ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಿ ಸೂಚ್ಯಂಕ ಏರಿಕೆಯಿಂದ ಚರ್ಮ ಸಂಬಂಧಿ ಕ್ಯಾನ್ಸರ್ ಹೆಚ್ಚಳ: ಡಾ. ಯು.ಎಸ್. ವಿಶಾಲ್ ರಾವ್

|
Google Oneindia Kannada News

ಬೆಂಗಳೂರು, ಮೇ. 07: ಎಚ್ಚರ. ಭಾರತದ ಯಾವ ಜಾಗದಲ್ಲೂ ಸೂರ್ಯನಿಗೆ ಮುಖ ತೋರಿಸಿ ಓಡಾಡುವಂತಿಲ್ಲ. ಭವಿಷ್ಯದಲ್ಲಿ ಎಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡಬೇಕು. ಇಲ್ಲವೇ ಮುಖಕ್ಕೆ ಕ್ರೀಮ್ ಹಚ್ಚಿಕೊಂಡೇ ಮನೆಯಿಂದ ಹೊರಗೆ ಕಾಲಿಡಬೇಕು!

ಹವಾಮಾನ ಬದಲಾವಣೆಯಿಂದಾಗಿ ಸೂರ್ಯನಿಂದ ಹೊರ ಬರುವ ನೇರಳಾತೀತ ಕಿರಣಗಳ ಸೂಚ್ಯಂಕ ಗರಿಷ್ಠ ಮಟ್ಟ ಪರಕಾಷ್ಠೆ ತಲುಪಿದೆ. ಭಾರತದಲ್ಲಿ ಯುವಿ ಸೂಚ್ಯಂಕ ಗರಿಷ್ಠ ಮಿತಿ ಶೇ. 11 ತಲುಪಿ ಆಗಿದೆ. ಹವಾಮಾನ ಬದಲಾವಣೆಯಿಂದಾಗಿ ಈ ಅಪಾಯಕಾರಿ ಹಂತ ತಲುಪಿದ್ದು, ಭವಿಷ್ಯದಲ್ಲಿ ಜನರು ಚರ್ಮ ವ್ಯಾದಿ, ನಿಶಕ್ತಿ ಹಾಗೂ ಚರ್ಮ ಸಂಬಂಧಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಅಪಾಯ ಎದುರಾಗಿದೆ.

ಈ ಆತಂಕಕಾರಿ ಸಂಗತಿಯನ್ನು ಎಚ್‌ಸಿಜಿ ಸಂಶೋಧನಾ ಕೇಂದ್ರದ ಡಾ. ಯು.ಎಸ್. ವಿಶಾಲ್ ರಾವ್ ತಿಳಿಸಿದ್ದಾರೆ. ಈ ಕುರಿತು ಅವರು 'ಒನ್‌ಇಂಡಿಯಾ ಕನ್ನಡ'ಕ್ಕೆ ನೀಡಿರುವ ವಿವರ ಇಲ್ಲಿದೆ.

Fever to Earth: Globally UV Index appears to be on rise

ಹವಾಮಾನ ಬದಲಾವಣೆಯಿಂದ ನದಿ ಪಾತ್ರಗಳು ಒಣಗುತ್ತಿವೆ. ಬಿಸಿಲಿನ ತಾಪ ಏರಿಕೆಯಾಗಿದೆ. ನಿಜ. ಮಾತ್ರವಲ್ಲ, ಯುವಿ ಇಂಡೆಕ್ಸ್ ಹೆಚ್ಚಳದಿಂದ ಜನರ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಕರ್ನಾಟಕ ಸೇರಿದಂತೆ ಭಾರತದಲ್ಲಿ ಯುವಿ ಕಿರಣಗಳ ಸೂಚ್ಯಂಕ ಗರಿಷ್ಠ ಮಟ್ಟ ತಲುಪಿ ಆಗಿದೆ. ಇದರಿಂದ ಚರ್ಮ ಸಂಬಂಧಿ ಕ್ಯಾನ್ಸರ್, ನಿಶಕ್ತಿ ಮತ್ತಿತರ ಕಾಯಿಲೆಗಳಿಗೆ ಜನರು ಅನಿವಾರ್ಯವಾಗಿ ತುತ್ತಾಗಬೇಕಾದ ಅಪಾಯ ಎದುರಾಗಿದೆ ಎಂದು ಡಾ. ಯು.ಎಸ್. ವಿಶಾಲ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಯುವಿ ಸೂಚ್ಯಂಕ ಎಷ್ಟಿರಬೇಕು:

