ಜಾಫರ್ ಷರೀಫ್ ಅಪೂರ್ಣಗೊಳಿಸಿದ ಕೊನೆಯ ಕೆಲಸವೇನು?

ಬೆಂಗಳೂರು, ನವೆಂಬರ್ 26: ದೇಶದ ಬ್ರಾಡ್ ಗೇಜ್ ರೈಲ್ವೆ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಮಾಜಿ ಕೇಂದ್ರ ಸಚಿವ ಸಿಕೆ ಜಾಫರ್ ಷರೀಫ್ ಗ್ರಾಮೀಣಾಭಿವೃದ್ಧಿಯಂತಹ ವಿಚಾರಗಳಲ್ಲೂ ತೀವ್ರ ಆಸಕ್ತಿ ಹೊಂದಿದ್ದರು ಎಂಬುದು ಎಲ್ಲರಿಗೆ ಗೊತ್ತಿರುವ ವಿಚಾರ.

ಆದರೆ ಜಾಫರ್ ಷರೀಫ್ ಅವರು ದೇಶದ ಮಹತ್ವದ ಆತ್ಮಕತೆಗಳ ಪೈಕಿ ಒಂದಾದ ' ಇಂಡಿಯಾ ವಿನ್ಸ ಫ್ರೀಡಂ' ಉರ್ದು ಹಾಗೂ ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ನಿರತರಾಗಿದ್ದರು. ಜಾಫರ್ ಷರೀಫ್ ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಇದೇ ನವೆಂಬರ್ 28ಕ್ಕೆ ಇದೇ ಅರಮನೆ ಮೈದಾನದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಈ ಕೃತಿಯನ್ನು ಬಿಡುಗಡೆ ಮಾಡಬೇಕಿತ್ತು.

ಕಳೆದ ಹಲವು ತಿಂಗಳುಗಳಿಂದ ಜಾಫರ್ ಷರೀಫ್ ಅವರು ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ 'ಇಂಡಿಯಾ ವಿನ್ಸ್ ಫ್ರೀಡಂ' ಕೃತಿಯನ್ನು ತರ್ಜುಮೆಗೊಳಿಸುವಲ್ಲಿ ನಿರತರಾಗಿದ್ದರು.

Final work of Jaffer sharief remains incomplete

ಆ ಕೃತಿಯ ಭಾಷಾಂತರ ಪ್ರಕ್ರಿಯೆ ಪೂರ್ಣಗೊಂಡು ಇದೇ ನವೆಂಬರ್ 28ಕ್ಕೆ ಬಿಡುಗಡೆಗೊಳ್ಳಬೇಕಿತ್ತು, ಭಾರತ ಸ್ವಾತಂತ್ರ್ಯ ಹೋರಾಟದ ಹಲವು ಮಜಲುಗಳು ಹಾಗೂ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಲವಾರು ಸ್ವಾರಸ್ಯಕರ ಹಾಗೂ ಐತಿಹಾಸಿಕ ಘಟನೆಗಳನ್ನು ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದರು.

ಆ ಕೃತಿಯನ್ನು ಉರ್ದು ಹಾಗೂ ಕನ್ನಡಕ್ಕೆ ತರ್ಜುಮೆ ಮಾಡಲು ತೀವ್ರ ಆಸಕ್ತಿ ಹೊಂದಿದ್ದರು. ಆದರೆ ಅವರ ಅಂತಿಮ ಪ್ರಯತ್ನ ಕೈಗೂಡಲಿಲ್ಲ ಎಂಬುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+