ಫಾದರ್ಸ್ ಡೇ ಹಿ(ಮಿ)ಷ್ಟರಿ ಬಹಿರಂಗ
ಎಲ್ರೂ ಇವತ್ತು ಫಾದರ್ಸ್ ಡೇ ಆಚರಿಸ್ತಾ ಇದೀವಲ್ವ ಇದರ ಹಿಂದೆ ಒಂದು ಇಂಟೆರೆಸ್ಟಿಂಗ್ ಸ್ಟೋರಿ ಐತೆ. ಮೊದ್ಲು ಮದರ್ಸ್ ಡೇ ಹುಟ್ಕೊಂತು. ಎಲ್ರೂ ತಮ್ಮ ತಮ್ಮ ತಾಯಿಗೆ ಶುಭಾಶಯಗಳನ್ನ ತಿಳಿಸೋರು, ಅವತ್ತಿನ ದಿನ ತಾಯಿಗೆ ಗಿಫ್ಟನ್ನೆಲ್ಲ ಕೊಡೋರು ಆದ್ರೆ ಪಕ್ಕದಲ್ಲೇ ಇರ್ತಾ ಇದ್ದ ಅಪ್ಪನ್ನ ಕ್ಯಾರೇ ಅಂತಾ ಇರ್ಲಿಲ್ಲ. ಇದರಿಂದ ಎಲ್ಲಾ ಅಪ್ಪಗೋಳಿಗೆ ಒಳಗೊಳಗೆ ಬೇಜಾರಾಗೋದು.
ಮಕ್ಳು ಬರೀ ತನ್ನ ತಾಯಿಗೆ ಮಾತ್ರ ವಿಶ್ ಮಾಡ್ತವೆ, ಗಿಫ್ಟ್ ಕೊಡ್ತವೆ ಆದ್ರೆ ನಮ್ಗೆ ಅಂತ ಯಾವ ದಿನಾನುವೆ ಇಲ್ವಲ್ಲಪ್ಪ ದ್ಯಾವ್ರೇ ಅಂತ ಶ್ಯಾನೆ ಕೊರಗೋರು. ಅದಕ್ಕಾಗಿ ಕೆಲವ್ರು ಸೇರ್ಕಂಡು ಅಪ್ಪನೇ ಇಲ್ಲ ಅಂದಮ್ಯಾಕೆ ಮದರ್ಸ್ ಡೇ ಹೆಂಗಾದತು. ನಮ್ಗೂ ಒಂದು ಡೇನ ಮಡ್ಗಬೇಕು ಅಂತ ಒಸಿ ಓಡಾಡಿದ್ರಂತೆ. ಆದ್ರೆ ಮದರ್ಸ್ ಡೇ ಗೆ ಇರೋ ಖದರ್ರು ಫಾದರ್ಸ್ ಡೇಗೆ ಬರ್ಲೇ ಇಲ್ವಂತೆ.
ಅಂತದ್ರಾಗೆ ಒಬ್ಬಾಯಮ್ಮ ಸೊನೊರಾ ದೊಡ್ ಅನ್ನೋಳು ತನ್ನಪ್ಪ ವಿಲಿಯಮ್ ಜಾಕ್ಸನ್ ನ ಹುಟ್ಟು ಹಬ್ಬವನ್ನ ಫಾದರ್ಸ್ ಡೇ ಅಂತ ಆಚರ್ಸುವಾ ಅಂತ ವೈ.ಎಮ್.ಸಿ.ಎ (ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸ್ಸೋಸೊಯೇಶನ್) ಗೆ ತಿಳಿಸಿದ್ಳಂತೆ ಅದಕ್ಕೆ ವೈ.ಎಂ.ಸಿ.ಎ ನೋರು ಯಾಕಮ್ಮ ತಂಗಿ ನಿನ್ನ ಅಪ್ಪುನ್ ಹುಟ್ಟಿದ್ ದಿನಾನೆ ಯಾಕೆ ಫಾದರ್ಸ್ ಡೇ ಅಂತ ಮಡ್ಗಬೇಕು ಅಂತ ಕೇಳಿದ್ದಕ್ಕೆ...

ಇಲ್ಲ ಕಣ್ರೀ "ನಾವು ಆರುನ್ ಜನ ಮಕ್ಳು ನನ್ನ ಅಪ್ಪ ಅಮ್ಮಂಗೆ ಅಮ್ಮ ಕೊನೇವ್ಳ ಡೆಲಿವರೀಲಿ ತೀರ್ಕೊಂಬಿಟ್ಳು ಉಳಿದೋರ ಅಪ್ಪನ್ ಥರಾ ನನ್ನ ಅಪ್ಪ ಆಗಿದ್ರೆ ಇನ್ನೊಂದ್ ಮಾಡ್ಕೊಂಡ್ ನಮ್ಮನ್ನ ನಡೂ ನೀರಾಗ ಸಾಯೋಕ್ ಬಿಡ್ತಾ ಇದ್ರು ಆದ್ರೆ ನನ್ನ ಅಪ್ಪ ನಮ್ಮನ್ನ ಸಾಕಿ ಸಲವ್ದ ಇನ್ನೊಂದು ಮದುವಿ ಮಾಡ್ಕೊಂಡು ಡೂಪ್ಲಿಕೇಟ್ ಅಮ್ಮನ್ನ ಕರ್ಕೊಂಡು ಬರ್ಲಿಲ್ಲ ಅದೂ ಬ್ಯಾರೆ ಮೊದಲ್ನೆ ಮಹಾ ಯುದ್ಧದಾಗೆ ಸೇವೆ ಬೇರೆ ಸಲ್ಲಿಸಿ ಬಂದವ್ನೆ ಅದಕ್ಕೆ ಜೂನ್ ೫ ನೇ ತಾರಿಖನ್ನ ಫಾದರ್ಸ್ ಡೇ ಮಾಡುವ" ಅಂತ ಅಂದ್ಲು.
