ಬೆಂಗಳೂರು: ಮರಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ತಿರುವು

ಬೆಂಗಳೂರು, ಡಿಸೆಂಬರ್ 17: ಬೆಂಗಳೂರಿನ ಜಯನಗರದಲ್ಲಿ ಮರಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಕಸ್ಮಿಕವಾಗಿ ಮರಕ್ಕೆ ಬೆಂಕಿ ತುಗುಲಿದ್ದು, ಉದ್ದೇಶ ಪೂರ್ವಕವಾಗಿ ಹಚ್ಚಿಲ್ಲ ಎಂದು ವೃದ್ಧರೊಬ್ಬರು ಹೇಳಿದ್ದಾರೆ.

ಜಯನಗರದ ಸೌತ್ ಎಂಡ್ ಸರ್ಕಲ್ ಸಮೀಪದ ಬಿಬಿಎಂಪಿ ಕಚೇರಿ ಬಳಿ ಮರಕ್ಕೆ ಬೆಂಕಿ ಹಚ್ಚಲಾಗಿತ್ತು. ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಚರ್ಚೆಗಳು ಆರಂಭವಾಗಿದ್ದವು.

ಸ್ಥಳೀಯ ನಿವಾಸಿಯಾಗಿರುವ ವೃದ್ಧರೊಬ್ಬರು ಈ ಕುರಿತು ಹೇಳಿಕೆ ನೀಡಿದ್ದು, "ಕಸಕ್ಕೆ ಹಚ್ಚಿದ್ದ ಬೆಂಕಿ ನಿಯಂತ್ರಣ ತಪ್ಪಿ ಮರಕ್ಕೆ ಹಬ್ಬಿದೆ. ಮರಕ್ಕೆ ಬೆಂಕಿ ಹಚ್ಚಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

Fire To Tree Near South End Circle Clarification

"ವೃದ್ಧರು ಮರದ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ಹೇಳಿದ್ದಾರೆ. ಆದ್ದರಿಂದ ಸ್ಥಳೀಯರು ಸುಮ್ಮನಾಗಿದ್ದಾರೆ" ಎಂದು ನಿವಾಸಿ ಮಹಾದೇವ ಸ್ಪಷ್ಟಪಡಿಸಿದ್ದಾರೆ.

ಸೌತ್‌ ಎಂಡ್ ವೃತ್ತದಿಂದ ಬನಶಂಕರಿ ಕಡೆಗೆ ಸಾಗುವ ಮಾರ್ಗದಲ್ಲಿ ಹಲವಾರು ಮರಗಳಿವೆ. ರಸ್ತೆಯ ಎರಡೂ ಕಡೆ ದೊಡ್ಡ-ದೊಡ್ಡ ಮರಗಳಿವೆ. ನಮ್ಮ ಮೆಟ್ರೋ ಕಾಮಗಾರಿಗಾಗಿ ಮರ ಕಡಿದಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+