ಬೆಂಗಳೂರು ಟ್ರಾಫಿಕ್ ಪೊಲೀಸ್ ಫೇಸ್‌ಬುಕ್ ಪೇಜ್‌ಗೆ ಪ್ರಶಸ್ತಿ
Recommended Video

ಬೆಂಗಳೂರು, ಜು.25: ಬೆಂಗಳೂರು ಸಂಚಾರ ಪೊಲೀಸರು ನಿರ್ವಹಿಸುತ್ತಿರುವ ಫೇಸ್‌ಬುಕ್ ಪೇಜ್‌ಗೆ ದೇಶದ ಟಾಪ್ 3ರ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು ಪ್ರಶಸ್ತಿಗೆ ಭಾಜನವಾಗಿದೆ. ಈ ಕುರಿತು ಟ್ರಾಫಿಕ್ ಪೊಲೀಸರಿಗೆ ಫೇಸ್‌ಬುಕ್ ತಂಡ ಶುಭಾಶಯ ತಿಳಿಸಿದೆ.
2011ರಲ್ಲಿ ಇಬ್ಬರು ಹೆಚ್ಚುವರಿ ಟ್ರಾಪಿಕ್ ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಹಾಗೂ ಎಂ.ಎ. ಸಲೀಂ ಫೇಸ್ ಬುಕ್ ಪೇಜ್ ತೆರೆಯಲು ನಿರ್ಧರಿಸಿದರು. ಬಳಿಕ ಎಫ್‌ಬಿ ಪೇಜ್ ತೆರೆದೇ ಬಿಟ್ಟರು. ಮೊದಲ ಕೆಲವು ತಿಂಗಳುಗಳು ಈ ಪೇಜ್‌ನಲ್ಲಿ ಕೇವಲ ಚರ್ಚೆಗಾಗಿ ಮೀಸಲಿಟ್ಟಿದ್ದರು.ಬಳಿಕ ದೂರುಗಳು ಬರಲು ಆರಂಭವಾದಮೇಲೆ ಸಾರ್ವಜನಿಕರಿಗಾಗಿಯೇ ಮೀಸಲಿಟ್ಟರು. ದರೋಡೆ, ಮಹಿಳೆಯರ ಬಳಿ ಅಸಭ್ಯ ವರ್ತನೆ ಹೀಗೆ ಇಂತಹ ದೂರುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.
ದೇಶದ ವಿವಿಧ ರಾಜ್ಯಗಳ ಸರ್ಕಾರಿ ಇಲಾಖೆಗಳು, ವಿಭಾಗಗಳು, ರಾಜಕೀಯ ಪಕ್ಷಗಳ ಕುರಿತು ಫೇಸ್‌ಬುಕ್ ಇತ್ತೀಚೆಗೆ ಡೇಟಾ ಬಿಡುಗಡೆ ಮಾಡಿದೆ. 2017ರ ಜ.1ರಿಂದ ಡಿ.31ರವರೆಗೆ ಅವಧಿಯಲ್ಲಿ ಫೇಸ್ ಬುಕ್ ಪೇಜ್‌ಗಳ ಜನಪರಿಯತೆಯನ್ನು ಪರಿಶೀಲಿಸಿದೆ. ಜತೆಗೆ ಸಂವಹನ, ಅದಕ್ಕೆ ಬರುವ ಪ್ರತಿಕ್ರಿಯೆಗಳು, ಶೇರ್ ಮತ್ತು ರೀಚ್ ಕೂಡ ಮೌಲ್ಯಮಾಪನ ಮಾಡಲಾಗಿದೆ.
ಪೊಲೀಸ್ ಪೇಜ್‌ಗಳಲ್ಲಿ ಎಬಂಗಳೂರು ಟ್ರಾಪೀಕ್ =ಪೊಲೀಸರ ಪೇಜ್ ನಂ.1 ಸ್ಥಾನ ಪಡೆದಿದೆ. ಸರ್ಕಾರಿ ಸಂಸ್ಥೆಯ ಪೇಜ್‌ಗಳಲ್ಲಿ ಟಾಪ್ ಮೂರರಲ್ಲಿ ಗುರುತಿಸಿಕೊಂಡಿದೆ ಎಂದು ಫೇಸ್‌ಬುಕ್ ತಿಳಿಸಿದೆ.

4.90 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿರುವ ಟ್ರಾಫಿಕ್ ಪೊಲೀಸ್ ಪೇಜ್ ನಲ್ಲಿ ಸಾಕಷ್ಟು ಜನ ಪ್ರತಿದಿನ ದೂರು ನೀಡುತ್ತಿದ್ದಾರೆ. ಪೇಜ್ ನಿರ್ವಹಿಸಲೆಂದೇ ಇರುವ ತಂಡವು ದೂರುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸುತ್ತಿದೆ. ಈ ಫೇಸ್‌ಬುಕ್ ಪೇಜ್ ಸಾರ್ವಜನಿಕರು ಹಾಗೂ ಪೊಲೀಸರ ನಡುವಿನ ಸೇತುವೆಯಂತೆ ಕೆಲಸ ನಿರ್ವಹಿಸುತ್ತಿದೆ.












Click it and Unblock the Notifications