• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಟೆಕ್ಕಿಗಳು, ಕಾರಣ ಇಷ್ಟೇ

|

ಬೆಂಗಳೂರು, ಮೇ 28: ಓವರ್ ಟೇಕ್ ಮಾಡುವ ವಿಚಾರಕ್ಕೆ ನಡುರಸ್ತೆಯಲ್ಲೇ ಇಬ್ಬರು ಟೆಕ್ಕಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಅನೂಶ್ ಕಾರ್ತಿಕ್, ನಾಗಾರ್ಜುನ ರೆಡ್ಡಿ ನಡುವೆ ಹೊಡೆದಾಟ ನಡೆದಿದೆ.

ಮನೆಗೆ ಆಹ್ವಾನಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಟೆಕ್ಕಿ ಅರೆಸ್ಟ್

ಸಿವಿ ರಾಮನ್ ನಗರ ನಿವಾಸಿಯಾದ ಅನೂಶ್ ಕಾರ್ತಿಕ್ ಕೆಲಸ ಮುಗಿಸಿ ಮನೆಗೆ ಬರುವಾಗ ಹಿಂದೆಯೇ ಬಂದ ನಾಗಾರ್ಜುನ ರೆಡ್ಡಿ ಅನೂಶ್ ಕಾರನ್ನು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆಸಿದ್ದ ಅಲ್ಲಿಂದ ಜಗಳ ಆರಂಭವಾಗಿತ್ತು. ಇಬ್ಬರೂ ಕೂಡ ಪ್ರತಿಷ್ಠಿತ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ನಾಗಾರ್ಜುನ ರೆಡ್ಡಿ ಅವರು ಹೆಲ್ಮೆಟ್‌ನಿಂದ ಅನೂಶ್ ಅವರ ಕಾರಿನ ಗಾಜು ಒಡೆದಿದ್ದಾರೆ, ಬಳಿಕ ಕೈಕೈ ಮಿಲಾಯಿಸಿದ್ದಾರೆ. ಓವರ್ ಟೇಕ್ ಮಾಡುವ ಭರದಲ್ಲಿ ರೆಡ್ಡಿಯವರೇ ಎಡ ಭಾಗದಿಂದ ಹೊಡೆದು ಕೆಳಗೆ ಬಿದ್ದಿದ್ದಾರೆ ಎಂದು ಆರೋಪಿಸಿದ್ದಾರೆ, ಬಳಿಕ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಅನೂಶ್ ದೂರು ದಾಖಲಿಸಿದ್ದಾರೆ, ವಿಚಾರಣೆ ನಡೆಯುತ್ತಿದೆ.

English summary
Fight between two techies in middle of the road in Bengaluru, finally they go to police station and complained against each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X