ಬೆಂಗಳೂರು: ಬೀದಿ ನಾಯಿಯನ್ನು ಕೊಂದ ಇಬ್ಬರ ಮೇಲೆ ಎಫ್ ಐಆರ್
ಬೆಂಗಳೂರು, ಮೇ 29 : ಬೀದಿನಾಯಿನ್ನು ಕೊಂದ ಇಬ್ಬರು ದುಷ್ಕರ್ಮಿಗಳ ವಿರುದ್ಧ ಪ್ರಾಣಿ ಪ್ರಿಯರೊಬ್ಬರು ದೂರು ದಾಖಲಿಸಿದ್ದಾರೆ.
ವರ್ತೂರು ರಸ್ತೆಯ ದೊಮ್ಮಸಂದ್ರದಲ್ಲಿ ಇಬ್ಬರು ದುಷ್ಕರ್ಮಿಗಳು ಮೇ 26ರಂದು ಬೀದಿನಾಯಿಯನ್ನು ಅಮಾನವೀಯವಾಗಿ ಕೊಂದು ರಸ್ತೆ ಪಕ್ಕದ ಜಮೀನಿನಲ್ಲಿ ಎಸೆಯುತ್ತಿದ್ದರು. ಈ ವೇಳೆ ಪ್ರತ್ಯಕ್ಷದರ್ಶಿ ಹರೀಶ್ ಕೆ.ಬಿ. ಇದನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ಕೊಡದೆ ಕಾರಿನಲ್ಲಿ ಪರಾರಿಯಾಗಿದ್ದರು.[ಬೀದಿ ನಾಯಿ ಸಮಸ್ಯೆಯೇ? ದೂರು ನೀಡುವುದು ಹೇಗೆ?]

ಇದೀಗ ಹರೀಶ್ ಆರೋಪಿಗಳ ಕಾರ್ ನಂಬರ್ ತೆಗೆದುಕೊಂಡು ದೂರು ದಾಖಲಿಸಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 429 ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ. ಸದ್ಯ ಬೀದಿ ನಾಯಿ ಕೊಂದ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications