Fire Outbreak At BBMP Office: ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅವಘಡ: 7 ಮಂದಿಗೆ ಗಾಯ
ಬಿಬಿಎಂಪಿ ಮುಖ್ಯ ಕಚೇರಿಯ ಆವರಣ ಕಟ್ಟದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಿಬಿಎಂಪಿ ಕಚೇರಿ ಆವರಣದಲ್ಲಿರುವ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡಕ್ಕೆ ಬೆಂಕಿ ಬಿದ್ದಿದೆ.
ಸದ್ಯ ಬೆಂಕಿ ಹತೋಟಿಗೆ ಬಂದಿದ್ದೆ, ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಕೆಲಸ ಮಾಡುತ್ತಿದೆ. ಬೆಂಕಿ ಬಿದ್ದು ಅರ್ಧಗಂಟೆಯಾದರೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂದು ಘಟನೆಯಲ್ಲಿ ಹೇಳಲಾಗಿದೆ. ಗ್ಯಾಸ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.

ಘಟನೆಯಲ್ಲಿ ಸಾವಿರಾರು ಕೋಟಿ ವ್ಯವಹಾರದ ದಾಖಲೆಗಳೆಲ್ಲ ಸುಟ್ಟು ಬೂದಿಯಾಗಿವೆ ಎಂದು ಹೇಳಲಾಗಿದೆ. ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದರಿಂದ ದಟ್ಟ ಹೊಗೆ ಆವರಿಸಿತ್ತು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಸಾಕಷ್ಟು ಶ್ರಮಿಸಬೇಕಾಯಿತು. ಸತತ ಅರ್ಧಗಂಟೆಯ ಕಾರ್ಯಾಚರಣೆ ಬಳಿಕೆ ಬೆಂಕಿ ತಹಬದಿಗೆ ಬಂದಿದೆ. ಪೊಲೀಸರು ಕೂಡ ಅಗ್ನಿಶಾಮಕ ಸಿಬ್ಬಂದಿ ಜೊತೆ ಬೆಂಕಿ ಆರಿಸಲು ಶ್ರಮಿಸಿದರು.
BBMP’s quality control cell catches fire. #Bengaluru pic.twitter.com/ORXx0KmOec
— Naveen Menezes (@naveenm01) August 11, 2023
ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಜಯರಾಂ ರಾಯಪುರ ಮಾತನಾಡಿ, ಅಗ್ನಿ ಅವಘಡದಲ್ಲಿ ದಾಖಲೆಗಳ ಕೊಠಡಿಗೆ ಹಾನಿಯಾಗದ ಕಾರಣ ಯಾವುದೇ ಅಧಿಕೃತ ದಾಖಲೆಗಳು ನಾಶವಾಗಿಲ್ಲ ಎಂದು ಹೇಳಿದ್ದಾರೆ.
ಸಂತ್ರಸ್ತರನ್ನು ತಕ್ಷಣದ ವೈದ್ಯಕೀಯ ಮಧ್ಯಸ್ಥಿಕೆಗಾಗಿ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದ ನಂತರವೇ ನಮಗೆ ಸುಟ್ಟ ಗಾಯಗಳ ಪ್ರಮಾಣ ತಿಳಿಯಲಿದೆ, ಎಂದು ಸುದ್ದಿಗಾರರಿಗೆ ತಿಳಿಸಿದರು. ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ಕೇಳಿದಾಗ, ವಿದ್ಯುತ್ ನಿರೀಕ್ಷಕರು ಪರಿಶೀಲನೆ ನಡೆಸಿದ ನಂತರ ತಿಳಿಯಲಿದೆ ಎಂದರು.












Click it and Unblock the Notifications