿನ ಹಣವನ್ನು ಸಾಲ ಎತ್ತುವಳಿ ಸಲ್ಲ ಎಂದು ಆಕ್ಷೇಪಿಸಿದೆ.

FKCCI oppose Bescom's proposal for tariff revise

ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸಿದರೆ ದಂಡ ಹಾಕುವ ಪ್ರಸ್ತಾಪ ಸಲ್ಲಿಕೆಯಾಗಿದೆ.ಇಂತಹ ಪ್ರಸ್ತಾಪ ಗ್ರಾಹಕರ ಮೇಲೆ ಗದಾಪ್ರಹಾರ ನಡೆಸಿದಂತಾಗುತ್ತದೆ. ಜತೆಗೆ ಶುಲ್ಕ ಪಾವತಿ ಗಡುವು ಮುಗಿದ ತಕ್ಷಣವೇ ದಂಡ ಹಾಕುವ ಬದಲು ೧೫ ದಿನಗಳ ನೋಟಿಸ್ ನಂತರ ಕ್ರಮ ಕೈಗೊಳ್ಳಬೇಕು ಎಂಬುದನ್ನು ಕೆಇಆರ್ ಸಿ ಗಮನಕ್ಕೆ ತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+