ಯುವಿ ಸೂಚ್ಯಂಕದ ವಿವರ : ಯುವಿ ಸೂಚ್ಯಂಕ ಶೇ. 2 ಕ್ಕಿಂತಲೂ ಕಡಿಮೆ ಇದ್ದರೆ ತುಂಬಾ ಒಳ್ಳೆಯದು. ಯುವಿ ಇಂಡೆಕ್ಸ್ 3 ರಿಂದ 5 ಇದ್ದರೆ ಎಚ್ಚರಿಕೆ ವಹಿಸಬೇಕು. ಶೇ. 6 ರಿಂದ 7 ಕ್ಕೆ ಏರಿಕೆ ಅತಿ ಹೆಚ್ಚು ಆಯಿತು. ಶೇ. 8 ರಿಂದ 10 ಸಹಿಸಲಾಗದಷ್ಟು ಹೆಚ್ಚಳ, ಯುವಿ ಸೂಚ್ಯಂಕ 11 ತಲುಪಿದಲ್ಲಿ, ಅಪಾಯದ ಪರಕಾಷ್ಠೆ ತಲುಪಿದಂತೆ ಎನ್ನುತ್ತದೆ ಸಂಶೋಧನಾ ಅಧ್ಯಯನಗಳು.

Fever to Earth: Globally UV Index appears to be on rise

ಭಾರತದ ನಗರಗಳಲ್ಲಿ ಯುವಿ ಸೂಚ್ಯಂಕ:

ಹವಾಮಾನ ಬದಲಾವಣೆಯಿಂದಾಗಿ ಭಾರತದಲ್ಲಿ ಯುವಿ ಸೂಚ್ಯಂಕ ಪ್ರಮಾಣ ಪರಕಾಷ್ಠೆ ತಲುಪಿದೆ. ಚೆನ್ನೈನಲ್ಲಿ ಯುವಿ ಇಂಡೆಕ್ಸ್ 12, ಕೊಚ್ಚಿ 10, ಚಿತ್ರದುರ್ಗ ( ಕರ್ನಾಟಕ) 09, ಪಣಜಿ 09, ಹೈದರಬಾದ್ 07, ಮುಂಬಯಿ 08, ನವದೆಹಲಿ 12, ಅಹಮದಾಬಾದ್ 12, ಭೋಪಾಲ್ 12 ರಷ್ಟು ದಾಖಲಾಗಿದೆ. ಇದು ಮೇ. 1 2022 ರಂದು ದಾಖಲಾಗಿರುವ ಅಂಶ.

Fever to Earth: Globally UV Index appears to be on rise

"ಹವಾಮಾನ ಬದಲಾವಣೆಯಿಂದ ಯುವಿ ರೇಸ್ ಪ್ರಮಾಣ ಅಪಾಯದ ಪರಕಾಷ್ಠೆ ತಲುಪಿ ಆಗಿದೆ .ಇದರಿಂದ ಜನರು ಯಾವುದೇ ರಕ್ಷಣೇ ಇಲ್ಲದೇ ಬಿಸಿಲಿಗೆ ಹೋಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಗತಿಕವಾಗಿ ಯುವಿ ಇಂಡೆಕ್ಸ್ ಹೆಚ್ಚುತ್ತಿದೆ. ಯೂರೋಪ್, ಉತ್ತರ ಅಮೆರಿಕಾ, ಆಫ್ರಿಕಾ, ಏಷಿಯಾ ರಾಷ್ಟ್ರಗಳಲ್ಲಿ ಯುವಿ ಸೂಚ್ಯಂಕ ಹೆಚ್ಚಾಗುತ್ತಿರುವುದು ಕಾಣುತ್ತಿದೆ. ಭೂಮಿಗೆ ಜ್ವರದಿಂದ ಬಳಲುವಂತಾಗಿದೆ. ಇದನ್ನು ಸರಿಪಡಿಸದಿದ್ದರೆ ಮುಂದಿನ ಪೀಳಿಗೆ ಹೊರಗೆ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಯುವಿ ರೇಸ್ ಸೂಚ್ಯಂಕ ಈ ಪರಿ ಹೆಚ್ಚಾಗಿರುವುದರಿಂದ ಚರ್ಮ ಸಂಬಂಧಿ ಕ್ಯಾನ್ಸರ್ ಮತ್ತು ಇತರೆ ರೋಗಗಳು ಹೆಚ್ಚಾಗುತ್ತವೆ," ಎಂದು ಡಾ. ಯು.ಎಸ್. ವಿಶಾಲ್ ರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

English summary
Global warming: UV Index Raise will causes to Skin Cancer says Dr. U.S. Vishal Rao. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X