ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಎನ್ ಬೆಟ್ಟೇಗೌಡ ವಿರುದ್ಧ FIR
ಬೆಂಗಳೂರು, ಆಗಸ್ಟ್ 29 : ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾದ್ಯಕ್ಷ ಡಿ.ಎನ್ ಬೆಟ್ಟೇಗೌಡ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರು ದಕ್ಷಿಣ ವಲಯದ ಕೆಂಗೇರಿ ಹೋಬಳಿಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಬಿಡಿಎ ಸೈಟ್ ಮಾರಾಟ ಆರೋಪದಡಿ ಬೆಟ್ಟೇಗೌಡ ವಿರುದ್ಧ ಬಿಡಿಎ ನೌಕರರ ಕಲ್ಯಾಣ ಸಂಘ ದೂರು ನೀಡಿದೆ.

ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಸಿಎ ಸೈಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂಘದ ಹಾಲಿ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಹಾಗೂ ಸೈಟ್ ಖರೀದಿಸಿದ ಪಿ. ಉದಯ್ ವಿರುದ್ಧವೂ ಸಹ ಐಪಿಸಿ ಸೆಕ್ಷನ್ 409,420 ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.












Click it and Unblock the Notifications