ಹಂಪಿ ಸೇರಿ ರಾಜ್ಯದ ಐದು ಪ್ರವಾಸಿ ತಾಣಗಳ ಅಭಿವೃದ್ಧಿ
ಬೆಂಗಳೂರು, ಆಗಸ್ಟ್ 1: ಹಂಪಿ ಸೇರಿದಂತೆ ರಾಜ್ಯದಲ್ಲಿರುವ ಒಟ್ಟು 5 ಪ್ರವಾಸಿ ಸ್ಥಳಗಳನ್ನು 25 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟು 20 ಸ್ಥಳಗಳನ್ನು ಗುರುತಿಸಲಾಗಿದ್ದು ಅದರಲ್ಲಿ ಶೀಘ್ರ 5 ಸ್ಥಳಗಳನ್ನು 20-25 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅದರಲ್ಲಿ ಹಂಪಿಯೂ ಕೂಡ ಒಂದಾಗಿದೆ, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ, ಈ ವಿಚಾರವಾಗಿ ಕೇಂದ್ರ ಸರ್ಕಾರದ ಸಹಕಾರ ಬೇಖಾದರೆ ಪತ್ರವ ವ್ಯವಹಾರ ಮಾಡುತ್ತೇವೆ ಎಂದರು. ಪುರಾತತ್ವ ಇಲಾಖೆ ಪಟ್ಟಿಯಲ್ಲಿ ಹಂಪಿ ಹೆಸರು ಬಿಟ್ಟಿರುವ ವಿಚಾರ ಕುರಿತು ಮಾತನಾಡಿದ ಅವರು, ಯಾವ ಉದ್ದೇಶಕ್ಕಾಗಿ ಬಿಟ್ಟಿದ್ದಾರೆ ಎಂದು ಗೊತ್ತಿಲ್ಲ ಎಂದರು.

ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ನಮ್ಮಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ನೀಡುತ್ತೇವೆ, ಕೇಂದ್ರ ಪುರಾತತ್ವ ಇಲಾಖೆಯ ಪಟ್ಟಿ ಯಿಂದ ಹಂಪಿಯನ್ನು ಕೈ ಬಿಟ್ಟಿಲ್ಲ, ಆದ್ರೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದ ಹಂಪಿ ಕೈ ಬಿಡಲಾಗಿದೆ, ಅದನ್ನು ಯಾಕೆ ಕೈ ಬಿಟ್ಟಿದ್ದೀರಾ ಅನ್ನೋದರ ಬಗ್ಗೆ ವರದಿ ಪಡೆದು, ಕೇಂದ್ರದ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಅದಕ್ಕೆ ಏನೇ ಮೂಲಭೂತ ಸೌಲಭ್ಯ ಬೇಕಿದ್ದರೂ ಅದನ್ನು ಒದಗಿಸಲು ಸರ್ಕಾರ ಸಿದ್ದವಿದೆ ಎಂದು ಹೇಳಿದರು.












Click it and Unblock the Notifications