ಅದಕ್ಕೆ ವೈ.ಎಮ್.ಸಿ.ಎ ನೋರು ಇಲ್ಲವ್ವ ತಂಗಿ ಅದಕ್ಕೆಲ್ಲ ಒಸಿ ಟೇಮ್ ಬೇಕಾಗ್ತದೆ ಬೇಕಾದ್ರೆ ಜೂನ್ ಮೂರನೇ ಭಾನುವಾರನ ಫಾದರ್ಸ್ ಡೇ ಮಾಡುವ ಅಂದ್ರಂತೆ.[ಅಪ್ಪನಿಗೆ ಬೇಕಿರುವುದು ಒಂದು ಹಿಡಿ ಪ್ರೀತಿಯಷ್ಟೆ!]
ಇವ್ಳೂ ಫುಲ್ ಖುಶಿಯಿಂದ ಒಪ್ಕೊಂಡ್ಳು ಜೋಶಿನಿಂದ ಪ್ರಚಾರ ಮಾಡೋಕ್ ಶುರುವಚ್ಕಂಡ್ಳು. ಆದ್ರೆ ಆರ್ಟ್ ಇನ್ಸ್ಟಿಟ್ಯೂಟ್ ಆಪ್ ಚಿಕಾಗೋ'ನವ್ರು, ನೋಡಮ್ಮಾ ಹುಡುಗಿ ಫಾದರ್ಸ್ ಡೇ ಪ್ರಚಾರದಾಗೆ ನಿನ್ನ ಓದು ಹಾಳು ಮಾಡ್ಕೊಂತಾ ಇದೀಯೇ ಅಂತ ಎಚ್ಚರ ಕೊಟ್ಟಿದ್ಕೆ "ನೀವು ಹೇಳೋದೇ ಸರಿ ಸ್ವಾಮಿ" ಅಂತ ಸ್ವಲ್ಪ ದಿನ ಪ್ರಚಾರ ನಿಲ್ಲಿಸ್ಬಿಟ್ಳು.
ಓದೂ ಮುಗೀತು, ಥತ್ತೇರಿಕೆ ಫಾದರ್ಸ್ ಡೇ ಅಲ್ಲೆ ಬಿಟ್ಬಿಟ್ನೆಲ್ಲಾ ಅಂದ್ಕಂಡು ಫುಲ್ ಡೆಡಿಕೇಶನ್ನಿನಿಂದ ತೊಡಗಿಸ್ಕಂಡ್ಳು. ಅಮೇರಿಕಾದಲ್ಲಿ ಇಂತ ಕೆಲಸ ಶುರುವಚ್ಚಿಕೊಂಡ್ರೆ ಇನ್ನು ಕೇಳ್ಬೇಕಾ ಟೈ ಕಂಪನಿಯೋರು, ತಂಬಾಕಿನೋರು, ಸೂಟ್ ಕಂಪನಿಯೋರು, ಗ್ರೀಟಿಂಗ್ಸ್ ಮಾರೋ ಕಂಪನಿಯೋರು ಭರ್ಜರಿ ಸಪೋರ್ಟ್ ಕೊಟ್ಟು ಪ್ರಚಾರ ಮಾಡಿದ್ರು, ಇದ್ರಿಂದ ಅವರ್ಗೂ ಶ್ಯಾನೆ ಲಾಭ ಅಲ್ವಾ. ಇದೇ ದಿವಸ ಏನಿಲ್ಲ ಅಂದ್ರು1 ಬಿಲಿಯನ್ನಿನ ವ್ಯವಹಾರ ಆಗುತ್ತಂತೆ ಈ ಕಂಪನಿಗಳಿಗೆ.
ಇದೆಲ್ಲಾ ಆದಮ್ಯಾಕೆ ಅಮೇರಿಕಾ ಪ್ರೆಸಿಡೆಂಟು ಫಾದರ್ಸ್ ಡೇ ನ ಅಧಿಕೃತವಾಗಿ ಘೋಷಿಸಿ ಜೂನ್ ಮೂರನೇ ಸಂಡೇ ಫಾದರ್ಸ್ ಡೇ ಅಂತ ಫಿಕ್ಸ್ ಆಯ್ತು. ಆಮೇಲೆ ಭಾರತದಂತ ದೇಶಗಳಿಗೂ ಇದು ಹಬ್ಬಿ ಕೊಳ್ತು. ಇಂತಿಪ್ಪ ಹಿಶ್ಟರಿ ಇಸ್ಟೊತ್ತಿನ ತನಕಾ ತಡ್ಕೊಂಡ ನಿಮ್ಗೂನೂವೆ ಮತ್ತೆ ನಂಗೂನೂವೆ "ಯಾಪಿ ಫಾದರ್ಸ್ ಡೇ".
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications