Final E-Khata: ಇ - ಖಾತಾಗಾಗಿ ಬಿಬಿಎಂಪಿಯಿಂದ ಹೊಸ ಪೋರ್ಟಲ್ ಪರಿಚಯ!
ಬಿಬಿಎಂಪಿಯು ನಗರದಲ್ಲಿ ಆಸ್ತಿ ಮಾಲೀಕರ ಸಮಸ್ಯೆಗೆ ಸ್ಪಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಇ - ಖಾತಾ ನೀಡಲಾಗುತ್ತಿದ್ದು. ಈಗಾಗಲೇ ಹಲವು ಆಸ್ತಿದಾರರು ಇ - ಖಾತಾ ಪಡೆದುಕೊಂಡಿದ್ದಾರೆ. ಆದರೆ, ಇ -ಖಾತಾ ಪಡೆಯುವುದರಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ಸಾರ್ವಜನಿಕರು ಸರಳವಾಗಿ ಇ -ಖಾತಾ ಪಡೆಯುವುದಕ್ಕೆ ಬೆಂಗಳೂರು ಒನ್ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದರೂ, ಗೊಂದಲ ತಪ್ಪಿಲ್ಲ ಎಂದು ಕೆಲವು ಸಾರ್ವಜನಿಕರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಪೋರ್ಟಲ್ ಪರಿಚಯಿಸಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುತ್ತಿರುವ ಅಥವಾ ಆಗುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿ ಆಸ್ತಿಗಳಿಗೆ ಇ - ಖಾತಾ (ಆಸ್ತಿಗಳ ಡಿಜಿಟಲೀಕರಣಕ್ಕೆ) ಮುಂದಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 5 ಲಕ್ಷ ಆಸ್ತಿಗಳನ್ನು ಇ - ಖಾತಾ ಮಾಡಲಾಗುತ್ತಿದೆ. ಇ - ಖಾತಾಗೆ ಆದ್ಯತೆ ನೀಡುತ್ತಿರುವುದರ ಹಿಂದೆ ಎರಡು ಲೆಕ್ಕಾಚಾರ ಅಡಗಿದೆ.

ಮೊದಲನೆಯದಾಗಿ ಎಲ್ಲಾ ಆಸ್ತಿದಾರರಿಗೆ ಇ -ಖಾತಾ ಮಾಡಿಸಿಕೊಳ್ಳುವುದರಿಂದ ಆಸ್ತಿಯಲ್ಲಿ ಆಗುವ ಮೋಸವನ್ನು ತಪ್ಪಿಸಬಹುದು. ಅಲ್ಲದೇ ಬಿಬಿಎಂಪಿಗೆ ಆದಾಯ ಸಂಗ್ರಹವಾಗುವುದು ಸಹ ಹೆಚ್ಚಳವಾಗಲಿದೆ. ಬಿಬಿಎಂಪಿಯ ವಾರ್ಷಿಕ ಆದಾಯ ತೆರಿಗೆ ಸಂಗ್ರಹ ಸುಧಾರಿಸಲಿದೆ ಎನ್ನುವುದು ಮುಖ್ಯ ಕಾರಣವಾಗಿದೆ.
ಪಾಲಿಕೆಯಿಂದ ಹೊಸ ಇ - ಖಾತಾ: ಬಿಬಿಎಂಪಿಯು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು) ಇ - ಖಾತಾಗಾಗಿ ಹೊಸ ಪೋರ್ಟ್ ಪರಿಚಯಿಸಲು ಮುಂದಾಗಿದೆ. ಪಾಲಿಕೆಯ ವತಿಯಿಂದ ಇಷ್ಟರಲ್ಲೇ ಇ -ಖಾತಾ ಶುರುವಾಗಲಿದೆ. ಈ ಹೊಸ ಪೋರ್ಟ್‌ನಿಂದ ಆಸ್ತಿದಾರರಿಗೆ ಮಹತ್ವದ ಅನುಕೂಲ ಆಗಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿಯ ವರೆಗೆ ಬೆಂಗಳೂರಲ್ಲಿ ಆಸ್ತಿ ಹೊಂದಿದ್ದು, ಯಾವುದೇ ಖಾತೆ ಇಲ್ಲದೆ ಇರುವ ಆಸ್ತಿ ಮಾಲೀಕರಿಗೂ ಇದು ಅನುಕೂಲವಾಗಲಿದೆ. ಇಲ್ಲಿಯವರೆಗೆ ಯಾವುದೇ ಮಾದರಿಯ ಖಾತಾ ಇಲ್ಲದೆ ಇರುವವರೂ ಸಹ ಹೊಸ ಇ-ಖಾತಾವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಸ್ತಿ ತೆರಿಗೆ ಪಾವತಿಸದವರಿಗೆ ಸಂಕಷ್ಟ: ಬಿಬಿಎಂಪಿಯ ಈ ಹೊಸ ಕ್ರಮದಿಂದ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಸಂಕಷ್ಟ ಕಾದಿದೆ ಎಂದೂ ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಅಂದಾಜು 5 ಲಕ್ಷ ಆಸ್ತಿಗಳಿಗೆ ಖಾತಾ ನೀಡಿಲ್ಲ ಎನ್ನಲಾಗಿದೆ. ಇದೀಗ ಇ -ಖಾತಾವನ್ನು ನೀಡುವ ಮೂಲಕ ಈ ಎಲ್ಲಾ ಆಸ್ತಿದಾರರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.
ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವವರನ್ನು ಇ -ಖಾತಾದ ಮೂಲಕ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಸಲು ಬಿಬಿಎಂಪಿ ಮುಂದಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ 5 ಲಕ್ಷ ಸ್ವತ್ತುಗಳಿಗೆ ಖಾತಾ ಪಡೆದಿಲ್ಲ. ಕೆಲವು ನಿರ್ದಿಷ್ಟ ಆಸ್ತಿಗಳಿಗೂ ಕ್ರಯಪತ್ರ ಸಹ ಇಲ್ಲ. ತೆರಿಗೆಯನ್ನೂ ಕೂಡ ಪಾವತಿ ಮಾಡಿಲ್ಲ. ಇದರಲ್ಲಿ ಕೆಲವರು ನಿವೇಶನ (ಖಾಲಿ ಜಾಗಕ್ಕೆ)ಕ್ಕಷ್ಟೇ ಖಾತೆ ಪಡೆದಿದ್ದಾರೆ. ಆದರೆ, ಅದರಲ್ಲಿ ನಿರ್ಮಾಣ ಮಾಡಲಾಗಿರುವ ಫ್ಲ್ಯಾಟ್‌ಗಳಿಗೆ ಖಾತಾ ಮಾಡಿಸಿಕೊಂಡಿಲ್ಲ ಎನ್ನಲಾಗಿದೆ.
ಹೊಸ ಖಾತಾವನ್ನು ಪಡೆದುಕೊಳ್ಳುವವರು ನೋಂದಣಿ ಮಾಡಿಸಿಕೊಂಡ ದಿನದಿಂದ ತೆರಿಗೆ ಬಾಕಿಯನ್ನು ಪಾವತಿಸಬೇಕಾಗುತ್ತದೆ. ಈಗಾಗಲೇ ಖಾತಾ ಹೊಂದಿದ್ದರೆ, ಇದೀಗ ಪೋರ್ಟಲ್‌ನಲ್ಲಿ ಹೊಸ ಖಾತಾಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅಲ್ಲದೇ ಕೆಲವು ವಿಷಯಗಳ ಬಗ್ಗೆ ಸಾಕಷ್ಟು ಗೊಂದಲಗಳು ಸಹ ಇದ್ದು, ಈ ಎಲ್ಲಾ ಗೊಂದಲಗಳಿಗೂ ಹೊಸ ಮಾರ್ಗಸೂಚಿಯ ಮೂಲಕ ಪರಿಹಾರ ಕಂಡುಕೊಳ್ಳುವುದಾಗಿ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ರೀತಿಯ ಸಂಕೀರ್ಣ ಸಮಸ್ಯೆಗಳು ಸಾಕಷ್ಟಿವೆ. ಇಂತಹ ಗೊಂದಲ ಮತ್ತು ಸಮಯದ ನಷ್ಟವನ್ನು ತಪ್ಪಿಸಲು ಪ್ರತ್ಯೇಕ ಮಾರ್ಗಸೂಚಿಯನ್ನು 2-3 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಆಸ್ತಿ ಮಾಲೀಕರು ನ.30ರೊಳಗೆ ಬಾಕಿ ತೆರಿಗೆ ಪಾವತಿಸದರೆ ದಂಡ ಮತ್ತು ಬಡ್ಡಿ ಮನ್ನಾ ಆಗಲಿದೆ. ಒಂದು ವೇಲೆ ಬಾಕಿ ತೆರಿಗೆ ಪಾವತಿಸದಿದ್ದರೆ ಡಿ.1ರಿಂದ ಬಾಕಿ ತೆರಿಗೆ ಜೊತೆಗೆ ದುಬಾರಿ ದಂಡ ಮತ್ತು ಬಡ್ಡಿ ವಸೂಲಿ ಮಾಡಲಾಗುವುದು. ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರ ಹಾಕಲಾಗುವುದು. ಖಾತಾ ಹೊಂದಿಲ್ಲದ ಆಸ್ತಿಗಳ ಮಾಲೀಕರು ಈಗಲೇ ಎಚ್ಚೆತ್ತುಕೊಂಡು ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ದುಬಾರಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications