ಗುಜರಾತ್ 'ಕೈ' ಶಾಸಕರ ಹೈಜಾಕ್; ಬಿಡದಿ ಬಳಿಯ ರೆಸಾರ್ಟ್ ನಲ್ಲಿ ವಾಸ್ತವ್ಯ

ಗುಜರಾತ್ ನ ಕಾಂಗ್ರೆಸ್ ಶಾಸಕರು ಬಿಡದಿ ಬಳಿಯ ಈಗಲ್ ಟೌನ್ ರೆಸಾರ್ಟ್ ಗೆ ರವಾನೆ. ಗುಜರಾತ್ ನಲ್ಲಿ ಆಪರೇಷನ್ ಕಮಲ ಭೀತಿ ಆವರಿಸಿರುವುದರಿಂದ ಈ ಕ್ರಮ ಕೈಗೊಂಡ ಹೈಕಮಾಂಡ್.

ಬೆಂಗಳೂರು, ಜುಲೈ 28: ಗುಜರಾತ್ ನಲ್ಲಿ ಐವರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿರುವ ಹಿನ್ನೆಲೆಯಲ್ಲಿ ಅಲ್ಲಿ 'ಆಪರೇಷನ್ ಕಮಲ' ತಂತ್ರಗಾರಿಕೆಗೆ ಮರುಳಾಗುವ ಭೀತಿ, ಕಾಂಗ್ರೆಸ್ ಹೈಕಮಾಂಡ್ ಗೆ ಆವರಿಸಿದೆ.

ಹಾಗಾಗಿ, ಗುಜರಾತ್ ನಲ್ಲಿರುವ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡಲು ಉದ್ದೇಶಿಸಿರುವ ಕಾಂಗ್ರೆಸ್ ಹೈಕಮಾಂಡ್, ಅವರೆನ್ನೆಲ್ಲಾ ಕರ್ನಾಟಕಕ್ಕೆ ಹೋಗುವಂತೆ ಆದೇಶಿಸಿದೆ.

Fear of horse trading in Gujarat Congress MLAs coming to eagle town resort near Bidadi

ಹಾಗಾಗಿ, ಎಲ್ಲಾ 44 ಕಾಂಗ್ರೆಸ್ ಶಾಸಕರು, ಬೆಂಗಳೂರಿಗೆ ಇಂದು (ಜುಲೈ 28) ಮಧ್ಯರಾತ್ರಿ ಸುಮಾರು 1:30ರ ಸುಮಾರಿಗೆ ಆಗಮಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ದೂರದ ಗುಜರಾತ್ ನಿಂದ ಆಗಮಿಸಲಿರುವ ಎಲ್ಲಾ ಶಾಸಕರಿಗೆ ಬಿಡದಿ ಬಳಿಯ ಈಗಲ್ ಟೌನ್ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಂದಹಾಗೆ, ಈ ಎಲ್ಲಾ ಶಾಸಕರ ವ್ಯಾಸ್ತವ್ಯದ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+