ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇವಲ 62 ನಿಮಿಷಗಳಲ್ಲಿ 10 ಕಿ.ಮೀ ಓಡಿದ ಗಟ್ಟಿಗಿತ್ತಿ ಈ 5 ತಿಂಗಳ ಗರ್ಭಿಣಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: 62 ನಿಮಿಷಗಳಲ್ಲಿ 10 ಕಿ.ಮೀ ಓಡುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ 5 ತಿಂಗಳ ಗರ್ಭಿಣಿ 10ಕಿ.ಮೀ ದೂರವನ್ನು 62 ನಿಮಿಷಗಳಲ್ಲಿ ಓಡಿದ್ದಾಳೆ ಎಂದರೆ ಆಕೆಯ ಗಟ್ಟಿತನವನ್ನು ಮೆಚ್ಚಬೇಕಾಗಿದ್ದೆ.

ಹೌದು ಅಂಕಿತಾ ಗೌರ್ ಎಂಬುವವರು ಟಿಸಿಎಸ್ 10ಕೆ ರನ್‌ ಅಲ್ಲಿ ಭಾಗವಹಿಸಿ, 62 ನಿಮಿಷಗಳಲ್ಲಿ ಓಟವನ್ನು ಪೂರೈಸಿದ್ದಾರೆ.

ಅಂಕಿತಾ ಕಳೆದ 9 ವರ್ಷಗಳಿಂದ ನಿತ್ಯ ಓಡುತ್ತಿದ್ದರು. ಬೆಳಗ್ಗೆ ಎದ್ದ ತಕ್ಷಣ ರನ್ನಿಂಗ್ ಮಾಡುವುದು ನನ್ನ ಹವ್ಯಾಸ, ಆದರೆ ನಿಮಗೆ ಆರೋಗ್ಯ ಅರಿ ಇಲ್ಲ ಎಂದಾಗ ಒಂದು ಹೆಜ್ಜೆ ಹಿಂದಿಡುವುದು ಸಾಮಾನ್ಯ ಆದರೆ ನಾನು ಇಟ್ಟಿಲ್ಲ ಎನ್ನುತ್ತಾರೆ ಅಂಕಿತಾ.

Five Months Pregnant, Finishes TCS World 10K Bengaluru

ಗರ್ಭಿಣಿಯಾಗಿದ್ದಾಗ ಓಡುವುದು ಆರೋಗ್ಯಕ್ಕೆ ಒಳ್ಳೆಯದು, ಅಮೆರಿಕನ್ ಕೌನ್ಸಿಲ್ ಆಫ್ ಹೆಲ್ತ್ ಕೂಡ ಅದನ್ನೇ ಹೇಳುತ್ತದೆ. ನೀವು ಒಂದೊಮ್ಮೆ ರನ್ನರ್ ಆಗಿದ್ದರೆ, ಗರ್ಭಿಣಿಯಾದಾಗ ಓಡುವುದು ಒಳ್ಳೆಯದೇ ಎಂದು ಹೇಳಿದೆ.

ಅಂಕಿತಾ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, 2013ರಿಂದ ಟಿಸಿಎಸ್ 10ಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಯೇ 5-6 ಅಂತಾರಾಷ್ಟ್ರೀಯ ಮ್ಯಾರಥಾನ್‌ನಲ್ಲೂ ಪಾಲ್ಗೊಂಡಿದ್ದರು. ನಿತ್ಯ ತಾನು 5-6 ಕಿ.ಮೀ ಓಡುತ್ತೇನೆ, ಇದರಿಂದಾಗಿ ಈ 10ಕೆ ರನ್‌ಗೆ ಸಹಾಯವಾಗಿದೆ. ಗರ್ಭಿಣಿಯಾಗಿರುವ ಕಾರಣ ಓಡುವ ಮಧ್ಯೆ ಕೆಲವು ಬಾರಿ ವಿರಾಮ ತೆಗೆದುಕೊಳ್ಳುತ್ತೇನೆ ಎಂದರು.

ಈ ಮೊದಲು ಟಿಸಿಎಸ್ 10ಕೆ ರನ್‌ ವಿಜೇತಳಾಗಿದ್ದೆ, ಆದರೆ ಈ ಬಾರಿ ಸಾಧ್ಯವಾಗಿಲ್ಲ, ಆದರೆ ಈ ರನ್‌ನಿಂದ ಹಿಂದೆ ಬಂದಿಲ್ಲ. ವೈದ್ಯರು ಕೂಡ ನನಗೆ ಬೆಂಬಲ ನೀಡಿದ್ದಾರೆ. ಆದರೆ ವೇಗವಾಗಿ ಓಡದಂತೆ ಸಲಹೆ ನೀಡಿದ್ದರು.

ನನಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲದ ಕಾರಣ, 10ಕೆ ಓಡಲು ತೀರ್ಮಾನಿಸಿದೆ. ಮೊದಲು ತನ್ನ ತಾಯಿ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದರು ಬಳಿಕ ಒಪ್ಪಿಗೆ ನೀಡಿದರು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Recommended Video

ವಿಜಯಪುರ: ಕೊರೊನಾ ರೂಪಾಂತರಿ ವೈರಸ್ ಆತಂಕ-ಯುಕೆಯ 6 ಜನರು ಆಗಮನ | Oneindia Kannada

English summary
One of the inspiring stories of the TCS World 10K Bengaluru 2020 is a five-month pregnant woman completing the race in just 62 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X